ಮಾಬ್ ಆಪರೇಷನ್ ಡ್ರಿಲ್ನ ಅಣಕು ಪ್ರದರ್ಶನ, ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರ ಹರಸಾಹಸ
ಸರ್ಕಾರಕ್ಕೆ ಧಿಕ್ಕಾರ, ಅಧಿಕಾರಿಗಳಿಗೆ ಧಿಕ್ಕಾರ ಎಂದು ರೊಚ್ಚಿಗೆದ್ದು ಕೂಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು. ಇವೆಲ್ಲ ನಡೆದಿದ್ದು ಅಣುಕು ಪ್ರದರ್ಶನ.
ಚಿಕ್ಕಮಗಳೂರು (ಡಿ.2): ಸರ್ಕಾರಕ್ಕೆ ಧಿಕ್ಕಾರ, ಅಧಿಕಾರಿಗಳಿಗೆ ಧಿಕ್ಕಾರ ಎಂದು ರೊಚ್ಚಿಗೆದ್ದು ಕೂಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರೂ ಜಗ್ಗದಿದ್ದಾಗ ಗುಂಡಿನ ದಾಳಿಯಲ್ಲಿ ಇಬ್ಬರು ಹೋರಾಟಗಾರರು ಮೃತಪಟ್ಟರು. ಇದೆಲ್ಲ ನಡೆದಿದ್ದು, ಅಣುಕು ಪ್ರದರ್ಶನವಷ್ಟೇ.
ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರ ಹರಸಾಹಸ
ಚಿಕ್ಕಮಗಳೂರಿನ ಡಿಎಆರ್ ಮೈದಾನದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆ, ಸ್ವಾತಂತ್ರ್ಯ ಹೋರಾಟಗಾರರು, ರೈತ ಸಂಘ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರ ವೇಷಗಳಲ್ಲಿ ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರೂ ತಹ ಬದಿಗೆ ಬರದಿದ್ದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಡಿವೈಎಸ್ಪಿ ನೇತೃತ್ವದಲ್ಲಿ ವೃತ್ತ ನಿರೀಕ್ಷಕರು, ಸಬ್ಇನ್ಸ್ಪೆಕ್ಟರ್ ಡಿಎಆರ್, ಕೆಎಸ್ಆರ್ಪಿ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾದರು. ಆದರೂ ಜಗ್ಗದ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಉದ್ರಿಕ್ತರ ಗುಂಪೊಂದು ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ರೊಚ್ಚಿಗೆದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರು, ಅಶ್ರುವಾಯಿ ಪ್ರಯೋಗಿಸಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದಿದ್ದಾಗ ಫೈರ್ ಮಾಡಿದಾಕ್ಷಣ ಉದ್ರಿಕ್ತರ ಗುಂಪನ್ನು ಚದುರಿಸುವಲ್ಲಿ ಪೊಲೀಸರು ಯಶಸ್ವಿಯಾದರು.
Chikkamagaluru: ಫಾರೆಸ್ಟ್ ಆಫೀಸ್ ಪುಡಿ ಪುಡಿ: ಕಳ್ಳಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಜನ
ಮಾಬ್ ಆಪರೇಷನ್ ಡ್ರಿಲ್ನ ಅಣಕು ಪ್ರದರ್ಶನ
ಇದೇನಪ್ಪ ನಗರದ ಹೃದಯಭಾಗದಲ್ಲಿ ಇಷ್ಟೆಲ್ಲಾ ದುರ್ಘಟನೆ ನಡೆದು ಇಬ್ಬರು ಬಲಿಯಾದರೂ ಯಾವುದೇ ಸುದ್ದಿ ಪ್ರಸಾರವಾಗಲಿಲ್ಲವಲ್ಲ ಎಂದು ತಪ್ಪು ತಿಳಿಬೇಡಿ ಇದು ನಗರದ ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮಾಬ್ ಆಪರೇಷನ್ ಡ್ರಿಲ್ನ ಅಣಕು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು. ಆದರೂ ಈ ರೀತಿ ಅಣಕು ಪ್ರದರ್ಶನದ ಮಾಬ್ನಲ್ಲಿ ವಿವಿಧ ವೇಷಧಾರಿಗಳಾಗಿ ಭಾಗಿಯಾಗಿದ್ದವರೆಲ್ಲಾ ಪೊಲೀಸ್ ತರಬೇತಿ ಶಾಲೆ ವಿದ್ಯಾರ್ಥಿಗಳು ಹಾಗೂ ಚಿಕ್ಕಮಗಳೂರು ವಿಭಾಗದ ಪೊಲೀಸರು ಎಂಬುದು ಗಮನಾರ್ಹ.
ರೈತರ ಹೆಸರಲ್ಲಿ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ಆಪ್‌ನಿಂದ ರೈತರ ಮೇಲೆ ಲಾಠಿಚಾರ್ಜ್!
ಜಿಲ್ಲೆಯಲ್ಲಿ ನಡೆಯುವ ಅವಗಢಗಳು, ದೊಡ್ಡ ಹೋರಾಟದ ಸಂದರ್ಭ ಗುಂಪು ಸೇರಿ ಗಲಾಟೆಗೆ ಮುಂದಾಗುವುದು ಅಥವಾ ಕಾರ್ಯಕ್ರಮಗಳ ಬಂದೋ ಬಸ್ತ್ಗಳನ್ನು ಪೊಲೀಸ್ ಇಲಾಖೆ ನಿರ್ವಹಣೆ ಮಾಡಬೇಕಾಗುತ್ತದೆ ಹಾಗಾಗಿ ಉದ್ರಿಕ್ತರ ಗುಂಪನ್ನು ಪೊಲೀಸ್ ಸಿಬ್ಬಂದಿಗಳು ಯಾವರೀತಿ ಚದುರಿಸಬೇಕು ಎಂಬ ಬಗ್ಗೆ ಅಣಕು ಪ್ರದರ್ಶನದ ಮೂಲಕ ಮಾಬ್ ಆಪರೇಷನ್ ಡ್ರಿಲ್ ಮಾಡಲಾಗಿದೆ.