ಬಾವಿಗೆ ಬಿದ್ದ ಮಗುವನ್ನು ಕಾಪಾಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಸಾವು| ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದಲ್ಲಿ ನಡೆದ ದುರ್ಘಟನೆ| ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ವಿಜಯಪುರ(ಏ.25): ಬಾವಿಗೆ ಬಿದ್ದ ಮಗುವನ್ನು ಕಾಪಾಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದ ಹೊರವಲಯದ ತೊಟದ ವಸ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೃತರನ್ನ ಆಸಂಗಿಹಾಳ ಗ್ರಾಮದ ಕವಿತಾ ವಿಠ್ಠಲ ಘತ್ತರಗಿ ಉರ್ಫ್ ಜಮಾದಾರ (30), ಅಮೃಶ ಘತ್ತರಗಿ (5) ಎಂದು ಗುರುತಿಸಲಾಗಿದೆ.'
ವಿಜಯಪುರ: ಏಷ್ಯಾದ ಅತ್ಯಂತ ಉದ್ದದ ಜಲ ಸೇತುವೆಗೆ ವಿಧ್ಯುಕ್ತ ಚಾಲನೆ
ಕಾಲು ಜಾರಿ ಮಗು ಬಾವಿಗೆ ಬಿದ್ದಿದೆ. ಅಲ್ಲಿಯೇ ಬಟ್ಟೆ ತೊಳೆಯುತ್ತಿರುವ ತಾಯಿ ಆ ಮಗುವನ್ನು ಕಾಪಾಡಲು ಮುಂದಾಗಿದ್ದಾಳೆ, ಆಗ ಕಾಲು ಜಾರಿ ಆಕೆಯೂ ಬಾವಿಗೆ ಬಿದ್ದಿದ್ದಾರೆ. ಮಹಿಳೆಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
