ಮಂಗಳೂರು(ಸೆ.26): ಮಂಗಳೂರಿನಲ್ಲಿ ಭಾರೀ ಹೊಂಡ ಗುಂಡಿಗಳಿಂದ ತುಂಬಿರುವ ಕೇಂದ್ರ ಮಾರುಕಟ್ಟೆ ಪ್ರದೇಶದಲ್ಲಿ ಗಗನಯಾತ್ರಿಯ ದಿರಿಸು ಧರಿಸಿ ‘ಮೂನ್‌ ವಾಕ್‌’ ಮಾಡುವ ಮೂಲಕ 6ನೇ ತರಗತಿ ಬಾಲಕಿಯೊಬ್ಬಳು ಗಮನ ಸೆಳೆದಿದ್ದಾಳೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ನಗರದ ಸಾಮಾಜಿಕ ಹೋರಾಟಗಾರ, ಮಂಗಳೂರು ನಗರ ಪಾಲಿಕೆ ನಾಗರಿಕ ಸಂಘಟನೆಯ ಅಜಯ್‌ ಡಿಸೋಜ ತಮ್ಮ ಮಗಳಿಗೆ ಗಗನಯಾತ್ರಿಯ ಉಡುಗೆ ತೊಡಿಸಿ ಮೂನ್‌ವಾಕ್‌ ಮಾಡಿಸಿದ್ದಾರೆ. ಬಾಲಕಿ ಆಡ್ಲಿನ್‌ ಕೂಡ ಅಷ್ಟೇ ಸೊಗಸಾಗಿ ನಟಿಸಿದ್ದಾಳೆ. ರಾತ್ರಿ 10 ಗಂಟೆ ವೇಳೆಗೆ ಕೇಂದ್ರ ಮಾರುಕಟ್ಟೆಪ್ರದೇಶದಲ್ಲಿ ಈ ಮೂನ್‌ ವಾಕ್‌ ನಡೆದಿದ್ದು, ಅದರ ವಿಡಿಯೊ ಚಿತ್ರೀಕರಣ ನಡೆಸಿ, ತಕ್ಕುದಾಗಿ ಮ್ಯೂಸಿಕ್‌ ಕೂಡ ಅಳವಡಿಸಿ ಜಾಲತಾಣದಲ್ಲಿ ಪಸರಿಸಲಾಗಿದೆ. ನೆಟ್ಟಿಗರಿಂದ ಈ ವಿಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಲ್ಲದೆ, ಮಂಗಳೂರಿನ ಹೊಂಡ- ಗುಂಡಿ ರಸ್ತೆಗಳ ಚಿತ್ರಣಗಳೂ ಜಗಜ್ಜಾಹೀರಾಗಿ ನೆಟ್ಟಿಗರಿಂದ ಆಕ್ರೋಶವೂ ಹೊರಹೊಮ್ಮಿದೆ. ಮಂಗಳೂರಿನ ಅನೇಕ ಕಡೆ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿವೆ. ಸಂಬಂಧಿಸಿದವರಿಗೆ ಈ ಕುರಿತು ತಿಳಿಸಿದರೂ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ರಸ್ತೆ ದುರಸ್ತಿಯ ಆಂದೋಲನ ನಡೆಸುವ ಭಾಗವಾಗಿ ನನ್ನ ಮಗಳಿಗೇ ಗಗನಯಾನಿ ದಿರಿಸು ಹಾಕಿ ಮೂನ್‌ವಾಕ್‌ ನಡೆಸಿದ್ದೇನೆ. ಕೂಡಲೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಅಜಯ್‌ ಡಿಸೋಜ ಒತ್ತಾಯಿಸಿದ್ದಾರೆ.

ಮಂಗಳೂರು: 16ನೇ ಪ್ರಕರಣದಲ್ಲಿ ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ