ಕೊಪ್ಪಳ ತಾಲೂಕಿನ ಬಹುತೇಕ ಗ್ರಾಮದ ರಸ್ತೆಗಳೀಗ ಸಂಪೂರ್ಣವಾಗಿ ಹಾಳು
ಕೊಪ್ಪಳ ಇತ್ತೀಚಿನ ದಿನಗಳಲ್ಲಿ ಎರಡನೇ ಜೇಮಶೆಡಪುರ ಎಂದು ಪ್ರಸಿದ್ಧಿ ಪಡೆಯುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣ ಅಂದರೆ ಇಲ್ಲಿನ ಕಾರ್ಖಾನೆಗಳು. ವಿವಿಧ ಗ್ರಾಮಗಳಲ್ಲಿ ಹಲವಾರು ಉಕ್ಕಿನ ಕಾರ್ಖಾನೆಗಳು ತೆಲೆಎತ್ತಿವೆ. ಇಂತಹ ಕಾರ್ಖಾನೆಗಳು ಇರುವ ಹಿರೇಬಗನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಿಣಗೇರಿ- ಹಿರೇಬಗನಾಳ ರಸ್ತೆ ಇದೀಗ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಅ.22): ಇಲ್ಲೊಂದು ರಸ್ತೆ ಇದೆ. ಈ ರಸ್ತೆಯಲ್ಲಿ ವಾಹನಗಳಲ್ಲ. ಕಾಲ್ನಡಿಗೆಯಲ್ಲಿ ಸಂಚರಿಸಲು ಆಗುವುದಿಲ್ಲ. ನಾಗರಿಕ ಸಮಾಜದಲ್ಲಿ ಇಂತಹ ರಸ್ತೆಗಳು ಇರುತ್ತಾ ಎಂಬುವುದನ್ನು ನೋಡಿದರೆ ಅಚ್ಚರಿ ಪಡಬೇಕು. ಈ ರಸ್ತೆಯಲ್ಲಿ ಸಂಚರಿಸುವ ಸುಮಾರು ಐದಾರು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಜೊತೆಗೆ ಆ ರಸ್ತೆಯಲ್ಲಿ ಅಂಬ್ಯುಲೆನ್ಸ ಸಹ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳ ಇತ್ತೀಚಿನ ದಿನಗಳಲ್ಲಿ ಎರಡನೇ ಜೇಮಶೆಡಪುರ ಎಂದು ಪ್ರಸಿದ್ಧಿ ಪಡೆಯುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣ ಅಂದರೆ ಇಲ್ಲಿನ ಕಾರ್ಖಾನೆಗಳು. ಕೊಪ್ಪಳ ತಾಲೂಕಿನ ಗಿಣಗೇರಿ, ಬಗನಾಳ್, ಕಾಸನಕಿಂಡಿ, ಹಾಲವರ್ತಿ, ಕುಣಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಲವಾರು ಉಕ್ಕಿನ ಕಾರ್ಖಾನೆಗಳು ತೆಲೆಎತ್ತಿವೆ. ಇಂತಹ ಕಾರ್ಖಾನೆಗಳು ಇರುವ ಹಿರೇಬಗನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಿಣಗೇರಿ- ಹಿರೇಬಗನಾಳ ರಸ್ತೆ ಇದೀಗ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
ರಸ್ತೆಯಲ್ಲಿ ಅಡ್ಡಾಡಲು ಗ್ರಾಮಸ್ಥರ,ವಿದ್ಯಾರ್ಥಿಗಳ ಹರಸಾಹಸ
ಕೊಪ್ಪಳ ತಾಲೂಕಿನ ಗಿಣಿಗೇರಿಯಿಂದ ಕರ್ಕಿಹಳ್ಳಿಯವರೆಗೂ ಹಾಗು ಹೊಸಹಳ್ಳಿಯಿಂದ ಹಾಲವರ್ತಿಯವರೆಗೂ ಇರುವ ರಸ್ತೆಗಳಾಗಿವೆ. ಈ ರಸ್ತೆಗಳಲ್ಲಿ ಸಂಚರಿಸಲು ಕಾಲ್ನಡಿಗೆಯಲ್ಲಿ ಹೋಗಲು ಆಗದಷ್ಟು ಗುಂಡಿಗಳು ಬಿದ್ದಿವೆ. ಈ ಗುಂಡಿಗಳು ಆಳೆತ್ತೆರಕ್ಕೆ ಬಿದ್ದಿವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಕೆಸರಿನಿಂದಾಗಿ ಲಾರಿಗಳು ರಸ್ತೆಯ ಮಧ್ಯೆ ಸಿಲುಕಿಕೊಳ್ಳುತ್ತಿವೆ. ಈ ವಾಹನಗಳನ್ನು ಜೆಸಿಬಿ ಮೂಲಕ ಎಳೆದುಕೊಂಡು ಹೋಗುವ ಸ್ಥಿತಿ ಇದೆ. ಜೊತೆಗೆ ಬೈಕ್ ಸವಾರರು ಸಹ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾಗಿದೆ.
ರಸ್ತೆ ಹಾಳಾಗಳು ಕಾರಣವೇನು
ಇನ್ನು ಈ ರಸ್ತೆಯು ಬೃಹತ್ ಕಾರ್ಖಾನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಲ್ಲಿ ಕಾರ್ಖಾನೆಗಳಿಂದ ಸಮಸ್ಯೆಯಾಗಿದೆ.
ಮುಖ್ಯವಾಗಿ ಇದು ಕೈಗಾರಿಕಾ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಸುಮಾರು 20 ಕ್ಕೂ ಅಧಿಕ ಬೃಹತ್ ಉಕ್ಕು, ಸಿಮೆಂಟ್ ಸೇರಿದಂತೆ ವಿವಿಧ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಗೆ ಅದಿರು ಸಾಗಾಟದ ಅಧಿಕ ಭಾರದ ಟಿಪ್ಪರುಗಳ ತಿರುಗಾಡುತ್ತಿವೆ, ಅಧಿಕ ಭಾರದ ಟಿಪ್ಪರಗಳ ಓಡಾಟದಿಂದಾಗಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.
ಐದಕ್ಕೂ ಹೆಚ್ಚು ಗ್ರಾಮಸ್ಥರ ಪರದಾಟ
ಇನ್ನು ಈ ರಸ್ತೆಯ ಮೂಲಕ ಗಿಣಗೇರಿಗೆ ಬರುವ ಅಲ್ಲಾನಗರ. ಹಿರೇಬಗನಾಳ. ಚಿಕ್ಕಬಗನಾಳ ಮೂಲಕ ಕರ್ಕಿಹಳ್ಳಿ ಹಾಗು , ಕಾಸನಕಂಡಿ ಗ್ರಾಮಸ್ಥರು ಇದೆ ರಸ್ತೆಯ ಮೂಲಕ ಸಂಚರಿಸಬೇಕು. ಈ ರಸ್ತೆಯನ್ನು ದುರಸ್ತಿ ಮಾಡಿ ಎಂದು ಎರಡು ಬಾರಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಗಿಣಗೇರಿ ಹಾಗು ಹಿರೇಬಗನಾಳ ಪ್ರೌಢ ಶಾಲೆ. ಗಿಣಗೇರಿಗೆ ಹೋಗಿ ಕೊಪ್ಪಳ ಅಥವಾ ಹೊಸಪೇಟೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಶಾಲಾ ಕಾಲೇಜಿಗೆ ಹೋಗಲು ಆಗುವುದಿಲ್ಲ.
ಗ್ರಾಮಸ್ಥರ ಮನವಿಗೆ ಕ್ಯಾರೆ ಎನ್ನದ ಜನಪ್ರತಿನಿಧಿಗಳು,ಅಧಿಕಾರಿಗಳು
ಈ ರಸ್ತೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಅನೇಕಬಾರಿ ಜಿಲ್ಲಾ ಆಡಳಿತಕ್ಕೆ,ಜನಪ್ರತಿನಿಧಿಗಳಿಗೆ, ಕಾರ್ಖಾನೆಗಳ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಕೊಪ್ಪಳ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ,ಇಲ್ಲವೆ ಕಾರ್ಖಾನೆಯವರು ರಸ್ತೆಯನ್ನು ಸರಿ ಪಡಿಸುವ ಗೋಜಿಗೆ ಹೋಗಿಲ್ಲ. ಕಾರ್ಖಾನೆಗಳ ಲಾಭಕ್ಕಾಗಿ ಗ್ರಾಮಸ್ಥರು ತೊಂದರೆ ಪಡುವಂತಾಗಿದೆ.
ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಡಿಸಿ ಸಭೆ; ನಿಗಧಿತ ಅವಧಿಯೊಳಗೆ ಕಬ್ಬಿನ ಹಣ ಪಾವತಿಗೆ ಕ್ರಮ
25 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ
ಇನ್ನು ಹಿಟ್ನಾಳ ಹೊಸಹಳ್ಳಿಯಿಂದ ಕಾಸನಕಂಡಿ. ಕಾಸನಕಂಡಿಯಿಂದ ಹಿರೇಬಗನಾಳ. ಗಿಣಗೇರಿಯಿಂದ ಹಿರೇಬಗನಾಳದವರೆಗಿನ ರಸ್ತೆಯ ಕಾಮಗಾರಿಗೆ ಟಿಂಡರ್ ಕರೆದು ಭೂಮಿ ಪೂಜೆ ಮಾಡಲಾಗಿದೆ. 25 ಕೋಟಿ ರೂಪಾಯಿಯಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು, ಆದರೆ ನಿರಂತರ ಮಳೆಯಿಂದಾಗಿ ರಸ್ತೆ ಕಾಮಗಾರಿ ಆರಂಭಿಸಲು ವಿಳಂಭವಾಗಿದೆ. ಮಳೆ ನಿಂತ ತಕ್ಷಣ ಕಾಮಗಾರಿ ಆರಂಭಿಸಿ ಸರ್ವ ಋತು ರಸ್ತೆ ಮಾಡುವುದಾಗಿ ಹೇಳಿದ್ದಾರೆ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಮೈಷುಗರ್‌ನಂತೆಯೇ ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಮುಂದಾಗಿ: ಈಶ್ವರ ಖಂಡ್ರೆ
ಕೇವಲ ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡುವ ಬದಲು ಈ ರಸ್ತೆಯನ್ನು ಅಭಿವೃದ್ದಿ ಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮಳೆ ನಿಂತ ತಕ್ಷಣ ಕಾಮಗಾರಿ ಆರಂಭಿಸುವ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕಿದೆ.