ಹುಬ್ಬಳ್ಳಿ (ಅ.28): ಇಲ್ಲಿಗೆ ಸಮೀಪದ ಶೆರೇವಾಡ ಕ್ರಾಸ್‌ನಲ್ಲಿರುವ ತಮ್ಮ ಮಾಲಕತ್ವದ ವಿಭವ ಇಂಡಸ್ಟ್ರೀಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ನುಡಿದರು. ಅಗ್ನಿ ಅವಘಡದಿಂದ ಸುಮಾರು .4.5 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಸೋಮವಾರ ಸಂಜೆ ವೇಳೆ ವಿಭವ ಇಂಡಸ್ಟ್ರೀಸ್‌ನಲ್ಲಿ ಬೆಂಕಿ ತಗುಲಿತ್ತು. ದಸರಾ ಹಬ್ಬದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ರಜೆ ಘೋಷಿಸಿದ್ದರಿಂದ ಕಾರ್ಮಿಕರಾರ‍ಯರೂ ಇರಲಿಲ್ಲ. 

ಜೋಶಿ ಒಡೆತನದ 555 ಮಂಕಿ ಬ್ರ್ಯಾಂಡ್‌ ಪೊರಕೆ ಕಾರ್ಖಾನೆಗೆ ಬೆಂಕಿ ...

ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಈ ಕಾರ್ಖಾನೆ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ದಿ.ಅನಂತ ಕುಮಾರ್‌ ಅವರ ಸಹೋದರ ನಂದಕುಮಾರ್‌ ಒಡೆತನದ್ದು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.