ಮಲೆನಾಡಲ್ಲಿ ಮಳೆ ಅಬ್ಬರ; ಅಪಾಯಮಟ್ಟದಲ್ಲಿ ನದಿಗಳು!
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟ ಹಾಗೂ ಗಿರಿ ತಪ್ಪಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರಿನ ಅಬ್ಬರಕ್ಕೆ ನದಿಗಳು ತುಂಬಿ ಹರಿಯುತ್ತಿವೆ. ಈ ನಡುವೆ ಯಾವುದೇ ವೈಪರೀತ್ಯವನ್ನು ಎದುರಿಸಲು ಆಯಾ ತಾಲ್ಲೂಕು ಆಡಳಿತಗಳು ಸನ್ನದ್ಧವಾಗಿವೆ.
ಚಿಕ್ಕಮಗಳೂರು (ಜು.8) : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟ ಹಾಗೂ ಗಿರಿ ತಪ್ಪಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರಿನ ಅಬ್ಬರಕ್ಕೆ ನದಿಗಳು ತುಂಬಿ ಹರಿಯುತ್ತಿವೆ. ಈ ನಡುವೆ ಯಾವುದೇ ವೈಪರೀತ್ಯವನ್ನು ಎದುರಿಸಲು ಆಯಾ ತಾಲ್ಲೂಕು ಆಡಳಿತಗಳು ಸನ್ನದ್ಧವಾಗಿವೆ.
ಗೋಪುರದ ಬಳಿ ತೆರಳಲು ಪ್ರವಾಸಿಗರಿಗೆ ನಿಷೇಧ :
ಚಿಕ್ಕಮಗಳೂರು(chikkamagaluru) ಹಾಗೂ ತರೀಕೆರೆ ತಾಲ್ಲೂಕಿನ ಚಂದ್ರದ್ರೋಣ ಪರ್ವತ(chandradrona hills) ಸಾಲಿನಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದಿರಿಂದ ಗಿರಿ ತಪ್ಪಲಿನ ಹಿರೇಕೊಳಲೆ ಕೆರೆ ತುಂಬುವ ಹಂತಕ್ಕೆ ಬಂದಿದೆ.ನಗರದ ಏಳೆಂಟು ವಾರ್ಡುಗಳಿಗೆ ಕುಡಿಯುವ ನೀರನ್ನು ಒದಿಗಿಸುವ ಈ ಕೆರೆಯ ಕೋಡಿ ವರೆಗೆ ನೀರು ತುಂಬಿದೆ. ಇನ್ನೊಂದೆರೆಡು ದಿನಗಳಲ್ಲಿ ಕೋಡಿಯ ಬೀಳುವ ಸಾಧ್ಯತೆಗಳಿವೆ.ಈಗಲೇ ಕೆರೆಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆರೆಯ ವೀಕ್ಷಣಾ ಗೋಪುರ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಗೋಪುರದ ಬಳಿ ತೆರಳಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ರಾಜ್ಯದಲ್ಲಿ ಮುಂದುವರಿದ ಕಾಡಾನೆ ಸಾವು; ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ನಲ್ಲಿ ಬೃಹತ್ ಹೆಣ್ಣಾನೆ ಕಳೇಬರ ಪತ್ತೆ!
ಗೋಪುರಕ್ಕೆ ನಿರ್ಮಿಸಲಾಗಿರುವ ಕಾಲು ಸೇತುವೆ ಸಹ ಹಳೆಯದಾಗಿದ್ದು, ಯಾವುದೇ ಸಂದರ್ಭದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಗಳಿರುವ ಕಾರಣ ಸೇತುವೆಯ ಹಾದಿಗೆ ಅಡ್ಡಲಾಗಿ ಪೊಲೀಸರು ಬೇಲಿ ಹಾಕಿದ್ದಾರೆ. ಅಲ್ಲದೆ ಯಾರೂ ಸಹ ವೀಕ್ಷಣಾ ಗೋಪುರಕ್ಕೆ ತೆರಳಬಾರದು ಎಂದು ಗ್ರಾಮಾಂತರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಇನ್ನು ಮಲೆನಾಡು ಭಾಗದಲ್ಲಿ ಇಂದು ಬೆಳಗಿನಿಂದಲೂ ನಿರಂತರವಾಗಿ ಮಳೆ ಸುರಿಯುತಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ, ಬಣಕಲ್ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಭಾರೀ ಪ್ರಮಾಣದ ನೀರು ಹಾಸನದ ಗೊರೂರು ಡ್ಯಾಂಗೆ ಸೇರುತ್ತಿದೆ.
ಕಳಸದಲ್ಲಿ ಭಾರೀ ಮಳೆ :
ಕಳಸ ತಾಲ್ಲೂಕಿನ ಹಲವೆಡೆ ಉತ್ತಮವಾಗಿ ಮಳೆಯಾಗುತ್ತಿದೆ. ಕೆಲವೆಡೆ ರಸ್ತೆ ಸಂಚಾರಕ್ಕೆ ತೊಡಕಾಗಿದ್ದು, ಮಳೆ ಬಿಡುವ ನೀಡದ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.ಕುದುರೇಮುಖ ಘಟ್ಟ ಪ್ರದೇಶ ಹಾಗೂ ಶೃಂಗೇರಿಯ ಕೆರೆ ಕಟ್ಟೆ, ಕಿಗ್ಗಾ ಭಾಗದಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ತುಂಗ-ಭದ್ರಾ ನದಿಗಳು ಉಕ್ಕಿ ಹರಿಯುತ್ತಿದೆ. ಸ್ಥಳೀಯಾಡಳಿತಗಳು ಸುತ್ತ ಮುತ್ತಲ ನಿವಾಸಿಗಳಿಗೆ ಮುನ್ನೆಚ್ಚರಿಕೆಗಳನ್ನು ನೀಡುತ್ತಿವೆ.ಭಾರಿ ಗಾಳಿ-ಮಳೆಗೆ ವಿದ್ಯುತ್ ತಂತಿಯ ಮೇಲೆ ಅಡಿಕೆ ಮರಗಳು ಬಾಗಿರುವ ಪರಿಣಾಮ ಆತಂಕ ಮೂಡಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ತೋಟದಲ್ಲಿ ಕಂಡುಬಂದಿದೆ.
ಸ್ಥಳೀಯರು ಈ ಬಗ್ಗೆ ಮೆಸ್ಕಾಂಗೆ ಮಾಹಿತಿ ನೀಡಿದ್ದು, ಕೂಡಲೇ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ವಿಳಂಭ ಮಾಡಿದರೆ ಗಾಳಿಯಿಂದಾಗಿ ಮತ್ತಷ್ಟು ಅಡಿಕೆ ಮರಗಳು ಉರುಳಿ ಬಿದ್ದು ತಂತಿಗಳು ಹರಿದು ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ತೋಟದ ಮಾಲೀಕರು, ಮತ್ತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನಿಷೇಧವಿದ್ದರೂ ಫಾಲ್ಸ್‌ಗಳಲ್ಲಿ ಮೋಜು, ಮಸ್ತಿ: ಗೋಕಾಕ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ
ಜಿಲ್ಲಾಡಳಿತ ಮುಂಜಾಗ್ರತೆ
ಅತೀವೃಷ್ಟಿ, ಪ್ರವಾಹ ಸ್ಥತಿ ಎದುರಾದಲ್ಲಿ ಸಮರ್ಪಕವಾಗಿ ಎದುರಿಸುವ ಸಲುವಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಕ್ಷಣಾ ಸಿಬ್ಬಂದಿಗಳು, ಸಲಕರಣೆಗಳನ್ನು ಸಜ್ಜುಗೊಳಿಸಿದೆ.ಗ್ರಾಮ ಪಂಚಾಯಿತಿಗಳ ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ಪೋರ್ಸ್ ತಂಡಗಳನ್ನು ರಚಿಸಲು ಕ್ರಮ ಕೈಗೊಂಡಿದೆ.ಅಗ್ನಿಶಾಮಕ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಳನ್ನು ಸೇರಿಸಿ ಟಾಸ್ಕ್ಪೋರ್ಸ್ ರಚಿಸಲಾಗುತ್ತಿದ್ದು, ಈ ತಂಡಗಳು ಅತೀವೃಷ್ಠಿಯಿಂದ ತೊಂದರೆ ಆಗುವ ಸಮಸ್ಯಾತ್ಮಕ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿವೆ.ಪ್ರವಾಹ ಭೀತಿ ಇರುವ ನದಿ ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರುಗಳನ್ನು ಮುಂಚಿತವಾಗಿಯೇ ರಕ್ಷಣೆಗೆ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.