Asianet Suvarna News Asianet Suvarna News

ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಆರಂಭ

ಪಶು ಸಂಗೋಪನೆ ಇಲಾಖೆಯಡಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಗರದ ಹನುಮಂತಪುರದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ಚಾಲನೆ ನೀಡಿದ್ದಾರೆ.

 

Mobile meat selling unit in tumakur
Author
Bangalore, First Published Apr 22, 2020, 2:15 PM IST

ತುಮಕೂರು(ಏ.22): ಪಶು ಸಂಗೋಪನೆ ಇಲಾಖೆಯಡಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಗರದ ಹನುಮಂತಪುರದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಮಾಂಸವನ್ನು ನೇರವಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರು ಹೇಳುವಂತೆ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ದೇಹಕ್ಕೆ ಪೊ›ೕಟಿನ್‌ ಅಂಶ ಅಗತ್ಯವಿರುವುದರಿಂದ ಆರೋಗ್ಯಕರ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟಮಾಂಸವನ್ನು ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಕೊರೋನಾ ವಾರಿಯರ್ಸ್‌ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್

ಪಾಲಿಕೆ ಮೇಯರ್‌ ಫರೀದಾ ಬೇಗಂ ಅವರು ಮಾತನಾಡಿ, ಕೋವಿಡ್‌-19ರ ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿರುವುದರಿಂದ ಮನೆ ಬಾಗಿಲಿಗೆ ಮಾಂಸವನ್ನು ತಲುಪಿಸುವ ಉದ್ದೇಶದಿಂದ ಮಾಂಸ ಮಾರಾಟದ ಸಂಚಾರಿ ಮಳಿಗೆ ತೆರೆಯಲಾಗಿದೆ. ಜನರು ಸ್ಮಾರ್ಟ್‌ ಆಗಿ ಮನೆಯಿಂದ ಫೋನ್‌ ಮಾಡಿ ಮನೆ ಬಾಗಿಲಿಗೆ ಮಾಂಸವನ್ನು ತಲುಪಿಸುತ್ತಾರೆ. ಇದರಿಂದ ಸಾರ್ವಜನಿಕರು ಅಗತ್ಯವಾಗಿ ಓಡಾಡದೇ ಮನೆಯಲ್ಲಿ ಸುರಕ್ಷಿತವಾಗಿದ್ದು, ಲಾಕ್‌ಡೌನ್‌ಗೆ ಸಹಕಾರ ನೀಡಬೇಕು ಎಂದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ನಂದೀಶ್‌ ಮಾತನಾಡಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಸಾರ್ವಜನಿಕರಿಗೆ ಗುಣಮಟ್ಟದ ಮಾಂಸವನ್ನು ಪೂರೈಕೆ ಮಾಡುತ್ತಿದ್ದೇವೆ. ಮಾಂಸ ತಿನ್ನುವವರಿಗೆ ಮನೆ-ಮನೆಗೆ ಮಾಂಸವನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ಕೆ.ಜಿ. ಮಾಂಸಕ್ಕೆ 650 ರು. ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೊರೋನಾ ರೋಗಿಗಳ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಪ್ರಿ ಪ್ಲಾನ್ ಅಟ್ಯಾಕ್

ಈ ಸಂದರ್ಭದಲ್ಲಿ ಕುರಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ನಾಗಣ್ಣ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್‌, ಸಹಾಯಕ ನಿರ್ದೇಶಕ ಡಾ.ರೇ.ಮ ನಾಗಭೂಷಣ್‌ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Follow Us:
Download App:
  • android
  • ios