ಬೆಂಗಳೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್. ಕೊರೋನಾ ಬಗ್ಗೆ ನೀವು ಹೆಚ್ಚಿನ ಆತಂಕ ಪಡಬೇಕಾದ ಅಗತ್ಯವಿಲ್ಲ. ಕಾರಣ ಇಲ್ಲಿ ಸೋಂಕಿತರ ಸಂಖ್ಯೆ  ಅಲ್ಪಮಟ್ಟಿಗೆ ತಗ್ಗಿದೆ.

ಬೆಂಗಳೂರು (ಆ.18): ನಗರದಲ್ಲಿ ಸೋಮವಾರ 2,053 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 91,864ಕ್ಕೆ ಏರಿಕೆಯಾಗಿದೆ. 2,190 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 

ಈ ಮೂಲಕ ಒಟ್ಟು ಗುಣಮುಖರ ಸಂಖ್ಯೆ 55,972ಕ್ಕೆ ತಲುಪಿದೆ. ಇನ್ನು 34,408 ಸಕ್ರಿಯ ಸೋಂಕಿತರು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ 324 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲ್ಲರಿಗೂ ಆಘಾತ.. ಆಡಳಿತಾರೂಢ ಪಕ್ಷದ ಶಾಸಕ ಕೊರೋನಾಕ್ಕೆ ಬಲಿ.

ಸೋಂಕಿಗೆ 39 ಬಲಿ:

ಸೋಮವಾರ ನಗರದಲ್ಲಿ 39 ಸೊಂಕಿತರು ಸಾವನ್ನಪ್ಪಿದ್ದು, ಇದರಲ್ಲಿ 20 ಮಂದಿ ಹಿರಿಯ ನಾಗರೀಕರು. ಉಳಿದ 19 ಜನರು 60 ವರ್ಷದೊಳಗಿನವರಾಗಿದ್ದಾರೆ. ಈ ಪೈಕಿ 6 ಜನರಿಗೆ ಮಾತ್ರ ಸೋಂಕಿನ ಮೂಲ ಪತ್ತೆಯಾಗಿದ್ದು, ಉಳಿದ ಸೋಂಕಿತರಿಗೆ ಯಾವ ಮೂಲದಿಂದ ಸೋಂಕು ಕಾಣಿಸಿಕೊಂಡಿದೆ ಎಂಬುದು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ನಗರದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 1483ಕ್ಕೆ ಏರಿಕೆಯಾಗಿದೆ.