Asianet Suvarna News Asianet Suvarna News

ಮಡಿಕೇರಿಯಲ್ಲಿ 5690 ಮಂದಿಗೆ ಕ್ವಾರೆಂಟೈನ್

ಕೊಡಗು ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು ಪೂರೈಸಿದ್ದಾರೆ..

More than 5 thousand people quarantined in madikeri
Author
Bangalore, First Published May 12, 2020, 9:52 AM IST
  • Facebook
  • Twitter
  • Whatsapp

ಮಡಿಕೇರಿ(ಮೇ 12): ಕೊಡಗು ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು ಪೂರೈಸಿರುತ್ತಾರೆ.

ಇತರೆ ಜಿಲ್ಲೆ/ ರಾಜ್ಯಗಳಿಂದ ಪಾಸ್‌ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರೂ ಸೇರಿದಂತೆ 14 ದಿನಗಳೊಳಗಿರುವ ಗೃಹ ಸಂಪರ್ಕ ತಡೆಯಲ್ಲಿರುವ ಪ್ರಕರಣಗಳ ವಿವರಗಳು ಕೆಳಕಂಡಂತಿವೆ. ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಜನರು-5478, ಜಿಲ್ಲೆಯಲ್ಲಿ ಸಂಪರ್ಕ ತಡೆಯಲ್ಲಿರುವ ಇತರೆ ರಾಜ್ಯದ ಜನರು-212, ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಒಟ್ಟು ಜನರು-5690.

ಇಂದು ಮಂಗಳೂರಿಗೆ ಬರಲಿದ್ದಾರೆ 177 UAE ಪ್ರಯಾಣಿಕರು

ಇಲ್ಲಿಯವರೆಗೆ ಒಟ್ಟು 947 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪಾಸಿಟಿವ್‌ ಪ್ರಕರಣಗಳು- 01 (ಪ್ರಸ್ತುತ ಗುಣಮುಖರಾಗಿದ್ದಾರೆ). ನೆಗೆಟಿವ್‌ ವರದಿ ಬಂದ ಪ್ರಕರಣಗಳು-891. ವರದಿ ನಿರೀಕ್ಷಿತ ಪ್ರಕರಣಗಳು-55. ಪ್ರಸ್ತುತ ಕೋವಿಡ್‌ ಆಸ್ಪತ್ರೆಯಲ್ಲಿ 40 ಜನರು ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Follow Us:
Download App:
  • android
  • ios