ಚಾಮರಾಜನಗರ: ಗೋಕುಲಾಷ್ಟಮಿ ಪ್ರಸಾದ ತಿಂದು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ನಿನ್ನೆ ರಾತ್ರಿ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪುಳಿಯೊಗರೆ ಪ್ರಸಾದವನ್ನ ನೀಡಲಾಗಿತ್ತು. ಆದ್ರೆ, ಇಂದು ಬೆಳಿಗ್ಗೆ ಪ್ರಸಾದವನ್ನ ಸೇವಿಸಿದ್ದರಿಂದ ಮಧ್ಯಾಹ್ನ ಕೆಲವರಿಗೆ ವಾಂತಿಬೇಧಿ ಕಾಣಿಸಿಕೊಂಡಿದೆ.
ಚಾಮರಾಜನಗರ(ಆ.28): ಗೋಕುಲಾಷ್ಟಮಿ ಪ್ರಸಾದ ತಿಂದಿದ್ದ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕಿನ ಪಾಳ್ಯ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ.
ನಿನ್ನೆ ರಾತ್ರಿ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪುಳಿಯೊಗರೆ ಪ್ರಸಾದವನ್ನ ನೀಡಲಾಗಿತ್ತು. ಆದ್ರೆ, ಇಂದು ಬೆಳಿಗ್ಗೆ ಪ್ರಸಾದವನ್ನ ಸೇವಿಸಿದ್ದರಿಂದ ಮಧ್ಯಾಹ್ನ ಕೆಲವರಿಗೆ ವಾಂತಿಬೇಧಿ ಕಾಣಿಸಿಕೊಂಡಿದೆ.
ಸರ್ಕಾರಿ ಕಾಲೇಜು ಕ್ರೀಡಾಕೂಟದ ಪ್ರಶಸ್ತಿ ಪತ್ರದಲ್ಲಿ ಏಸುಕ್ರಿಸ್ತ, ಮೇರಿ ಮಾತೆ!
ಹೀಗಾಗಿ ಪಾಳ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 11 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊಳ್ಳೇಗಾಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ 11 ಮಂದಿಯನ್ನ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.