Asianet Suvarna News

ಸಿಸಿಟಿವಿಯಲ್ಲಿ ಸೆರೆಯಾಯ್ತು ಆಂಜನೇಯನ ದೇವಸ್ಥಾನದೊಳಗೆ ನಡೆದ ಈ ದೃಶ್ಯ

ಮಂಡ್ಯದ ಆಂಜನೇಯ ದೇಗುಲದಲ್ಲಿ ನಡೆದ ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿ ದಿನೇ ದಿನೇ ಇಂತ ಘಟನೆಗಳು ಜಾಸ್ತಿಯಾಗುತ್ತಿವೆ.. 

Money Theft From Anjaneya Temple Mandya snr
Author
Bengaluru, First Published Sep 21, 2020, 12:36 PM IST
  • Facebook
  • Twitter
  • Whatsapp

 ಭಾರತೀನಗರ (ಸೆ.21): ಕೆ.ಶೆಟ್ಟಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ಹುಂಡಿ ಹಣ ಕಳವು ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳರ ತಂಡ ಬಾಗಿಲ ಸರಳನ್ನು ಮುರಿದು ಒಳಗೆ ನುಗ್ಗಿ ಹುಂಡಿಯಲ್ಲಿದ್ದ 80,000ಕ್ಕೂ ಹೆಚ್ಚು ಹಣ ದೋಚಿ ನಂತರ ಗ್ರಾಮದ ಹೊರವಲಯದಲ್ಲಿ ಹುಂಡಿಯನ್ನು ಬಿಸಾಡಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಸ್ಥಾನಗಳನ್ನೇ ಟಾರ್ಗೆಟ್‌ ಮಾಡಿ ದರೋಡೆಕೋರರ ತಂಡ ಕಳ್ಳತನ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮಂಡ್ಯದ ಅರ್ಕೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕಳವು ಮಾಡಿ ಮೂವರು ಅರ್ಚಕರ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಡ್ಯದ ಬಾರ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಆ ದೃಶ್ಯ?

ಸ್ಥಳಕ್ಕೆ ಸಬ್‌ ಇನ್ಸ್‌ಪೆಕ್ಟರ್‌ ಶೇಷಾದ್ರಿ ಹಾಗೂ ಸರ್ಕಲ್ ಇನ್ಸ್‌ ಪೆಕ್ಟರ್‌ ಶಿವಮಲವಯ್ಯ ಭೇಟಿ ನೀಡಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೆ.ಎಂ.ದೊಡ್ಡಿಯಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios