ಕೂಡ್ಲಿಗಿಯಲ್ಲೊಬ್ಬ ಸನಾದಿ ಅಪ್ಪಣ್ಣ: ಬಿಸ್ಮಿಲ್ಲಾ ಖಾನ್‌ ನೆನಪಿಸುವ ಮೊರಬದ ವೀರಪ್ಪ..!

68ರ ಹರೆಯದ ವೀರಪ್ಪ 5ನೇ ತರಗತಿ ಓದಿ ತನ್ನ ವಂಶಜರು ಬಿಟ್ಟುಹೋದ ಬಳುವಳಿಯಾದ ಶಹನಾಯಿ ವಾದನ ಮಾಡಿಕೊಂಡು ಬದುಕು ಸವೆಸುತ್ತಿದ್ದಾರೆ. 

Morabad Veerappa Reminds Bismillah Khan of His Shehnai Music at Kudligi grg

ಭೀಮಣ್ಣ ಗಜಾಪುರ

ಕೂಡ್ಲಿಗಿ(ಜು.16):  ಈತ ಶಹನಾಯಿ ನುಡಿಸಲು ಪ್ರಾರಂಭಿಸಿದರೆ ನಿಮಗೆ ‘ಸನಾದಿ ಅಪ್ಪಣ್ಣ’ ಸಿನೆಮಾದಲ್ಲಿ ಬಿಸ್ಮಿಲ್ಲಾ ಖಾನ್‌ ಅವರ ಶಹನಾಯಿ ವಾದನ ನೆನಪಿಗೆ ಬರುತ್ತದೆ. ಇವರ ವಂಶದವರೂ ಸನಾದಿ ಅಪ್ಪಣ್ಣನಂತೆ ವಂಶಪಾರಂಪರ್ಯ ಶಹನಾಯಿ ಕಲಾವಿದರು. ಇಲ್ಲಿಗೆ ಸಮೀಪದ ಮೊರಬ ಗ್ರಾಮದ ಶಹನಾಯಿ ವಾದಕ ಚಲುವಾದಿ ವೀರಪ್ಪ ಈಗಲೂ ತನ್ನ ಶಹನಾಯಿ ವಾದನದಿಂದ ಬದುಕು ಕಟ್ಟಿಕೊಂಡಿದ್ದು, ದಕ್ಷಿಣಾದಿ, ಉತ್ತರಾದಿ ಸಂಗೀತ, ಶಾಸ್ತ್ರೀಯ, ಸುಗಮ ಸಂಗೀತ, ಜಾನಪದ ಹೀಗೇ ಯಾವುದೇ ಪ್ರಾಕಾರಗಳಲ್ಲಿ ತನ್ನ ಶಹನಾಯಿ ನುಡಿಸುತ್ತ ಕಳೆದ 50 ವರ್ಷಗಳಿಂದಲೂ ಪ್ರೇಕ್ಷಕರ ಮನತಣಿಸುತ್ತಿದ್ದಾರೆ.

68ರ ಹರೆಯದ ವೀರಪ್ಪ 5ನೇ ತರಗತಿ ಓದಿ ತನ್ನ ವಂಶಜರು ಬಿಟ್ಟುಹೋದ ಬಳುವಳಿಯಾದ ಶಹನಾಯಿ ವಾದನ ಮಾಡಿಕೊಂಡು ಬದುಕು ಸವೆಸುತ್ತಿದ್ದಾರೆ. ಇಲ್ಲಿವರೆಗೂ ಇವರಿಗೆ ಹಂಪಿ ಉತ್ಸವದಲ್ಲಿ ಶಹನಾಯಿ ನುಡಿಸಲು ಅವಕಾಶ ದೊರೆತಿಲ್ಲ. ಮಾಶಾಸನವೂ ಲಭಿಸಿಲ್ಲ.

ಸಿದ್ದರಾಮೋತ್ಸವಕ್ಕೆ ನೋ ಕಾಮೆಂಟ್‌ ಎಂದ ಆನಂದ ಸಿಂಗ್‌..!

ಇವರ ಅಣ್ಣ ಚೌಡಪ್ಪ ಸಹ ಉತ್ತಮ ಶಹನಾಯಿ ವಾದಕ. ಪತ್ನಿ ಶಾರದಮ್ಮ ಸೋಬಾನೆ ಪದ ಹಾಡುವುದರಲ್ಲಿ ಎತ್ತಿದ ಕೈ. ಮಗ ದ್ವಾರಕೀಶ್‌ ತಬಲಾ ವಾದಕ, ಉತ್ತಮ ಗಾಯಕ. ಇನ್ನೊಬ್ಬ ಪುತ್ರ ದ್ವಾರಕೀಶ ತಬಲಾವಾದಕ ಹಾಗೂ ಹಾಡುಗಾರ. ಇಬ್ಬರು ಹೆಣ್ಣುಮಕ್ಕಳಿದ್ದು ಎಲ್ಲರೂ ಒಂದೇ ಗೂಡಿನಲ್ಲಿ ವಾಸಿಸುತ್ತಿದ್ದಾರೆ. ಮೂರು ಎಕರೆ ಜಮೀನಿದ್ದರೂ ಮಳೆಯನ್ನೇ ಆಶ್ರಯಿಸಿ ಬೆಳೆಬೇಕಿದೆ.

ಮೇಳದ ವೀರಣ್ಣ:

ವೀರಪ್ಪ ತನ್ನ ಸ್ವಂತ ಗ್ರಾಮ ಮೊರಬದಲ್ಲಿ ಮೇಳದ ವೀರಣ್ಣನೆಂದೇ ಪ್ರಸಿದ್ಧ. ಮೊರಬ ಹಾಗೂ ಸುತ್ತಮುತ್ತಲ ಊರಲ್ಲಿ ಯಾರೇ ಸತ್ತರೂ ಶಹನಾಯಿಗೆ ವೀರಪ್ಪನೇ ಆಗಬೇಕು. ಮನೆಯಲ್ಲಿ ಯಾವುದೇ ಶುಭ ಕಾರ್ಯವಾದರೂ ಮೇಳದ ವೀರಣ್ಣ ಅಲ್ಲಿ ಹಾಜರ್‌. ಮೊರಬದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೀರಪ್ಪನ ಶಹನಾಯಿ ನುಡಿಯಲೇಬೇಕು. ಅಲ್ಲದೇ ಕೂಡ್ಲಿಗಿಯ ಶ್ರೀ ಕೊತ್ತಲ ಆಂಜನೇಯ, ಊರಮ್ಮ, ಪೇಟೆ ಬಸವೇಶ್ವರ ದೇವಸ್ಥಾನದ ಕಾರ್ಯಗಳಲ್ಲಿ ವೀರಣ್ಣನ ಶಹನಾಯಿ ಮೇಳೈಸುತ್ತದೆ.

ಹಿಂದೂಗಳ ಹತ್ಯೆ ನಡೆದ್ರೂ ಬಿಜೆಪಿ ಸರ್ಕಾರಗಳು ಕತ್ತೆ ಕಾಯುತ್ತಿವೆಯಾ?: ಮುತಾಲಿಕ್‌

40 ರಾಗ:

ಮಧುಂತಿ, ಚಂದ್ರಕಂಶ, ಮಾಲಕಂಸ, ಭೀಮಪಲಾಸ್‌, ಪಡುದೀಪ, ಭೈರವ, ಭೈರವಿ, ಚಾಂದ್‌ ರಾಗ, ಭೂಪರಾಗ, ಮದ್ವವತಿ, ಸಾರಂಗ, ತಿಲಂಗ, ಆನಂದ ಭೈರವಿ, ಹಂಸಧ್ವನಿ, ತೋಡಿರಾಗ, ದೇಶ್‌, ಕಲಾವತಿ ಸೇರಿದಂತೆ 40ಕ್ಕೂ ಹೆಚ್ಚು ರಾಗಗಳಲ್ಲಿ ಶಹನಾಯಿ ಊದುವ ವೀರಪ್ಪಗೆ ಇತರೆ ಸಂಗೀತದ ಬಗ್ಗೆಯೂ ಅಪಾರ ಜ್ಞಾನವಿದೆ.

ನಮ್ಮ ವಂಶಜರ ಬಳುವಳಿಯಾದ ಶಹನಾಯಿ ರಕ್ತಗತವಾಗಿ ಬಂದಿದ್ದು, ಇದರ ಜೊತೆಗೆ ಬನ್ನಿಕಲ್ಲಿನ ನಾಗಭೂಷಣ ಗವಾಯಿಗಳ ಹತ್ತಿರ ಸಂಗೀತ ಕಲಿತಿದ್ದೇನೆ. ಕೂಡ್ಲಿಗಿಯ ಕಟ್ಟಿಮನಿ ಗೋವಿಂದಪ್ಪನ ಹತ್ತಿರ ತಬಲಾವನ್ನೂ ಕಲಿತಿದ್ದೇನೆ. ಹಗರಿಬೊಮ್ಮನಹಳ್ಳಿ ತಾಲೂಕು ಮೊರಗೇರಿ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಕಾರಹುಣ್ಣಿಮೆಯ ಮರಡಿ ದುರುಗಮ್ಮನ ಜಾತ್ರೆಯಲ್ಲಿ ಶಹನಾಯಿ ವಾದನಕ್ಕೆ ನನ್ನನ್ನೇ ಕರೆಸುತ್ತಾರೆ ಅಂತ ಶಹನಾಯಿ ಕಲಾವಿದ ಚಲುವಾದಿ ವೀರಪ್ಪ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios