ಎಲ್ಲರಿಗೂ ಆಘಾತ.. ಆಡಳಿತಾರೂಢ ಪಕ್ಷದ ಶಾಸಕ ಕೊರೋನಾಕ್ಕೆ ಬಲಿ
ಕೊರೋನಾಕ್ಕೆ ತುತ್ತಾಗಿದ್ದ ಶಾಸಕ ಚಿಕಿತ್ಸೆ ಫಲಿಸದೆ ಸಾವು/ ಟಿಎಂಸಿ ಶಾಸಕನ ಬಲಿ ಪಡೆದ ವೈರಸ್/ ತೃಣಮೂಲ ಕಾಂಗ್ರೆಸ್ ಶಾಸಕ ಸಮರೇಶ್ ದಾಸ್ (76) ಕೊರೋನಾದಿಂದ ಸಾವು
ಕೋಲ್ಕತ್ತಾ (ಆ. 17) ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಸಮರೇಶ್ ದಾಸ್ (76) ಪೂರ್ವ ಮಿಡ್ನಾಪೋರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
ಆಡಳಿತಾರೂಢ ಟಿಎಂಸಿಗೆ ಕೊರೋನಾ ಏಟಿನ ಮೇಲೆ ಏಟು ನೀಡುತ್ತಿದೆ. ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಸಮರೇಶ್ ದಾಸ್ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಎರ್ಗಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಮರೇಶ್ ದಾಸ್ ಅವರನ್ನು ಕೊರೋನಾ ಬಲಿಪಡೆದಿದೆ.
ಆತಂಕದ ನಡುವೆ ಕೊಂಚ ನೆಮ್ಮದಿ ತಂದ ಈ ಕೊರೊನಾ ಸುದ್ದಿ
ಚಿಕಿತ್ಸೆ ವೇಳೆಯಲ್ಲಿ ಹೃದಯ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಆರೋಗ್ಯ ತೊಂದರೆಗಳು ಕಾಣಿಸಿಕೊಂಡವು. 76 ವರ್ಷದ ಶಾಸಕ ಸಮರೇಶ್ ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಚೇತರಿಸಿಕೊಂಡಿದ್ದರೂ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈಗ ಬಹುಅಂಗಾಂಗ ವೈಫಲ್ಯ ಅವರನ್ನು ಕಾಡಿದೆ.
ಟಿಎಂಸಿಯ ಶಾಸಕರಾಗಿದ್ದ ಜೂನ್ ನಲ್ಲಿ ತಮೋನೋಶ್ ಘೋಶ್ ಕೊರೋನಾಕ್ಕೆ ಬಲಿಯಾಗಿದ್ದರು. ಇವರು ಸಹ ಪಾಲ್ತಾ ವಿಧಾನಸಭಾ ಕ್ಷೇತ್ರದಿಂದ ಮೂರು ಸಾರಿ ಆಯ್ಕೆಯಾಗಿದ್ದರು. ಟಿಎಂಸಿಯ ಕೌನ್ಸಿಲರ್ ಸುಭಾಷ್ ಬೋಸ್ ಕೊರೋನಾ ವಿರುದ್ಧ 12 ದಿನ ಹೋರಾಟ ಮಾಡಿ ಈ ತಿಂಗಳ ಆರಂಭದಲ್ಲಿ ಸಾವನ್ನಪ್ಪಿದ್ದರು.