ಕಂದಾಯ ಇಲಾಖೆಯಲ್ಲೇ ಹೆಚ್ಚು ದೂರು: ಶಾಸಕ ರಂಗನಾಥ್‌

ಕಂದಾಯ ಇಲಾಖೆಯಲ್ಲಿ ಇರುವ ದೂರುಗಳ ಸಂಖ್ಯೆ ಅಧಿಕವಾಗಿದೆ. ಅವುಗಳ ಬಗ್ಗೆ ತಕ್ಷಣ ಕ್ರಮ ಜರುಗಿಸಲಾಗುವುದು, ಅದು ನನ್ನ ಜವಾಬ್ದಾರಿಯಾಗಿದೆ ಎಂದು ಕುಣಿಗಲ್‌ ಶಾಸಕ ರಂಗನಾಥ್‌ ತಿಳಿಸಿದ್ದಾರೆ.

Most complaints are in the revenue department: MLA Ranganath snr

  ಕುಣಿಗಲ್‌ : ಕಂದಾಯ ಇಲಾಖೆಯಲ್ಲಿ ಇರುವ ದೂರುಗಳ ಸಂಖ್ಯೆ ಅಧಿಕವಾಗಿದೆ. ಅವುಗಳ ಬಗ್ಗೆ ತಕ್ಷಣ ಕ್ರಮ ಜರುಗಿಸಲಾಗುವುದು, ಅದು ನನ್ನ ಜವಾಬ್ದಾರಿಯಾಗಿದೆ ಎಂದು ಕುಣಿಗಲ್‌ ಶಾಸಕ ರಂಗನಾಥ್‌ ತಿಳಿಸಿದ್ದಾರೆ.

ತಾಲೂಕಿನ ಯಡಿಯೂರು ಹೋಬಳಿಯ ನಾಗಸಂದ್ರ ಗ್ರಾಮದಲ್ಲಿ ಶಾಸಕರ ನಡೆ ಗ್ರಾಮದ ಕಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರ ಜೊತೆ ಸಮಸ್ಯೆ ಬಗೆಹರಿಸಿ ಮಾತನಾಡಿದರು.

ಕಂದಾಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯ, ಮೀನುಗಾರಿಕೆ ಮತ್ತು ಪಿಡಬ್ಲ್ಯೂಡಿ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ತಿಳಿಸಿದರು. ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕರು ಅರ್ಜಿ ಪಡೆದು ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ತಿಳಿಸಿದರು. ನಂತರ ಗ್ರಾಮದ ಬಡ ಕುಟುಂಬದ ಮನೆಯಲ್ಲಿ ರಾಗಿ ಮುದ್ದೆ, ಬಸ್ಸಾರು ಸವಿದು ಸ್ಥಳೀಯ ಮುಖಂಡರೊಂದಿಗೆ ಹಲವಾರು ಸಮಸ್ಯೆ ಮತ್ತು ಅಭಿವೃದ್ಧಿ ವಿಚಾರವಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮಹಾಬಲೇಶ್ವರ, ಕಾಂಗ್ರೆಸ್‌ ಮುಖಂಡರಾದ ಗೋವಿಂದರಾಜು, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್‌ ಸೇರಿದಂತೆ ಇತರರು ಇದ್ದರು.

ಫೋಟೋ ಇದೆ: 2ಕೆಜಿಎಲ್‌ 1 : ಕುಣಿಗಲ್‌ ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಸಾರ್ವಜನಿಕರ ಸಭೆ ಆಲಿಸುತ್ತಿರುವ ಶಾಸಕ ರಂಗನಾಥ್‌

ಆದಾಯ ಮೀರಿ ಆಸ್ತಿ ಗಳಿಕೆ

ಬೆಂಗಳೂರು (ಜು.1) ನೂರಾರು ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತರ ವಶದಲ್ಲಿರುವ ಕೆ.ಆರ್‌. ಪುರ ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಆದೇಶ ಮಾಡಿದೆ.

500 ಕೋಟಿ ರು. ಮೌಲ್ಯದಷ್ಟುಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಅಜಿತ್‌ ರೈ  ವಿರುದ್ಧ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ರೀತ್ಯಾ ದೂರು ದಾಖಲಿಸಿಕೊಂಡು ಘನ 23ನೇ ಹೆಚ್ಚುವರಿ ನ್ಯಾಯಾಲಯದಿಂದ ಆಗತ್ಯವಾದ ಶೋಧನಾ ವಾರೆಂಟ್ ಪಡೆದುಕೊಂಡು ತಹಸೀಲ್ದಾರ ನಿವಾಸಗಳನ್ನು ಶೋಧಿಸಿ ಆದಾಯಕ್ಕಿಂತ ಮೀರಿದ ಆಸ್ತಿ ಪತ್ತೆ ಹಚ್ಚಲಾಗಿತ್ತು. ಈ ಹಿನ್ನೆಲೆ ತಹಸೀಲ್ದಾರ್ 7 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನಗರದ 78ನೇ ಸಿಸಿಎಚ್‌ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರಿದರೆ ತನಿಖೆಗೆ ಅಡ್ಡಿ ಮಾಡುವ ಸಾಧ್ಯತೆ ಹಿನ್ನೆಲೆ ಕೂಡಲೇ ಅಮಾನತ್ತಿನಲ್ಲಿಡುವಂತೆ ಆದೇಶದಲ್ಲಿ ತಿಳಿಸಿದೆ. 

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಇಂದು ವಿಚಾರಣೆಗೆ ಬರಲು ಅಜಿತ್ ರೈಗೆ ಲೋಕಾಯುಕ್ತರಿಂದ ನೋಟಿಸ್

ಈ ಹಿಂದೆಯೂ ಸರ್ಕಾರ ಅಮಾನತ್ತು ಮಾಡಿತ್ತು:

ಈ ಹಿಂದೆ ಕೆ.ಆರ್‌. ಪುರದ ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್‌ ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ರಾಜ್ಯ ಸರ್ಕಾರ ಅಮಾನತು ಮಾಡಿತ್ತು.

Lokayukta raids: ನಿರ್ಮಿತಿ ಕೇಂದ್ರದ ಗಂಗಾಧರ್‌ ಬಳಿ ₹3.75 ಕೋಟಿ ಆಸ್ತಿ ಪತ್ತೆ!

ಕೆಲವು ದಿನಗಳ ಹಿಂದೆ ಅಮಾನತು ಆದೇಶ ಹಿಂಪಡೆದು ಮತ್ತೆ ಕೆ.ಆರ್‌.ಪುರ ತಹಸೀಲ್ದಾರ್‌ ಆಗಿ ಬಂದಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಇದೀಗ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದ ಆದೇಶಿಸಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

Latest Videos
Follow Us:
Download App:
  • android
  • ios