ನರಗುಂದ: ಚರಂಡಿಯಾದ ಹಿರೇಹಳ್ಳದ ನೀರು, 200ಕ್ಕೂ ಹೆಚ್ಚು ಕೃಷಿ ಭೂಮಿ ನಾಶ

ಪುರಸಭೆಯವರು ಚರಂಡಿ ನೀರನ್ನು ಹಳ್ಳಕ್ಕೆ ಶುದ್ಧೀಕರಿಸಿ ಬಿಡಲಾರದೇ ನೇರವಾಗಿ ಬಿಡುತ್ತಿದ್ದಾರೆ. ಇದರಿಂದ ಸುಂದರವಾಗಿ ಹರಿಯುವ ಹಳ್ಳಗಳು ಚರಂಡಿ ನೀರಿನಿಂದ ಗಬ್ಬೆದ್ದು ನಾರುತ್ತಿವೆಯಲ್ಲದೇ, ಕೆಲಸಕ್ಕ ಬಾರದ ಕಸಕಡ್ಡಿ, ಮುಳ್ಳುಕಂಟಿಗಳು ಚರಂಡಿ ನೀರಿನಿಂದ ಬೆಳೆದು ಹಳ್ಳಗಳು ಮುಚ್ಚಿ ಹೋಗಿವೆ. 

More than 200 acres of Agricultural Land Destroyed due to Drain Water at Nargund grg

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಫೆ.24):  ಇಲ್ಲಿಯ ಹಿರೇಹಳ್ಳಕ್ಕೆ ಚರಂಡಿ ನೀರು ಸೇರಿ ಹೊಲಗಳಿಗೆ ನುಗ್ಗುತ್ತಿದ್ದು, 200 ಎಕರೆಗೂ ಅಧಿಕ ಕೃಷಿ ಭೂಮಿ ನಾಶವಾಗುತ್ತಿದೆ! ಹಿರೇಹಳ್ಳವು ಮೇಲ್ಭಾಗದ ಚಿಕ್ಕನರಗುಂದದಿಂದ ಹರಿಯುತ್ತ ಇಲ್ಲಿಯ ಮಲಪ್ರಭಾ ಆಯಿಲ್‌ ಮಿಲ್‌ ಹತ್ತಿರ ಹಾಯ್ದು ಬೆಣ್ಣಿ ಹಳ್ಳ ಸೇರುತ್ತದೆ. ಈ ಹಳ್ಳಕ್ಕೆ ಚರಂಡಿ ನೀರು ಮೂರು ಕಡೆಯಿಂದ ಬಂದು ಸೇರುತ್ತಿದೆ. ಪುರಸಭೆಯವರು ಚರಂಡಿ ನೀರನ್ನು ಹಳ್ಳಕ್ಕೆ ಶುದ್ಧೀಕರಿಸಿ ಬಿಡಲಾರದೇ ನೇರವಾಗಿ ಬಿಡುತ್ತಿದ್ದಾರೆ. ಇದರಿಂದ ಸುಂದರವಾಗಿ ಹರಿಯುವ ಹಳ್ಳಗಳು ಚರಂಡಿ ನೀರಿನಿಂದ ಗಬ್ಬೆದ್ದು ನಾರುತ್ತಿವೆಯಲ್ಲದೇ, ಕೆಲಸಕ್ಕ ಬಾರದ ಕಸಕಡ್ಡಿ, ಮುಳ್ಳುಕಂಟಿಗಳು ಚರಂಡಿ ನೀರಿನಿಂದ ಬೆಳೆದು ಹಳ್ಳಗಳು ಮುಚ್ಚಿ ಹೋಗಿವೆ. ಮಳೆಗಾಲದಲ್ಲಿ ಚರಂಡಿಯಿಂದ ಮುಚ್ಚಿದ ಹಳ್ಳಗಳಲ್ಲಿ ಭಾರಿ ಪ್ರಮಾಣದ ನೀರು ಹೊರಚೆಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿ ಭೂಮಿ ನಾಶವಾಗುತ್ತಿದೆ ಎನ್ನುತ್ತಾರೆ ರೈತರು.

ಹೂಳು ಎತ್ತಿ:

ಹಳ್ಳಗಳು ಮುಚ್ಚಿಹೋದ ಕಾರಣ ಚರಂಡಿ ನೀರೆಲ್ಲವೂ ರೈತರ ಹೊಲದಲ್ಲಿ ಹೊರಚೆಲ್ಲಿ ಭೂಮಿಯೊಳಗೆ ಪ್ರವೇಶ ಮಾಡಿದೆ. ಹೀಗಾಗಿ ರೈತರ ಕೃಷಿ ಭೂಮಿ ಎಲ್ಲವೂ ಬಿತ್ತನೆಗೆ ಬಾರದೇ ಮುಳ್ಳುಕಂಟಿ ಬೆಳೆದು ಕಾಡು ಪ್ರದೇಶವಾಗುತ್ತಿದೆ. ಕೃಷಿ ಭೂಮಿ ರಕ್ಷಣೆಗಾಗಿ ಚರಂಡಿ ನೀರಿನಿಂದ ಹೂಳು ತುಂಬಿರುವ ಹಳ್ಳಗಳನ್ನು ಸ್ವಚ್ಛಗೊಳಿಸಿದರೆ ಚರಂಡಿ ನೀರು ಸಲೀಸಾಗಿ ಹರಿದುಹೋಗುತ್ತದೆ ಎಂಬುದು ರೈತಾಪಿ ವರ್ಗದ ಆಗ್ರಹವಾಗಿದೆ.

ಗದಗ: ನವಗ್ರಾಮ ಮನೆಗಳ ಮರುಹಂಚಿಕೆ ಯಾವಾಗ?

ಕೃಷಿ ಚಟುವಟಿಕೆಗೆ ಮಾರಕ

ಬೇಸಿಗೆ ಸಂದರ್ಭ ಹಳ್ಳದಲ್ಲಿನ ವರ್ತಿ ಸೆಲೆಯಲ್ಲಿ ರೈತರು, ಕುರಿಗಾಹಿಗಳು, ದನಕಾಯುವವರು, ಜೇನು ಸಂಗ್ರಹಗಾರರು ಬಾಯಾರಿಕೆಗೆ ನೀರನ್ನು ಕುಡಿಯುತ್ತಿದ್ದರು. ಆದರೀಗ ಹಳ್ಳಗಳು ಕೊಳಚೆಯಾಗಿ ಮಾರ್ಪಟ್ಟು ಕುಡಿಯೋದಿರಲಿ ಕೃಷಿ ಚಟುವಟಿಕೆಗೂ ಮಾರಕವಾಗಿದೆ.

ಪಟ್ಟಣದ ಚರಂಡಿ ನೀರಿನಿಂದ ಕೃಷಿ ಭೂಮಿ ನಾಶವಾಗುತ್ತಿರುವುದು ಒಂದು ಕಡೆಯಾದರೆ, ಹೊಲಕ್ಕೆ ಹೋಗುವಂತಹ ಯಾವಗಲ್ಲ ಹಳೇ ದಾರಿಯಲ್ಲಿ ಗಲೀಜು ನೀರು ಹರಿಯುತ್ತಿದೆ. ಇದರಿಂದ ದಾರಿಗಳು ಕೊಳಚೆ ಹಳ್ಳಗಳಾಗಿ ಹರಿದು ಕಸಕಡ್ಡಿ, ಮುಳ್ಳುಕಂಟೆ, ಕೊಂಪೆಗಳು ಬೆಳೆದಿರುವ ಕಾರಣ ಅಲ್ಲಿಗೆ ಹೋಗಲು ಭಯವಾಗುತ್ತಿದೆ.

200 ಎಕರೆ ಪಾಳು

ಹಿರೇಹಳ್ಳಕ್ಕೆ ಚರಂಡಿ ನೀರು ಹರಿಯುವ ಕಾರಣ ರೈತ ಶಂಭು ಶಿವಪ್ಪ ಕರಡಿ ಅವರ 12 ಎಕರೆಯಲ್ಲಿ 6 ಎಕರೆ ನಾಶಗೊಂಡಿದೆ. ಜೊತೆಗೆ ಶಿವಯೋಗೆಪ್ಪ ನೀಲವಾಣಿ ಸೇರಿದಂತೆ 35ರಿಂದ 40ಕ್ಕೂ ಹೆಚ್ಚು ರೈತರ 200ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ನಾಶವಾಗಿದೆ.

10 ವರ್ಷದ ಹಿಂದೆ ಇದೇ ಹಿರೇಹಳ್ಳವನ್ನು 55 ಲಕ್ಷ ರು. ಗಳ ಅನುದಾನದಲ್ಲಿ ಹೂಳು ತೆಗೆಸಲಾಗಿತ್ತು. ಚರಂಡಿ ನೀರಿನಿಂದ ಈಗ ಮತ್ತೆ ಹಿರೇಹಳ್ಳವು ಕೊಳಚೆಯಾಗಿ ಮಾರ್ಪಟ್ಟಿದೆ. ಇಂತಹ ಹಳ್ಳಗಳನ್ನು ಸ್ವಚ್ಛಗೊಳಿಸಿದರೆ ಯಾವುದೇ ನೀರು ಇರಲಿ ಅದು ಸಲಿಸಾಗಿ ಹರಿದು ಹೋಗುತ್ತದೆ. ಚರಂಡಿ ನೀರನ್ನು ಶುದ್ಧೀಕರಣಗೊಳಿಸಿ ಹಳ್ಳಕ್ಕೆ ಬಿಡಬೇಕೆಂಬುದು ರೈತರ ಒತ್ತಾಸೆಯಾಗಿದೆ.

ಗದಗ: ಕಡತ ತಿದ್ದಿ, ಸರ್ಕಾರಿ ಹಣ ದುರುಪಯೋಗ, ಜಿಮ್ಸ್ ಮಾಜಿ ನಿರ್ದೇಶಕ ಭೂಸರೆಡ್ಡಿ ವಿರುದ್ಧ ಎಫ್‌ಐಆರ್..!

ಪಟ್ಟಣದ ಚರಂಡಿ ನೀರು ಹಿರೇಹಳ್ಳಕ್ಕೆ ಸೇರಿಕೊಂಡು ಕೃಷಿ ಭೂಮಿ ನಾಶಗೊಳ್ಳುತ್ತಿದೆ. ಚರಂಡಿ ನೀರನ್ನು ಶುದ್ಧೀಕರಿಸಿ ಹಳ್ಳಕ್ಕೆ ಬಿಡಬೇಕು ಮತ್ತು ಹೂಳು ತುಂಬಿರುವ ಹಳ್ಳಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಸ್ವಚ್ಛಗೊಂಡ ಹಳ್ಳದಲ್ಲಿ ನೀರು ಸರಾಗ​ವಾಗಿ ಹರಿದು ಹೋಗುತ್ತದೆ. ಆ ನೀರು ಕೃಷಿಗೂ ಉಪಯೋಗವಾಗುತ್ತದೆ ಮತ್ತು ಹಳ್ಳಗಳ ಬದಿಯಲ್ಲಿನ ಹೊಲಗಳು ಸ್ವಚ್ಛಂದವಾಗಿರುತ್ತವೆ ಅಂತ ರೈತ ಶಿವಯೋಗೆಪ್ಪ ನೀಲವಾಣಿ ಹೇಳಿದ್ದಾರೆ. 

ಕೆಲವು ವರ್ಷಗಳ ಹಿಂದೆ ನಗರದಲ್ಲಿ ಒಳಚರಂಡಿ ಯೋಜನೆಯಡಿ ಮನೆ ಮನೆಗೆ ಶೌಚಾಲಯ ಕನæಕ್ಷನ್‌ ಕೊಡಲು ಪ್ರತಿ ವಾರ್ಡ್‌ನಲ್ಲೂ ಒಳಚರಂಡಿ ಪೈಪ್‌ಲೈನ್‌ ಜೋಡಣೆ ಮಾಡಲಾಗಿತ್ತು. ಅದು ಕಾರ್ಯಗತಗೊಳ್ಳದೇ ನನೆಗುದಿಗೆ ಬಿದ್ದ ಕಾರಣ ನಿರ್ಮಾಣಗೊಂಡ ಪೈಪ್‌ಲೈನ್‌ ಭೂಮಿಯಲ್ಲಿಯೇ ಹಾಳಾಗಿ ಹೋಗಿವೆ. ಹೀಗಾಗಿ ಚರಂಡಿ ನೀರು ಶುದ್ಧೀಕರಣಗೊಳ್ಳದೇ ಹಳ್ಳವನ್ನು ಸೇರುತ್ತಿದೆ. ಒಳಚರಂಡಿ ಲೈನ್‌ ದುರಸ್ತಿಗೊಳಿಸುವ ಯೋಜನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಪುರಸಭೆ ಮುಖ್ಯಾಧಿಕಾರಿ ಅಮಿತ ತಾರದಾಳೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios