Rain update: ಮಂಗಳೂರು, ಉಡುಪಿ ಭಾಗದಲ್ಲಿ ಮುಂಗಾರು ಚುರುಕು
ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆ ಶನಿವಾರ ತುಸು ವೇಗ ಪಡೆದುಕೊಂಡಿದೆ. ಇದೇ ವೇಳೆ ಜೂ.25ರಂದು ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಚ್ ಘೋಷಿಸಿದೆ.
ಮಂಗಳೂರು (ಜೂ.25): ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆ ಶನಿವಾರ ತುಸು ವೇಗ ಪಡೆದುಕೊಂಡಿದೆ. ಇದೇ ವೇಳೆ ಜೂ.25ರಂದು ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಚ್ ಘೋಷಿಸಿದೆ.
ಕರಾವಳಿಯಲ್ಲಿ ಶನಿವಾರ ಇಡೀ ದಿನ ತುಂತುರು, ಹಗುರ ಮಳೆ ಕಾಣಿಸಿದೆ. ಮಂಗಳೂರಿನಲ್ಲಿ ಅಪರಾಹ್ನ ಮಳೆ ಶುರುವಾಗಿದ್ದು, ತುಂತುರು ಮಳೆ ಚಳಿ ಹಿಡಿಸಿದೆ. ದ.ಕ. ಗ್ರಾಮೀಣ ಭಾಗಗಳಲ್ಲೂ ನಿರಂತರ ತುಂತುರು ಮಳೆ ಮುಂದುವರಿದಿದೆ. ಹವಾಮಾನ ಇಲಾಖೆ ಪ್ರಕಾರ ಭಾನುವಾರ ಆರೆಂಜ್ ಅಲರ್ಚ್ ಇದ್ದು, ಜೂ.29ರ ವರೆಗೆ ಯೆಲ್ಲೋ ಅಲರ್ಚ್ ಘೋಷಿಸಿದೆ.
Karnataka Monsoon: ಕೊಡಗಿನಲ್ಲಿ ಚುರುಕುಗೊಂಡ ಮಳೆ; ಕರಾವಳಿಯಲ್ಲಿ ಸಾಧಾರಣ
ಮೂಡುಬಿದಿರೆ ಗರಿಷ್ಠ ಮಳೆ:
ಶನಿವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಮೂಡುಬಿದಿರೆಯಲ್ಲಿ ಗರಿಷ್ಠ 59 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 30.8 ಮಿ.ಮೀ, ಬಂಟ್ವಾಳ 26.9 ಮಿ.ಮೀ, ಪುತ್ತೂರು 23.8 ಮಿ.ಮೀ, ಮಂಗಳೂರು 45.5 ಮಿ.ಮೀ, ಸುಳ್ಯ 34.3 ಮಿ.ಮೀ, ಕಡಬ 14.6 ಮಿ.ಮೀ. ಮಳೆ ದಾಖಲಾಗಿದ್ದು, ದಿನದ ಸರಾಸರಿ ಮಳೆ 30.9 ಮಿ.ಮೀ. ಆಗಿದೆ.
ಮಳೆ ಯು 132)- ಉಡುಪಿ: ಸ್ವರ್ಣಾ ನದಿಯಲ್ಲಿ ನೀರಿನ ಹರಿವು ಆರಂಭ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಆರಂಭವಾದ ಮಳೆ ಶನಿವಾರವೂ ಮುಂದುವರಿಯಿತು. ಶನಿವಾರ ದಿನವಿಡೀ ಮೋಡ ಕವಿದಿದ್ದು, ನಡುವೆ ಆಗಾಗ್ಗೆ ಬಿರುಸಿನಿಂದ ಮಳೆ ಸುರಿಯಿತು.
ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ, ಸಂಪೂರ್ಣ ಬತ್ತಿ ಹೋಗಿದ್ದ ಸ್ವರ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಶುಕ್ರವಾರ ಒಂದೇ ದಿನದಲ್ಲಿ ನದಿಯಲ್ಲಿ 2.45 ಮೀಟರ್‌ನಷ್ಟುನೀರು ಏರಿಕೆಯಾಗಿದೆ. ಶುಕ್ರವಾರ ರಾತ್ರಿ ಸುರಿದ ಜಡಿ ಮಳೆಗೆ ಉಡುಪಿ ಸಮೀಪದ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ಸುಮಾ ರಮೇಶ್ ಆಚಾರ್ಯ ಅವರ ಮನೆಯ ಗೋಡೆ ಕುಸಿದು ಬಿದ್ದು, 1 ಲಕ್ಷ ರು. ನಷ್ಟವಾಗಿದೆ. ಸಂಜೆ 6 ಗಂಟೆಗೆ ಅವರು ಬೆಕ್ಕಿಗೆ ತಿಂಡಿ ಹಾಕಲೆಂದು ಮನೆಯಿಂದ ಹೊರಗೆ ಬಂದಿದ್ದಾಗ ಹಠಾತ್ತನೇ ಗೋಡೆ ಕುಸಿದಿದೆ. ಬೆಕ್ಕಿನ ದೆಸೆಯಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮತ್ತೆ ಮಳೆ: ಇಲಿ ಜ್ವರ ಭೀತಿ
ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ನೀಲು ಎಂಬವರ ಮನೆ ಮೇಲೆ ಮರ ಬಿದ್ದು, 30 ಸಾವಿರ ರು., ಚಂದ್ರ ಅವರ ಮನೆ ಮೇಲೆ ಮರ ಬಿದ್ದು 35 ಸಾವಿರ ರು., ತೆಕ್ಕಟ್ಟೆಗ್ರಾಮದ ಗುಲಾಬಿ ಅವರ ಮನೆಯ ತಗಟಿನ ಮಾಡು ಗಾಳಿಗೆ ಹಾನಿಗೊಂಡು 15 ಸಾವಿರ ರು., ಬಸ್ರೂರು ಗ್ರಾಮದ ಮುತ್ತು ಮಡಿವಾಳ ಎಂಬ ಮನೆಗೆ ಭಾಗಶಃ ಹಾನಿಯಾಗಿ 25 ಸಾವಿರ ರು. ನಷ್ಟಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 54.30 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 51.80 ಮಿ.ಮೀ., ಬ್ರಹ್ಮಾವರ 59.50 ಮಿ.ಮೀ., ಕಾಪು 74.60 ಮಿ.ಮೀ., ಕುಂದಾಪುರ 49.90, ಬೈಂದೂರು 62.40, ಕಾರ್ಕಳ 47.70, ಹೆಬ್ರಿ 44.90 ಮಿ.ಮೀ. ಮಳೆ ದಾಖಲಾಗಿದೆ.