Chikkamagaluru Rain: ಮುಂಗಾರು ಮಳೆ ಅಬ್ಬರಕ್ಕೆ ಸಾಲು ಸಾಲು ಅನಾಹುತ, ಅಪಾರ ಪ್ರಮಾಣದ ಹಾನಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಜಿಲ್ಲಾಡಳಿತದಿಂದ ಮಳೆಹಾನಿ ಪಟ್ಟಿ ಮಾಡಲಾಗುತ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.21): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಮನೆಗಳು ಕೂಡ ನೆಲಸಮವಾಗಿದ್ದು ಜಿಲ್ಲಾಡಳಿತದಿಂದ ಮಳೆ ಹಾನಿಯ ಪಟ್ಟಿ ರೆಡಿಯಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಜೀವ ಹಾನಿ, ಜಾನುವಾರುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮುಂಗಾರು ಮಳೆ ಅಬ್ಬರಕ್ಕೆ ಹಾನಿ:
ಮಳೆ ಅಬ್ಬರಕ್ಕೆ ಜೂನ್ ತಿಂಗಳಿನಿಂದ ಜುಲೈ 20ರವರೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, 55 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟಾಗಿದೆ.ಜಿಲ್ಲಾಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ 101 ಕಿಲೋಮೀಟರ್ ರಸ್ತೆ ಹಾಳಾಗಿದೆ. 19ಸೇತುವೆಗಳು, 15 ಸರ್ಕಾರಿ ಶಾಲೆಗಳು ಮತ್ತು 26 ಅಂಗನವಾಡಿಗಳಿಗೆ ಧಕ್ಕೆಯಾಗಿದೆ.ಮೆಸ್ಕಾಂಗೆ ಸೇರಿದ 1128 ವಿದ್ಯುತ್ಕಂಬಗಳು ಧರೆಗುರುಳಿದ್ದರೆ, ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ಜನರು ಕತ್ತಲೆಯಲ್ಲಿ ಜೀವನ ಸಾಗಿಸುವಂತಾಗಿದೆ.ವಿದ್ಯುತ್ ಸಮಸ್ಯೆಯಿಂದ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು, ಸಂಪರ್ಕಕ್ಕೆ ಪರದಾಡುವಂತಾಗಿದೆ.
ಕುರುಬ ಸಮುದಾಯ ಎಸ್.ಟಿ ಮೀಸಲಾತಿ, ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ
64 ಮನೆಗಳಿಗೆ ಹಾನಿ:
ಗದ್ದೆಗೆ ತೆರಳುತ್ತಿದ್ದ ಮೂಡಿಗೆರೆ ತಾಲೂಕು ದಾರದಹಳ್ಳಿಯ 65 ವರ್ಷದ ದೇವಮ್ಮ ಕೆಲವು ದಿನಗಳಹಿಂದೆ ಹೇಮಾವತಿ ನದಿನೀರಿನಲ್ಲಿಹೊಚ್ಚಿಹೋಗಿದ್ದು, ಇವರು ಸೇರಿದಂತೆ ಜಿಲ್ಲೆಯಲ್ಲಿ ಇಬ್ಬರು ಸಾವಪ್ಪಿದಂತಾಗಿದೆ. ನಾಲ್ಕು ಜಾನುವಾರುಗಳು ಅಸುನೀಗಿವೆ. ತೋಟಗಾರಿಕೆ ಬೆಳೆಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಜಿಲ್ಲೆಯಲ್ಲಿ 64 ಮನೆಗಳಿಗೆ ಹಾನಿಯಾಗಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಆಗಿರುವ ನಷ್ಟದ ಅಂದಾಜು ತಯಾರಿಸಲಾಗುತ್ತಿದೆ. ಪೂರ್ಣಪ್ರಮಾಣದಲ್ಲಿ ಸಮೀಕ್ಷೆ ನಡೆಸಿದ ಬಳಿಕ ನಷ್ಟದ ಅಂದಾಜು ತಯಾರಿಸಿ ಪರಿಹಾರಕ್ಕೆ ಸರ್ಕಾರಕ್ಕೆ ಜಿಲ್ಲಾಡಳಿ ವರದಿ ಸಲ್ಲಿಸಲಿದೆ.ಬಯಲು ಪ್ರದೇಶವಾದ ಕಡೂರು, ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಈಗಾಗಲೇ ರೈತರು ಹೆಸರು, ಉದ್ದು, ಅಲಸಂದೆ,ಹತ್ತಿ ಮತ್ತು ಸೂರ್ಯಕಾಂತಿ ಬಿತ್ತನೆಯಾಗಿದೆ.ಅಲ್ಲಿ ಬೀಳುತ್ತಿರುವ ಸಾಧಾರಣ ಮಳೆ ಬೆಳೆಗಳಿಗೆ ಸಹಕಾರಿಯಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ರಾಗಿ ಮತ್ತು ಹತ್ತಿಯ ಬಿತ್ತನೆ ಕಾರ್ಯ ನಡೆಯುತ್ತಿದೆ.
ದಾವಣಗೆರೆಯಲ್ಲಿ ಬಾರ್ ಹಟಾವೋ, ಕುಡುಕರ ಕಾಟಕ್ಕೆ ಬೇಸತ್ತ ಮಹಿಳೆಯರಿಂದ ಧರಣಿ ಎಚ್ಚರಿಕೆ
ಪ್ರಮುಖ ನದಿಗಳಿಗೆ ಜೀವಕಳೆ:
ಮಲೆನಾಡು ಭಾಗದಲ್ಲಿ ಮಳೆಮುಂದುವರೆದಿರುವುದರಿಂದ ನಾಡಿನ ಜೀವನದಿಗಳಾದ ತುಂಗಾ,ಭದ್ರೆ, ಹೇಮಾ ವತಿ ನದಿಗಳ ನೀರಿನ ಹರಿವು ಹೆಚ್ಚಳಗೊಂಡಿದೆ. ಮರಗಳು ರಸ್ತೆಗೆ ಉರುಳುತ್ತಿದ್ದು, ವಿಪತ್ತು ನಿರ್ವಹಣಾ ತಂಡಗಳು ಸ್ವಯಂಸೇವಕರುಗಳೊಂದಿಗೆ ತೆರವುಗೊಳಿಸುವ ಕಾರ್ಯನಡೆಯುತ್ತಿದೆ. ಅಲ್ಲಲ್ಲಿ ತಡೆಗೋಡೆಗಳು ಕುಸಿಯುತ್ತಿವೆ. ಅವನ್ನು ತಡೆಯಲು ಟಾರ್ಪಲ್ ಕಟ್ಟಿ ಮಳೆನೀರು ಬೀಳದಂತೆ ನೋಡಿಕೊಳ್ಳಲಾಗುತ್ತಿದೆ.ಅತಿವೃಷ್ಟಿಯಲ್ಲಿ ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತ ಈಗಾಗಲೇ ಸಜ್ಜುಗೊಂಡಿದ್ದು, ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ಒಟ್ಟಾರೆಯಾಗಿ ವಿಪತ್ತನ್ನು ಸಮರ್ಪಕವಾಗಿ ನಿಭಾಹಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಮಾಡಿಕೊಳ್ಳಲಾಗಿದೆ.