20ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಹನೂರು ತಾಲೂಕಿನ ರಾಮಪುರ ಪೂಜಾರಿಬಾವಿ ದೊಡ್ಡಿಯ ಮುತ್ತಾಲಿ ಸೇರಿದಂತೆ 20ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.
ಚಾಮರಾಜನಗರ(ಜೂ.10): ಹನೂರು ತಾಲೂಕಿನ ರಾಮಪುರ ಪೂಜಾರಿಬಾವಿ ದೊಡ್ಡಿಯ ಮುತ್ತಾಲಿ ಸೇರಿದಂತೆ 20ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.
ಪಕ್ಷಕ್ಕೆ ಸ್ವಾಗತಿಸಿದ ಜಿಲ್ಲಾಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಜನರ ಕಷ್ಟಸುಖಗಳಿಗೆ ಸ್ಪಂದಿಸುವುದನ್ನು ಮನಗಂಡು ಮುಖಂಡರು ಯುವಕರು ಜೆಡಿಎಸ್ ಬೆಂಬಲಿಸಿ ಸಹಕಾರ ನೀಡಲು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪೂಜಾರಿ ಬಾವಿ ದೊಡ್ಡಿ ಜನರು ಬಡತನದಲ್ಲಿ ಕೂಲಿ ಮಾಡುವವರು ಹೆಚ್ಚಾಗಿ ಇದ್ದಾರೆ.
ಕೊರೋನಾಗೆ ಡಿಎಂಕೆ ಶಾಸಕ ಬಲಿ; ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ಅನ್ಬಳಗನ್!
ಇವರ ಪೈಕಿ ಕೆಲವರು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸಂಘಟನೆ ಮಾಡಿ ವೈಯಕ್ತಿಕ ಸೇವೆಯನ್ನು ಸಲ್ಲಿಸಿದ್ದಾರೆ. ಅಂತಹವರನ್ನು ಕಡೆಗಣಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸದೆ ಇರುವುದು ಮನವರಿಕೆಯಾಗಿದ್ದು, ಈಗ ಜೆಡಿಎಸ್ ಬೆಂಬಲಿಸಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಕಷ್ಟಸುಖಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪೂಜಾರಿ ಬಾವಿ ದೊಡ್ಡಿಯ ಮುತ್ತಲಿ, ಚಿನ್ನರಾಜು, ರಾಮು, ರಾಜಕಣ್ಣನ್, ಚಂಗೊಡ, ಹೊನ್ನಪ್ಪ, ಸೇರಿದಂತೆ ಇಪ್ಪತ್ತು ಜನರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಶಾಗ್ಯ ನಾಗೇಂದ್ರ ಬಾಬು, ಹೊಸೂರು ಬಸವರಾಜು, ಪಾಳ್ಯ ಸಿದ್ದಪ್ಪಾಜಿ, ರಫೀಕ್, ರಾಮಪುರ ಮಹದೇವು ಇನ್ನಿತರ ಜೆಡಿಎಸ್ ಮುಖಂಡರು ಇದ್ದರು.