* ಭಾಗ್ಯನಗರದಿಂದ ಕೊಪ್ಪಳಕ್ಕೆ ನಡೆದು ಮಕ್ಕಳ ಆಸ್ಪತ್ರೆಗೆ ಬರುತ್ತಿರುವ ಫೋಟೋ ವೈರಲ್‌* ಸೆಮಿ ಲಾಕ್‌ಡೌನ್‌ನಿಂದಾಗ ಸಂಚಾರ ಸಂಪೂರ್ಣ ಬಂದ್‌ * ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್‌ ತೆರಳಿದ ಬಾಣಂತಿ 

ಕೊಪ್ಪಳ(ಮೇ.12): ನಾಲ್ಕು ತಿಂಗಳ ಮಗುವಿನ ಚಿಕಿತ್ಸೆಗಾಗಿ ಸಮೀಪದ ಭಾಗ್ಯನಗರದಿಂದ ನಾಲ್ಕೂವರೆ ಕಿಮೀ ಕಾಲ್ನಡಿಗೆಯಲ್ಲಿ ಕೊಪ್ಪಳಕ್ಕೆ ಆಗಮಿಸಿದ ತಾಯಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್‌ ತೆರಳಿದ್ದಾಳೆ.

ಸೆಮಿ ಲಾಕ್‌ಡೌನ್‌ನಿಂದಾಗ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಹೀಗಾಗಿ, ನಡೆದುಕೊಂಡೇ ಬಂದ ಅವರು ಮಗುವಿಗೆ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. 

ಗಂಗಾವತಿ: ಬೆಡ್‌ ಸಿಗದೆ ಆಸ್ಪತ್ರೆ ದ್ವಾರ​ದಲ್ಲೇ ಸೋಂಕಿತ ಸಾವು

ನಾಲ್ಕು ತಿಂಗಳ ಹಸುಗೂಸು ಎತ್ತಿಕೊಂಡು ಹೀಗೆ ಬಂದಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಚಿಕಿತ್ಸೆಗೆ ಬರುವುದಕ್ಕಾದರೂ ವಾಹನದ ವ್ಯವಸ್ಥೆ ಇರಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.