ಹಾವೇರಿ(ಡಿ.09): ಜಿಲ್ಲೆಯ ಹಾನ​ಗಲ್ಲ ತಾಲೂ​ಕಿನ ಕಾಡ​ಶೆ​ಟ್ಟಿ​ಹಳ್ಳಿ ಗ್ರಾಮದ ಬಳಿ ತಾಯಿ, ಮಗ ಬೈಕ್‌ ಸಮೇತ ಧಮಾ​ರ್‍ ನದಿಗೆ ಬಿದ್ದ ಘಟನೆ ಮಂಗ​ಳ​ವಾರ ರಾತ್ರಿ ನಡೆ​ದಿ​ದೆ. ಮಗ ಬಸವರಾಜ ಕುಂದೂರ (22) ಮತ್ತು ತಾಯಿ ಚನ್ನವ್ವ ಕುಂದೂರ ​(45​) ನೀರು ಪಾಲಾದವರು.

ಕಂಚಿನೆಗಳೂರು ಗ್ರಾಮದಿಂದ ಕಾಡಶೆಟ್ಟಿಹಳ್ಳಿ ಗ್ರಾಮದತ್ತ ತೆರಳುತ್ತಿದ್ದ ವೇಳೆ ಧರ್ಮಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ನಲ್ಲಿ ಬೈಕ್‌ ಬಿದ್ದಿ​ದೆ.

ಹಿರಿಯ ಪತ್ರಕರ್ತ ಹುಗಾರ ನಿಧನ

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರ ಭೇಟಿ ನೀಡಿ​ದ್ದು, ನೀರು ಪಾಲಾದವರಿಗೆ ಶೋಧಕಾರ್ಯ ಮುಂದು​ವ​ರಿ​ದೆ. ನದಿ ನೀರಿನಲ್ಲಿ ಬೈಕ್‌ ಪತ್ತೆ​ಯಾ​ಗಿ​ದೆ. ಆಡೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖ​ಲಾ​ಗಿ​ದೆ.