ಬೆಂಗಳೂರು :  ನಗರದ ಮದರ್‌ ಥೆರೆಸಾ ರಸ್ತೆಯಲ್ಲಿ ಬಿಬಿಎಂಪಿ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಬಿಬಿಎಂಪಿ ಮನವಿ ಮಾಡಿದೆ.

ಮದರ್‌ ಥೇರೆಸಾ ರಸ್ತೆಯ ಜಿಕೆಟಿ ರಸ್ತೆಯಿಂದ ಬಜಾರ್‌ ಸ್ಟ್ರೀಟ್‌ವರೆಗೆ ಒಟ್ಟು 650 ಮೀಟರ್‌ ಉದ್ದವಿದ್ದ ರಸ್ತೆಯನ್ನು ವೈಟ್‌ ಟಾಪಿಂಗ್‌ ರಸ್ತೆಯಾಗಿ ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ರೂಪಿಸಿದೆ. 

45 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ತಿಳಿಸಿದೆ. ವಾಹನ ಸವಾರರ ಸಂಚಾರಕ್ಕೆ ಅಗುವ ಅನಾನುಕೂಲವನ್ನು ತಪ್ಪಿಸಲು ಪಾಲಿಕೆ ಪರ್ಯಾಯ ಮಾರ್ಗ ಕಲ್ಪಿಸಿದ್ದು, ಮಧರ್‌ ಥೆರೆಸಾ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾಗಿ ಲೋವರ್‌ ಅಗರಂ ರಸ್ತೆಯಿಂದ ವಿಕ್ಟೋರಿಯ ರಸ್ತೆ ಮುಖಾಂತರ ಜನರಲ್‌ ತಿಮ್ಮಯ ರಸ್ತೆಯವರೆಗೆ ತಲುಪುವಂತೆ ಸೂಚಿಸಲಾಗಿದೆ.