ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಬಿಜೆಪಿಯ ಜನಪರ ನಿಲುವಿನಿಂದಾಗಿ ಬಿಜೆಪಿಯ ಬಗ್ಗೆ ಅಪಾರ ಒಲವು| ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಅನೇಕ ರೀತಿಯ ಅಭಿವೃದ್ಧಿ ಕಾರ್ಯ ಅನುಷ್ಠಾನ| ಪಕ್ಷ ಸೇರ್ಪಡೆಯಾದ ಮುಖಂಡರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು|
ವಿಜಯಪುರ(ಫೆ.17): ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ದೇವರ ನಿಂಬರಗಿ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ ಸಮ್ಮುಖದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಉಮೇಶ ಕಾರಜೋಳ ಅವರು, ಬಿಜೆಪಿಯ ಜನಪರ ನಿಲುವಿನಿಂದಾಗಿ ಬಿಜೆಪಿಯ ಬಗ್ಗೆ ಅಪಾರ ಒಲವು ಹೊಂದಿದ್ದಾರೆ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಅನೇಕ ರೀತಿಯ ಅಭಿವೃದ್ಧಿ ಕಾರ್ಯವನ್ನು ಅನುಷ್ಠಾನಗೊಳಿಸುತ್ತಿವೆ. ಈ ಎಲ್ಲ ಕಾರಣಗಳಿಂದ ಬಿಜೆಪಿಯ ಬಗ್ಗೆ ಜನತೆ ಅಪಾರವಾದ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಪಕ್ಷ ಸೇರ್ಪಡೆಯಾದ ಮುಖಂಡರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಸೇರಲು ಕಾಂಗ್ರೆಸ್ ಶಾಸಕರ ದುಂಬಾಲು: ಸ್ಫೋಟಕ ಹೇಳಿಕೆ ಕೊಟ್ಟ ಕಟೀಲ್
ಅರವಿಂದ ಸಾವಂತ, ಶ್ರೀಶೈಲಗೌಡ ಸಾಲೋಟಗಿ, ಬಂದೇನವಾಜ ಗುಳೇಕಾರ, ನರಸಿಂಹ ಗಾಡಿವಡ್ಡರ, ವಿನಾಯಕ ಯಾದವ, ಈರಯ್ಯ ಮಠಪತಿ ಮೊದಲಾದವರು ಪಕ್ಷ ಸೇರ್ಪಡೆಯಾದರು. ಝಾಕೀರ ಮನಿಯಾರ, ಘೋರಕನಾಥ ಮೆಟಗಾರ, ಬೀರಪ್ಪ ಸಲಗರ, ಲಾಲಸಾಬ ಬರಡೋಲ, ರಾಜಕುಮಾರ ನಾಯ್ಕೋಡಿ, ಬಾಹುಸಾಹೇಬ ಕೆಂಗಾರ, ಲಾಯಪ್ಪ ವಾಘ್ಮೋಡೆ ಮುಂತಾದವರು ಇದ್ದರು.