ಸಕ​ಲೇ​ಶ​ಪುರ(ಜು.01): ವೃದ್ಧೆಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂ​ಕಿನ ಬೆಳ​ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಗಲಿ ಗ್ರಾಮವನ್ನು ಮಂಗ​ಳ​ವಾರ ಸೀಲ್‌ಡೌನ್‌ ಮಾಡಲಾಗಿದೆ.

ಮೂಗಲಿ ಗ್ರಾಮದ 70 ವರ್ಷದ ವೃದ್ಧೆಯೊಬ್ಬರಿಗೆ ಕೊವಿಡ್‌ 19 ರೋಗ ಲಕ್ಷಣ ಕಂಡು ಬಂದಿದೆ. ಹಾಗಾಗಿ ತಾಲೂಕು ಆಡಳಿತ ಗ್ರಾಮದ ಮೂರು ಅಡ್ಡ ರಸ್ತೆಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್‌ ಮಾಡಲಾಗಿದೆ. ಗ್ರಾಮದಲ್ಲಿ ಕಂಟೈನ್ಮೆಂಟ್‌ ಹಾಗೂ ಬಫರ್‌ ಜೋನ್‌ಗಳಾಗಿ ವಿಂಗಡಣೆ ಮಾಡಿ ಕಂಟೈನ್ಮೆಂಟ್‌ ಜೋನಿನ 100 ಮೀಟರ್‌ ದೂರದವರೆಗೂ ವಿಸ್ತರಿಸಿ ಜನರು ಬ್ಯಾರಿಕೇಡ್‌ ಹಾಕಿರುವ ಬಳಿ ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಂಡು ಹೋಗಬಹುವುದು ಹಾಗೆ ಬಫರ್‌ ಜೋನ್‌ನ್ನು 200 ಮೀಟರ್‌ಗೆ ವಿಸ್ತರಿಸಿ ಇಲ್ಲಿ ಯಾವುದೇ ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳು ತುರ್ತು ಸೇವೆಗೆ ಮಾತ್ರ ಅವಕಾಶವಿದೆ ಎಂದು ತಹಸೀಲ್ದಾರ್‌ ಮಂಜುನಾಥ್‌ ತಿಳಿಸಿದ್ದಾರೆ. ಬಫರ್‌ ಜೋನಿನಲ್ಲಿರುವ ಜನರು ಒಳಗೆ ಬರುವಂತಿಲ್ಲ ಹಾಗೂ ಹೊರಗೂ ಹೋಗದಂತೆ ತಡೆಯಾಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹಾಸನ:  ಹೊಟ್ಟೆ ನೋವು, SSLC ಪರೀಕ್ಷೆ ಸರಿಯಾಗಿಲ್ಲ, ಬಾಲಕಿ ಆತ್ಮಹತ್ಯೆ

ವೃದ್ಧೆಗೆ ಕೊರೋನಾ ಪಾಸಿಟಿವ್‌ ಇನ್ನೂ ಅಧಿಕೃತವಾಗಿ ಜಿಲ್ಲಾಡಾಳಿತ ವರದಿ ನೀಡಿಲ್ಲ ಆದರೂ ವೈರಸ್‌ ಹರಡದಂತೆ ಮುನ್ನೆಚ್ಚರಿಕೆಯಿಂದ ಕ್ರಮ ಕೈಗೊಳ್ಳಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಹೇಶ್‌ ತಿಳಿಸಿದರು.
ಸ್ಥಳಕ್ಕೆ ಡಿವೈಎಸ್ಪಿ ಬಿ ಆರ್‌ ಗೋಪಿ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಆರ್‌. ಹರೀಶ್‌, ವೃತ್ತ ನಿರೀಕ್ಷಕ ಗಿರೀಶ್‌, ಪಿಎಸ್‌ಐ ರಾಘವೇಂದ್ರ ಉಪ ತಹಸೀಲ್ದಾರ್‌ ನಾಗರಾಜ್‌, ಬೆಳಗೋಡು ಹೋಬಳಿ ಕಂದಾಯ ನಿರೀಕ್ಷಕ ಜನಾರ್ಧನ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಲ್ಲಾಸ್‌ ಇದ್ದರು.