ಶಿರಸಿ [ಡಿ.01]: ಮಹಿಳೆಯೊಬ್ಬರು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದಲ್ಲಿ ಅಪರೂಪದ ಘಟನೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. 

ಈ ನಾಲ್ಕರಲ್ಲಿ ಒಂದು ಮಗು ಜನಿಸುವಾಗಲೇ ಮೃತಪಟ್ಟರೆ, ಉಳಿದ ಮೂರು ಶಿಶುಗಳು ಆಸ್ಪತ್ರೆ ಸಿಬ್ಬಂದಿ ಆರೈಕೆಯಲ್ಲಿ ಕ್ಷೇಮವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. 

ಎಂಟು ತಿಂಗಳ ಗರ್ಭಿಣಿಯಾಗಿದ್ದ 28 ವರ್ಷ ವಯಸ್ಸಿನ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಸಿಸೇರಿಯನ್‌ ನಡೆಸಿ ಹೆರಿಗೆ ಮಾಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆರಿಗೆ ವೇಳೆ ಒಂದು ಮಗು ಮೃತಪಟ್ಟಿದ್ದರೆ, ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದೆ. ಒಂದೇ ಗರ್ಭದಲ್ಲಿ ನಾಲ್ಕು ಶಿಶುಗಳಿರುವುದು ಅತ್ಯಪರೂಪ. ತಾಯಿ-ಮಗು ಕ್ಷೇಮವಾಗಿದ್ದಾರೆ ಎಂದು ಶಸ್ತ್ರಚಿಕಿತ್ಸೆ ಹೆರಿಗೆ ನಡೆಸಿದ ಇಲ್ಲಿನ ಕೌಮುದಿ ನರ್ಸಿಂಗ್‌ ಹೋಂನ ಡಾ. ಜಿ.ಎಂ. ಹೆಗಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.