ಬಡ ವಿದ್ಯಾರ್ಥಿಗಳಿಗಾಗಿ ಮೊಬೈಲ್‌ ದಾನ ಅಭಿಯಾನ

ಕೊರೋನಾ ಲಾಕ್‌ ಡೌನ್‌  ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ ಲೈನ್ ಕ್ಲಾಸ್ ಆರಂಭವಾಗಿದ್ದು ಇದಕ್ಕಾಗಿ ಮೊಬೈಲ್ ದಾನ ಅಭಿಯಾನ ಆರಂಭಿಸಲಾಗಿದೆ. 

Mobile Donation Camping For Students Online Class snr

ಶಿವಮೊಗ್ಗ (ಸೆ.28) : ಕೊರೋನಾದಿಂದಾಗಿ ಶಾಲೆಗಳು ಆನ್‌ಲೈನ್‌ ಕ್ಲಾಸ್‌ ಆರಂಭಿಸಿವೆ. ಆದರೆ, ಸ್ಮಾರ್ಟ್‌ಫೋನ್‌ ಕೊಳ್ಳಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಸಾಗರ ತಾಲೂಕಿನ ಚಿಪ್ಪಳಿಯ ಕೃಷಿಕ ನಾಗೇಂದ್ರ ಸಾಗರ್‌ 2 ತಿಂಗಳ ಹಿಂದೆ ಮೊಬೈಲ್‌ ದಾನ ಮಾಡಿ ಅಭಿಯಾನ ಆರಂಭಿಸಿದ್ದಾರೆ.

ಇದರ ಜತೆಗೆ ಇದೀಗ ಗ್ರಾಮೀಣ ಭಾಗದ ನಾಲ್ಕೈದು ಶಾಲೆಗಳ ಮಕ್ಕಳನ್ನು ಒಂದು ಕಡೆ ಸೇರಿಸಿ ಅಲ್ಲಿ ಸ್ಮಾರ್ಟ್‌ ತರಗತಿಗಳನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ: ಭಾನುವಾರದ ಜಿಲ್ಲಾವಾರು ಅಂಕಿ-ಸಂಖ್ಯೆ ಇಲ್ಲಿದೆ ...

ಮೊದಲಿಗೆ ತಮ್ಮ ತೋಟದಲ್ಲಿ ಕೆಲಸ ಮಾಡುವ ಕುಟುಂಬದ ವಿದ್ಯಾರ್ಥಿನಿಯೊಬ್ಬಳಿಗೆ ತಾವೇ ಸ್ಮಾರ್ಟ್‌ ಫೋನ್‌ ಕೊಡಿಸುವ ಮೂಲಕ ಈ ಅಭಿಯಾನಕ್ಕೆ ನಾಗೇಂದ್ರ ಚಾಲನೆ ನೀಡಿದರು. ಈಗಾಗಲೇ 85 ಸ್ಮಾರ್ಟ್‌ಫೋನ್‌ಗಳನ್ನು ಬಡ ಮಕ್ಕಳಿಗೆ ದಾನಿಗಳ ಮೂಲಕ ಪಡೆದು ನೀಡಿದ್ದಾರೆ. ಸಾಗರ ತಾಲೂಕಿನ ಅನುದಾನಿತ ಶಾಲೆಗಳ ಮಕ್ಕಳಿಗೇ ಇನ್ನೂ 150 ಫೋನ್‌ ಬೇಕಾಗಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಸುಮಾರು 500 ಫೋನುಗಳ ಬೇಕಾಗಬಹುದು ಎಂದು ನಾಗೇಂದ್ರ ಸಾಗರ್‌ ಅಂದಾಜಿಸಿದ್ದಾರೆ. ದಾನಿಗಳು 81472 99353 ಸಂಪರ್ಕಿಸಬಹುದಾಗಿದೆ.

Latest Videos
Follow Us:
Download App:
  • android
  • ios