ಚಿಕ್ಕಮಗಳೂರು: ಉತ್ತಮ ಮಳೆಗೆ ಚುರುಕು ಪಡೆದ ಬಿತ್ತನೆ ಕಾರ್ಯ

ಬರದ ನಾಡಾಗಿರುವ ಕಡೂರು ತಾಲೂಕಿನಲ್ಲೂ ಈ ಬಾರಿ ವಾಡಿಕೆ ಮಳೆ ಉತ್ತಮವಾಗಿದ್ದ ಪರಿಣಾಮ ತಾಲೂಕಿನಾದ್ಯಂತ ಎಣ್ಣೆಕಾಳುಗಳ ಬೀಜಗಳ ಬಿತ್ತನೆ ಕಾರ್ಯ ಸೇರಿದಂತೆ ಇತರೆ ಕಾಳುಗಳ ಬಿತ್ತನೆಗೂ ಚಾಲನೆ ದೊರೆತಿದೆ. ಚುರುಕಿನಿಂದ ಸಾಗಿದೆ.

Monsoon good rains Farmers at sowing in kaduru at chikkamagaluru rav

ಕಡೂರು ಕೃಷ್ಣಮೂರ್ತಿ.

ಕಡೂರು (ಮೇ.27) : ಬರದ ನಾಡಾಗಿರುವ ಕಡೂರು ತಾಲೂಕಿನಲ್ಲೂ ಈ ಬಾರಿ ವಾಡಿಕೆ ಮಳೆ ಉತ್ತಮವಾಗಿದ್ದ ಪರಿಣಾಮ ತಾಲೂಕಿನಾದ್ಯಂತ ಎಣ್ಣೆಕಾಳುಗಳ ಬೀಜಗಳ ಬಿತ್ತನೆ ಕಾರ್ಯ ಸೇರಿದಂತೆ ಇತರೆ ಕಾಳುಗಳ ಬಿತ್ತನೆಗೂ ಚಾಲನೆ ದೊರೆತಿದೆ. ಚುರುಕಿನಿಂದ ಸಾಗಿದೆ.

ಪೂರ್ವ ಮುಂಗಾರಿನಲ್ಲೇ ಆದ ಉತ್ತಮ ಮಳೆಯಿಂದಾಗಿ ತಾಲೂಕಿನಾದ್ಯಂತ ಸೂರ್ಯಕಾಂತಿ, ಎಳ್ಳು, ಶೇಂಗಾ ಸೇರಿದಂತೆ ಹೆಸರು, ಉದ್ದುವಿನಂತಹ ಬೀಜಗಳ ಬಿತ್ತನೆಯು ಆರಂಭವಾಗಿದ್ದು, ವರುಣ ಕೃಪೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Karnataka rains: ಸಿಡಿಲು ಸಹಿತ ಗಾಳಿ ಮಳೆಗೆ ಅಪಾರ ಹಾನಿ: ಮಂಡ್ಯದಲ್ಲಿ ಜೋಡೆತ್ತುಗಳು ಬಲಿ!

ರಸಗೊಬ್ಬರದ ಕೊರತೆ ಇಲ್ಲ: ಬಿತತನೆ ಕಾರ್ಯ ಚುರುಕು ಪಡೆದಿರುವ ಜತೆಗೆ ಕೃಷಿಗೆ ಅಗತ್ಯವೆನಿಸಿರುವ ಔಷಧಿ, ರಸಗೊಬ್ಬರ ಸೇರಿದಂತೆ ಎಲ್ಲ ರೀತಿಯ ಬಿತ್ತನೆ ಬೀಜಗಳು ತಾಲೂಕಿನ 7 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲೂಕಿನಲ್ಲಿ ಈ ಭಾರಿ ಇದುವರೆಗೂ ಒಟ್ಟು 105 ಮಿ.ಮೀ. ನಷ್ಟುವಾಡಿಕೆ ಮಳೆ ಉತ್ತಮವಾಗಿ ಬಂದಿದ್ದು, ರೈತರು ಸಂತಸದಿಂದ ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದರಿಂದ ಬಿತ್ತನೆ ಕೆಲಸ ಚುರುಕಿನಿಂದ ಸಾಗಿದೆ. ಅದರಲ್ಲೂ ಬೆಳೆವಾರು ಬಿತ್ತನೆಗೆ ಆದ್ಯತೆ ನೀಡಿ ಬಿತ್ತನೆ ಆರಂಭವಾಗಿದ್ದು ಎಳ್ಳು 360 ಹೆಕ್ಟೇರ್‌, ಹೆಸರು 550 ಹೆಕ್ಟೇರ್‌, ಉದ್ದು 240 ಹೆಕ್ಟೇರ್‌, ಶೇಂಗಾ 470 ಹೆಕ್ಟೇರ್‌, ಎಳ್ಳು 310 ಹೆಕ್ಟೇರ್‌, ಸೂರ್ಯಕಾಂತಿ 150 ಹೆಕ್ಟೇರ್‌ ಮತ್ತು ತೊಗರಿ ಸೇರಿದಂತೆ ತಾಲೂಕಿನಲ್ಲಿ ಈಗಾಗಲೇ ಸುಮಾರು 550 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಒಟ್ಟಾರೆ ಈ ಬಾರಿ ತಾಲೂಕಿನ ಎಲ್ಲೆಡೆ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದು ಮುಂದೆಯೂ ಕೃಷಿ ಅನುಕೂಲಕ್ಕೆ ತಕ್ಕಂತೆ ಕಾಲಕಾಲಕ್ಕೆ ಮಳೆಯಾದರೆ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಕಡೂರು ತಾಲೂಕಿನ ಗ್ರಾಮದಲ್ಲಿ ಪೂರ್ವ ಮುಂಗಾರಿನ ಬಿತ್ತನೆ ಕಾರ್ಯಆರಂಭಗೊಂಡಿರುವುದು.

ಮಳೆ ವಿವರ - ಮೇ 15ವರೆಗೆ ಬಂದಿರುವ ಮಳೆ ಮಾಹಿತಿ.

ಕಡೂರು - 78ಮಿ.ಮೀ.,ಕಡೂರು -50ಮಿ.ಮಿ., ಬೀರೂರು-109 ಮಿ.ಮೀ, ಹಿರೇನಲ್ಲೂರು-93.5 ಮಿ.ಮೀ., ಸಖರಾಯಪಟ್ಟಣ-118 ಮಿ.ಮೀ, ಸಿಂಗಟಗೆರೆ-40.3, ಯಗಟಿ- 49.2, ಪಂಚನಹಳ್ಳಿ -58.3, ಚೌಳಹಿರಿಯೂರು- 61.7 ಮಿ.ಮೀ ಮಳೆಆಗಿದೆ.

ಬಿತ್ತನೆ ಕುರಿತಂತೆ ಕೃಷಿ ಸಹಾಯಕ ನಿರ್ದೇಶಕ ತಿಮ್ಮನ ಗೌಡ ಎಸ್‌.ಪಾಟೀಲ್‌ ಮಾಹಿತಿ ನೀಡಿ, ಈಗಾಗಲೇ ಬಿತ್ತನೆ ಕಾರ್ಯ ಆರಂಭಗೊಂಡಿÜದ್ದು, ಕಡೂರು ತಾಲೂಕಿನಲ್ಲಿ 54 ಸಾವಿರ ಹೆಕ್ಟ್ೕರ್‌ನಲ್ಲಿ ವಿವಿಧ ಬೀಜಗಳ ಬಿತ್ತನೆಗೆ ಗುರಿ ಹೊಂದಲಾಗಿದೆ. ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ . ಗೊಬ್ಬರ, ಯೂರಿಯಾ, ಡಿಎಪಿ, ಔಷಧಿ ಗೊಬ್ಬರ ಬೀಜಗಳು ತಾಲೂಕಿನ ಎಲ್ಲ ರೈತ ಸಂಪಕ} ಕೇಂದ್ರಗಳಲ್ಲಿ ದಾಸ್ತಾನಿದ್ದು ಕೊರತೆ ಇಲ್ಲ.

Latest Videos
Follow Us:
Download App:
  • android
  • ios