Asianet Suvarna News Asianet Suvarna News

ಚಿಕ್ಕವಯಸ್ಸಿನಲ್ಲೇ ಮೂಕಪ್ಪ ಶಿವಾಚಾರ್ಯಶ್ರೀ ಲಿಂಗೈಕ್ಯ: ಕಂಬನಿ ಮಿಡಿದ ಭಕ್ತರು

ಮೂಕಪ್ಪ ಶಿವಾಚಾರ್ಯ ಶ್ರೀಗಳು ಲಿಂಗೈಕ್ಯ| ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರದ ಮಹಾಸಂಸ್ಥಾನ ದಾಸೋಹಮಠದ ಮೂಕಪ್ಪ ಶಿವಾಚಾರರ್ಯ ಶ್ರೀಗಳು| ಯಮನೂರ ಗ್ರಾಮದಲ್ಲಿ ಭಿಕ್ಷಾಟನೆಗಾಗಿ ತೆರಳಿದ ವೇಳೆ ಶಿವಾಧೀನ| 

Mookappa Shivacharya Shri Passed Away in Byadagi in Haveri District
Author
Bengaluru, First Published Mar 20, 2020, 12:31 PM IST

ಬ್ಯಾಡಗಿ(ಮಾ.20): ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರದ ಮಹಾಸಂಸ್ಥಾನ ದಾಸೋಹಮಠದ ಹಿರಿಯ ಮೂಕಪ್ಪ ಶಿವಾಚಾರ್ಯಶ್ರೀಗಳು (ವೃಷಭರೂಪಿ) ಗುರುವಾರ ಬೆಳಗ್ಗೆ ಸೊರಬ ತಾಲೂಕಿನ ಯಮನೂರ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತಶ್ರೀಗಳು ಸೊರಬ ತಾಲೂಕಿನ ಬೆಟ್ಟದಕುರ್ಲಿ ಗ್ರಾಮದಲ್ಲಿ 2013 ರಲ್ಲಿ ಜನಿಸಿದ್ದ ಶ್ರೀಗಳಿಗೆ ಬಳಿಕೆ 2014ರಲ್ಲಿ ಪಟ್ಟಾಭೀಷೇಕ ಮಾಡಲಾಗಿತ್ತು. ಸುಮಾರು 5 ವರ್ಷಗಳ ಕಾಲ ಮಠದ ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶ್ರೀಗಳು ಗುರುವಾರ ಬೆಳಗ್ಗೆ 8.45ಕ್ಕೆ ಸೊರಬ ತಾಲೂಕಿನ ಯಮನೂರ ಗ್ರಾಮದಲ್ಲಿ ಭಿಕ್ಷಾಟನೆಗಾಗಿ ತೆರಳಿದ ವೇಳೆ ಶಿವಾಧೀನರಾಗಿದ್ದಾರೆ. 

ಮಧ್ಯಾಹ್ನ 12ರ ವರೆಗೆ ಅಂತಿಮ ದರ್ಶನ: 

ಯಮನೂರ ಗ್ರಾಮದಿಂದ ಗುಡ್ಡದಮಲ್ಲಾಪುರ ಗ್ರಾಮಕ್ಕೆ ವಾಹನದಲ್ಲಿ ಮೂಕಪ್ಪ ಶ್ರೀಗಳನ್ನು ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 12.30ಕ್ಕೆ ಮಠದ ಆವರಣದಲ್ಲಿ ಅಂತ್ಯಕ್ತಿಯೆ ಕಾರ್ಯಕ್ರಮಗಳನ್ನು ವೀರಶೈವ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

ಶ್ರೀಮಠದಲ್ಲಿ ದುಃಖ: 

ಹಿರಿಯಶ್ರೀಗಳ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಮಠವು ದುಃಖದಲ್ಲಿ ಮುಳುಗಿತು. ಮಠದ ಆವರಣಕ್ಕೆ ದೌಡಾಯಿಸಿದ ಸಾವಿರಾರು ಸಂಖ್ಯೆಯ ಭಕ್ತ ಸಮೂಹವು ಶ್ರೀಗಳ ಅಗಲಿಕೆಗೆ ಅಶ್ರುತರ್ಪಣ ಸುರಿಸಿದರು. ಗಣ್ಯರ 

ಸಂತಾಪ: 

ಶ್ರೀಗಳ ನಿಧನಕ್ಕೆ ಸಂಸದ ಶಿವಕುಮಾರ ಉದಾಸಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಬಸವರಾಜ ಶಿವಣ್ಣನವರ, ಮುಖಂಡರಾದ ಎಸ್.ಆರ್. ಪಾಟೀಲ ಸೇರಿದಂತೆ ಅನೇಕರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶ್ರೀಮಠದ ಧರ್ಮಾಧಿಕಾರಿ ಮೃತ್ಯುಂಜಯ ಮಹಾಸ್ವಾಮಿಗಳು ಅವರು, ಶ್ರೀಗಳ ಅಗಲಿಕೆ ನೀರೀಕ್ಷಿಸಿದ್ದಿಲ್ಲ. ಬಹಳಷ್ಟು ಆರೋಗ್ಯದಿಂದಿದ್ದ ಶ್ರೀಗಳು ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಾ ಭಿಕ್ಷಾಟನೆ ಮಾಡಿದ್ದರೂ ಸ್ವಲ್ಪವೂ ಬಳಲಿದ ಉದಾಹರಣೆಗಳಿಲ್ಲ. ಅತಿ ಚಿಕ್ಕವಯಸ್ಸಿನಲ್ಲೇ ಶ್ರೀಗಳ ಅಗಲಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios