Covid 19 Third Wave: ಬೆಂಗ್ಳೂರಲ್ಲಿ 233 ದಿನ ಬಳಿಕ 15,000+ ಕೇಸ್: ಬೆಚ್ಚಿಬಿದ್ದ ಜನತೆ..!
* ಬೆಂಗಳೂರಿನಲ್ಲಿ ಕೊರೋನಾ ಸೋಂಕು ಸ್ಫೋಟ
* 73 ಸಾವಿರ ಸಕ್ರಿಯ ಕೇಸ್
* ಪಾಸಿಟಿವಿಟಿ ದರ ಶೇ.15.96ಕ್ಕೇರಿಕೆ
ಬೆಂಗಳೂರು(ಜ.13): ನಗರದಲ್ಲಿ ಬರೋಬ್ಬರಿ 233 ದಿನಗಳ ಬಳಿಕ 15 ಸಾವಿರಕ್ಕೂ ಹೆಚ್ಚು ಕೋವಿಡ್(Covid19) ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 73,654ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇ.15.95ಕ್ಕೆ ಹೆಚ್ಚಳವಾಗಿದೆ. ಬುಧವಾರ ಹೊಸದಾಗಿ 15,617 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈವರೆಗಿನ ಸೋಂಕಿತರ ಸಂಖ್ಯೆ 13.34 ಲಕ್ಷಕ್ಕೆ ಏರಿಕೆಯಾಗಿದೆ. 874 ಮಂದಿ ಗುಣಮುಖರಾಗಿದ್ದು, ಇದುವರೆಗೆ ಸೋಂಕಿನಿಂದ ಬಿಡುಗಡೆಯಾದವರ ಸಂಖ್ಯೆ 12.44 ಲಕ್ಷ ತಲುಪಿದೆ. ಸೋಂಕಿನಿಂದ ಐವರು ಪುರುಷರು ಮತ್ತು ಓರ್ವ ಮಹಿಳೆ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿಗೆ ಬಲಿಯಾದವರ(Death) ಸಂಖ್ಯೆ 16,434ಕ್ಕೆ ಏರಿಕೆಯಾಗಿದೆ.
ಕಳೆದ 7 ದಿನಗಳಲ್ಲಿ ಪಾಲಿಕೆಯ(BBMP) 10 ವಾರ್ಡ್‌ಗಳಲ್ಲಿ ತಲಾ 120ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು 332, ಬೇಗೂರು 175, ಎಚ್‌ಎಸ್‌ಆರ್ ಲೇಔಟ್ 143, ಹಗದೂರು 140, ದೊಡ್ಡನೆಕ್ಕುಂದಿ 138, ಹೊರಮಾವು 137, ನ್ಯೂತಿಪ್ಪಸಂದ್ರ 133, ವರ್ತೂರು 129, ಕೋರಮಂಗಲ 126 ಮತ್ತು ರಾಜರಾಜೇಶ್ವರಿ ನಗರದಲ್ಲಿ 124 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.
Corona Update ಕರ್ನಾಟಕದಲ್ಲಿ ಕೈ ಮೀರಿತು ಪರಿಸ್ಥಿತಿ, ಒಂದೇ ದಿನ 20 ಸಾವಿರ ಗಡಿದಾಟಿದ ಹೊಸ ಕೇಸ್
ಪಾಲಿಕೆಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ(Micro Containments) ಸಂಖ್ಯೆ 479ಕ್ಕೆ ಏರಿಕೆಯಾಗಿದೆ. ಮಹದೇವಪುರ 189, ಬೊಮ್ಮನಹಳ್ಳಿ 112, ದಕ್ಷಿಣ 57, ಪಶ್ಚಿಮ 52, ಪೂರ್ವ 42, ಯಲಹಂಕ 17, ದಾಸರಹಳ್ಳಿ 6 ಮತ್ತು ರಾಜರಾಜೇಶ್ವರಿ ನಗರ ವಲಯದಲ್ಲಿ 4 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ.
ಸೋಂಕಿತರ ಚಿಕಿತ್ಸೆಗಾಗಿ 28,067 ಹಾಸಿಗೆ ಸಿದ್ಧ
ಕೊರೋನಾ(Coronavirus) ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 28,067 ಹಾಸಿಗೆ(Bed) ಗುರುತಿಸಿದ್ದು, ಈವರೆಗೆ 6255 ಹಾಸಿಗೆಗಳನ್ನು ಕೋವಿಡ್ ಆಸ್ಪತ್ರೆಗಳ(Covid Hospital) ಹಾಸಿಗೆ ನಿರ್ವಹಣಾ ವ್ಯವಸ್ಥೆ (ಸಿಎಚ್‌ಬಿಎಂಎಸ್) ಹಂಚಿಕೆ ಮಾಡಲಾಗಿದೆ. ಸದ್ಯ 362 ಮಂದಿಗೆ ಹಾಸಿಗೆಗಳನ್ನು ಈ ವ್ಯವಸ್ಥೆ ಮೂಲಕ ಬಿಬಿಎಂಪಿ ಹಂಚಿಕೆ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಅವರು, ಖಾಸಗಿ ಆಸ್ಪತ್ರೆಗಳು ಕೇವಲ ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳನ್ನು ಸಿಎಚ್‌ಬಿಎಂಎಸ್ ಅಡಿಯಲ್ಲಿ ಹಂಚಿಕೆ ಮಾಡಿವೆ. ಉಳಿದ ಆಸ್ಪತ್ರೆಗಳು ಹಾಸಿಗೆಗಳನ್ನು ಸರ್ಕಾರ, ಬಿಬಿಎಂಪಿ ಮತ್ತು ಸಿಎಚ್‌ಬಿಎಂಎಸ್ ಯಾವುದೇ ಶಿಫಾರಸು ಇಲ್ಲದೆ ನೇರವಾಗಿ ಕಾಯ್ದಿರಿಸುತ್ತವೆ. ಇದುವರೆಗೆ ಸರ್ಕಾರಿ ಆಸ್ಪತ್ರೆಗಳ 3237, ಸರ್ಕಾರಿ ವೈದ್ಯಕೀಯ ಕಾಲೇಜುಗಳ 2696, ಖಾಸಗಿ ಆಸ್ಪತ್ರೆಗಳ 13,540 ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ 8594 ಹಾಸಿಗೆಗಳು ಸೇರಿದಂತೆ ಒಟ್ಟು 28,067 ಹಾಸಿಗೆಗಳನ್ನು ಗುರುತಿಸಲಾಗಿದೆ. ಇದುವರೆಗೆ 6255 ಹಾಸಿಗೆಗಳನ್ನು ಸಿಎಚ್‌ಬಿಎಂಎಸ್ ಮೂಲಕ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಸೋಂಕಿತರ ಪೈಕಿ 362 ಮಂದಿಗೆ ಹಾಸಿಗೆಗಳನ್ನು ಸಿಎಚ್‌ಬಿಎಂಎಸ್ ಮೂಲಕ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
PM-CMs Meeting ಮುಖ್ಯಮಂತ್ರಿಗಳ ಜತೆ ಗುರುವಾರ ಪ್ರಧಾನಿ ಸಭೆ, ಎದುರುನೋಡುತ್ತಿರುವ ಕರ್ನಾಟಕ
ಬಿಬಿಎಂಪಿಗೆ ಹಂಚಿಕೆಯಾದ ಹಾಸಿಗೆಗಳ ಖರ್ಚನ್ನು ರಾಜ್ಯ ಸರ್ಕಾರ(Government of Karnataka) ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಮೂಲಕ ಭರಿಸುತ್ತದೆ ಎಂದರು. ಹಾಸಿಗೆ ಬುಕಿಂಗನ್ನು ವಿಕೇಂದ್ರೀಕರಣ ಮಾಡಲಾಗಿದ್ದು, ಎಲ್ಲ ವಲಯಗಳ ಆರೋಗ್ಯ ವೈದ್ಯಾಧಿಕಾರಿಗಳ ವ್ಯಾಪ್ತಿಗಳಲ್ಲಿ 27 ವೈದ್ಯರಿಗೆ ಲಾಗಿನ್ ಒದಗಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ವೆಚ್ಚ, ಶುಲ್ಕವನ್ನು ಸರ್ಕಾರವು ಸಮಯಾನುಸಾರ ನಿಯಂತ್ರಿಸುತ್ತದೆ. ಖಾಸಗಿ ಆಸ್ಪತ್ರೆಗಳು ಮಿತಿ ಮೀರಿ ವೆಚ್ಚ ಹೇರುವಂತಿಲ್ಲ ಎಂದು ಹೇಳಿದರು.
ಐಸೋಲೇಷನ್ ಅವಧಿ 14ರಿಂದ 7 ದಿನಕ್ಕೆ ಇಳಿಕೆ
ಹೊಸ ಮಾರ್ಗಸೂಚಿ(New Guidelines) ಪ್ರಕಾರ ಹೋಂ ಐಸೋಲೇಷನ್(Home Isolation) ಅವಧಿಯನ್ನು 14 ದಿನಗಳಿಂದ 7 ದಿನಗಳಿಗೆ ಇಳಿಸಲಾಗಿದೆ. ಏಳು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಕಡ್ಡಾಯ. ಪರೀಕ್ಷೆ ವರದಿ ನಂತರ ನೆಗೆಟಿವ್ ಇದ್ದವರು ನಿತ್ಯದ ಚಟುವಟಿಕೆಗಳನ್ನು ಪುನರಾರಂಭಿಸಬಹುದು. ಹೋಂ ಐಸೋಲೇಷನ್ ಇರಲು ಮನೆಗಳಲ್ಲಿ ಅನುಕೂಲ ಇಲ್ಲದವರು ಬಿಬಿಎಂಪಿಯಿಂದ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಇರಲು ಅನುಕೂಲ ಕಲ್ಪಿಸಲಾಗುವುದು. ಅದಕ್ಕಾಗಿ 27 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿದ್ದು ಜ.14ರೊಳಗೆ ಕಾರ್ಯಾರಂಭ ಮಾಡಲಿವೆ. ಕೋವಿಡ್ ಆರೈಕೆ ಕೇಂದ್ರಗಳಿಗೆ ಹಾಸಿಗೆ ಹಂಚಿಕೆ ಕೂಡ ಸಿಎಚ್‌ಬಿಎಂಎಸ್ ಮೂಲಕ ಆಗುತ್ತಿದೆ. 27 ಆರೋಗ್ಯ ವೈದ್ಯಾಧಿಕಾರಿಗಳ ವ್ಯಾಪ್ತಿಗೆ ಸಿಎಚ್‌ಬಿಎಂಎಸ್ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.