ಮೊಬೈಲ್ ಸಂಚಾರಿ ಆಧಾರ್ ನೋಂದಣಿಗೆ ಚಾಲನೆ

ರಾಜ್ಯದಲ್ಲಿಯೇ ಮೊದಲಬಾರಿಗೆ ಮೊಬೈಲ್ ಸಂಚಾರಿ ವಾಹನದ ಮೂಲಕ ಹಾಡಿಗಳಿಗೆ ತೆರಳಿ ಆಧಾರ್ ನೋಂದಣಿ ಮಾಡುವ ಪ್ರಕ್ರಿಯೆ ಮಡಿಕೇರಿಯಲ್ಲಿ ಆರಂಭವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಹಾಡಿ ಜನರಿಗೆ ಸಮರ್ಪಕವಾಗಿ ತಲುಪಿಸಲು ಆಧಾರ್ ಕಡ್ಡಾಯವಾಗಿದ್ದು, ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

Mobile Aadhar Registration Unit Flagged off in Madikeri

ಮಡಿಕೇರಿ(ಜು.16): ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಆಧಾರ್ ಕಾರ್ಡ್ ಅಗತ್ಯವಿದ್ದು, ಹಾಡಿಯ ಪ್ರತಿಯೊಬ್ಬರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 15 ದಿನಗಳ ಕಾಲ ಮೊಬೈಲ್ ಸಂಚಾರಿ ವಾಹನದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹಾಡಿಗಳಿಗೆ ತೆರಳಿ ಆಧಾರ್ ನೋಂದಣಿ ಮಾಡುವ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೋಮವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಆಧಾರ್ ನೋಂದಣಿ ವಿಭಾಗದ ಪ್ರಶಾಂತ್ ಹಾಗೂ ರಾಕೇಶ್,  ಐಟಿಡಿಪಿ ಇಲಾಖೆ ಅಧಿಕಾರಿ ಸಿ. ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್, ತಾಲೂಕು ಐಟಿಡಿಪಿ ಅಧಿಕಾರಿ ಚಂದ್ರಶೇಖರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಚಿಕ್ಕಬಸವಯ್ಯ, ಶೇಖರ್, ದೇವರಾಜು, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಇದ್ದರು.

ಆಧಾರ್ ನೋಂದಣಿ ದಿನಾಂಕ ಮತ್ತು ಹಾಡಿ ವಿವರ :

ವಿರಾಜಪೇಟೆ ತಾಲೂಕು: ಜು.16 ರಂದು ನಾಣಚ್ಚಿಗದ್ದೆ ಹಾಡಿ, ಕೇಮ್‌ಕೊಲ್ಲಿ, ಚಂದನಕೆರೆ ಹಾಡಿಗಳ ಜನರಿಗೆ ನಾಣಚ್ಚಿಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೋಂದಣಿ ಮಾಡಲಾಗುತ್ತದೆ.

ಜು.17 ರಂದು ನಾಗರಹೊಳೆ, ಗೋಣಿಗದ್ದೆ ಹಾಡಿ ಜನತೆಗೆ ನಾಗರಹೊಳೆ ಆಶ್ರಮ ಶಾಲೆ, 18 ರಂದು ನಿಟ್ಟೂರು, ತಟ್ಟೆಕೆರೆ, ದಾಳಿಂಬೆ ತೋಟ, ಬೆಂಡೆಗುತ್ತಿ, ಕೊಲ್ಲಿಹಾಡಿ ಭಾಗದ ಜನರಿಗೆ ನಿಟ್ಟೂರು ಆಶ್ರಮ ಶಾಲೆ.

ಜು.19ರಂದು ಕೋತೂರು, ಬ್ರಹ್ಮಗಿರಿ ಹಾಡಿಯವರಿಗೆ ಕೋತೂರು ಆಶ್ರಮ ಶಾಲೆ, ಜು. 20 ರಂದು ಬಣ್ಣ ಮೊಟ್ಟೆ, ವೆಸ್ಟ್ ನೆಮ್ಮಲೆ, ಈಸ್ಟ್ ನೆಮ್ಮಲೆ, ತಾವಳಗೇರಿ, ಹರಿಹರ ಹಾಡಿಗೆ ಶ್ರೀಮಂಗಲ ಸರ್ಕಾರಿ ಶಾಲೆಯಲ್ಲಿ ನೋಂದಣಿ ನಡೆಯಲಿದೆ.

22 ರಂದು ಬಿರುಣಾನಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಪೊರಾಡು, ಹೈಸೊಡ್ಲೂರು ಟೀ ಎಸ್ಟೇಟ್, ಕೋಣಗೇರಿ, ಚೀಣಿವಾಡ, ಬೇಗೂರು ಲೈನ್ ಮನೆಗಳಿಗೆ ಆಧಾರ್ ನೋಂದಣಿ ಕಾರ್ಯಕ್ರಮವು ಹುದಿಕೇರಿಯಲ್ಲಿ ನಡೆಯಲಿದೆ. 23 ರಂದು ಸೀತಾರಾಮ ಕಾಲೋನಿ, ಕುಂಬಾರ ಕಟ್ಟೆ, ಪಾಲದಳ ಇವರಿಗೆ ಬಾಳೆಲೆ ಸರ್ಕಾರಿ ಪ್ರಾಥಮಿಕ ಶಾಲೆ

24 ರಂದು ಮಜ್ಜಿಗೆ ಹಳ್ಳ, ಆನೆ ಕ್ಯಾಂಪ್, ಕಾರೆಕಂಡಿ, ದೇವಮಚ್ಚಿ ಇವರಿಗೆ ಮರೂರು ತಿತಿಮತಿ ಆಶ್ರಮ ಶಾಲೆ, ೨೫ರಂದು ಚಿನಿಹಡ್ಲು, ಮರಪಾಲ, ಬೊಂಬುಕಾಡು, ಜಂಗಲ ಹಾಡಿ ಇವರಿಗೆ ತಿತಿಮತಿಯ ಗಿರಿಜನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೋಂದಣಿ ಕಾರ್ಯಕ್ರಮ ನಡೆಯಲಿದೆ.

26ರಂದು ದಯ್ಯದ, ಮೇಕೂರು, ಪಾಲಿಬೆಟ್ಟ, ಮೇಕೂರು ಹೊಸಕೇರಿ ಈ ಲೈನ್ ಮನೆಗಳಿಗೆ ಪಾಲಿಬೆಟ್ಟ ಗಿರಿಜನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೋಂದಣಿ ಕಾರ್ಯ ನಡೆಯಲಿದೆ.

ಜು.27ರಂದು ದಿಡ್ಡಳ್ಳಿ, ತಟ್ಟಳ್ಳಿ, ಚೊಟ್ಟೆಪಾರೆ, ಗೇಟ್ ಹಾಡಿ, ಹಣ್ಣಿನ ತೋಟ ಈ ಗ್ರಾಮದ ಹಾಡಿ ಜನರಿಗೆ ಚೆನ್ನಂಗಿ ಬಸವನಹಳ್ಳಿ ಆಶ್ರಮ ಶಾಲೆ, ಜು. 29ರಂದು ಬಸವನಹಳ್ಳಿ, ಅವರೆಗುಂದ ಈ ಹಾಡಿಯ ಜನರಿಗೆ ಅವರೆಗುಂದ ಸಮುದಾಯ ಭವನದಲ್ಲಿ,ಜು30 ರಂದು ಅರುವತ್ತೋಕ್ಲು, ಜನತಾ ಕಾಲೋನಿ, ಹಳ್ಳಿಗಟ್ಟು, ಸೀತಾ ಕಾಲೋನಿ, ಮೈಸೂರಮ್ಮ ಕಾಲೋನಿ, ಬಲ್ಯಮಂಡೂರು, ಮುಗುಟಗೇರಿ ಇವರಿಗೆ ಪೊನ್ನಂಪೇಟೆಯ ಅರುವತ್ತೋಕ್ಲುನಲ್ಲಿ ಹಾಗೂ ಜು. 31 ರಂದು ಹೊಸೂರು, ಕಳತ್ಮಾಡು ಇಲ್ಲಿನ ಜನರಿಗೆ ಗೋಣಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಧಾರ್ ನೋಂದಣಿ ನಡೆಯಲಿದೆ.

ಆ.1 ರಂದು ಕೊಳತೋಡು, ಬೈಗೋಡು, ಕುಂದ, ಬಸವೇಶ್ವರ ಕಾಲೋನಿ, ಅತ್ತೂರು, ಈಚೂರು ವ್ಯಾಪ್ತಿಯ ಜನರಿಗೆ ಹಾತೂರು ಸರ್ಕಾರಿ ಮಾದರಿ ಶಾಲೆ, ಆ.2 ರಂದು ಎರಡನೇ ರುದ್ರೆಗುಪ್ಪೆ, ಒಂದನೇ ರುದ್ರೆಗುಪ್ಪೆ, ವಿ.ಬಾಡಗ, ಬಿಟ್ಟಂಗಾಲ, ನಾಂಗಾಲ, ಕಂಡಂಗಾಲ, ಅಂಬಟ್ಟಿ, ಬಾಳುಗೋಡು, ಅಂಬಟ್ಟಿ-1 ಭಾಗದ ಜನರಿಗೆ ಬಿಟ್ಟಂಗಾಲ ಸರ್ಕಾರಿ ಮಾದರಿ ಶಾಲೆಯಲ್ಲಿ ನೋಂದಣಿ ನಡೆಯಲಿದೆ.

ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಆ. 3ರಂದು ವಾಲ್ನೂರು ತ್ಯಾಗತ್ತೂರು, ಬಾಳೆಗುಂಡಿ ಜನರಿಗೆ ವಾಲ್ನೂರು ತ್ಯಾಗತ್ತೂರು ಸರ್ಕಾರಿ ಶಾಲೆಯಲ್ಲಿ, ಆ.5 ರಂದು ಮಾವಿನಹಳ್ಳ, ರಂಗಸಮುದ್ರ, ಹೊಸಪಟ್ಟಣ, ಕಬ್ಬಿನಗದ್ದೆ, ಕಟ್ಟೆಹಾಡಿ ನಂಜರಾಯಪಟ್ಟಣ ಸರ್ಕಾರಿ ಶಾಲೆಯಲ್ಲಿ, ಆ.6 ರಂದು ಹೆಬ್ಬೆಟ್ಟಗೇರಿ, ಚಿಕ್ಕಬೆಟ್ಟಗೇರಿ, ಹೊಸಕಾಡು ಹಾಡಿ ಜನರಿಗೆ ಬಸವಹಳ್ಳಿ ಆಶ್ರಮ ಶಾಲೆ, ಆ.7 ರಂದು ನಾಕೂರು ಶಿರಂಗಾಲ, ಕಲ್ಲೂರು ಜನರಿಗೆ ಹೇರೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಆ.8 ರಂದು ಗಂಧದ ಹಾಡಿ, ಸೀತಾ ಕಾಲೋನಿ, ಕೂಪಾಡಿ, ಸೂಳೆಬಾವಿ, ರಂಗನ ಹಾಡಿ, ಸಜ್ಜಳ್ಳಿ ಹಾಡಿಯವರಿಗೆ ಯಡವನಾಡು ಆಶ್ರಮ ಶಾಲೆಯಲ್ಲಿ ನೋಂದಣಿ ನಡೆಯಲಿದೆ. ಆ.9 ರಂದು ಹುಣಸೆಪಾರೆ, ಯಲಕನೂರುಹೊಸಹಳ್ಳಿ, ಚೀನ್ನೆಹಳ್ಳಿ, ಹೆಗ್ಗಡಳ್ಳಿ ಹಾಡಿ ಜನರಿಗೆ ಬ್ಯಾಡಗುಟ್ಟ ಪುನರ್ವಸತಿ ಬಡಾವಣೆಯಲ್ಲಿ, ಆ.13 ರಂದು ಹಿತ್ತಲಮಕ್ಕಿ, ಚಿಕ್ಕ ಅಬ್ಬೂರು, ವಳಗುಂದ, ಆಡಿನಾಡೂರು, ಹಳೇ ಮದಲಾಪುರ ಅಬ್ಬೂರು ಕಟ್ಟೆಯಲ್ಲಿ, ಆ.14 ರಂದು ಗಣಗೂರು ಎಡುಂಡೆ, ಊಂಜಿಗನಹಳ್ಳಿ, ಬಾಣಾವಾರ, ಸಂಗಯ್ಯನಪುರ, ಗೋಣಿ ಮರೂರು ಹಾಡಿಗಳಿಗೆ ಸಂಬಂಧಿಸಿದಂತೆ ಗಣಗೂರು ಗ್ರಾಮ ಪಂಚಾಯಿತಿಯಲ್ಲಿ ನೋಂದಣಿ ನಡೆಯಲಿದೆ.

ಆ.16 ರಂದು ಮಾಲಂಬಿ, ಪಳಗೋಟು ಹಾಡಿ, ಕಡ್ಲೆಮಕ್ಕಿ, ಆಲೂರು ಸಿದ್ಧಾಪುರಕ್ಕೆ ಸಂಬಂಧಿಸಿದಂತೆ ಮಾಲಂಬಿ ಆಶ್ರಮ ಶಾಲೆ, ಆ.17 ರಂದು ಅರೆ ಹೊಸ್ಸೂರು, ಬ್ಯಾಡಗುಟ್ಟ, ಕಟ್ಟೆಪುರ ಹಾಡಿಗಳಿಗೆ ದೊಡ್ಡಳ್ಳಿ ಸರ್ಕಾರಿ ಶಾಲೆಯಲ್ಲಿ ಹಾಗೂ ಆ.16 ರಂದು ಗರಂಗದೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಆ.20ರಂದು ಬೆಟ್ಟತ್ತೂರು, ಜೋಡುಪಾಲ, ದೇವರಕೊಲ್ಲಿ ವ್ಯಾಪ್ತಿ ಜನರಿಗೆ ಮದೆನಾಡು ಗ್ರಾಮ ಪಂಚಾಯಿತಿಯಲ್ಲಿ, ಆ.21 ರಂದು ಕೊಯನಾಡು, ಮಂಗಳಪಾರೆ, ಕುಂಟಿಕಾನ, ಅರೆಕಲ್ಲು ಜನರಿಗೆ ಸಂಪಾಜೆ ಗ್ರಾಮ ಪಂಚಾಯಿತಿ, ಆ.22 ರಂದು ಕಟ್ಟಪಳ್ಳಿ, ಕುದ್ರೆಪಾಯ ವ್ಯಾಪ್ತಿ ಜನರಿಗೆ ಬಾಲಂಬಿ ಗ್ರಾಮ ಪಂಚಾಯಿತಿಯಲ್ಲಿ, ಆ.23 ರಂದು ನಿಡ್ಯಮಲೆ, ಕುಂಡಾಡು ಭಾಗದ ಜನರಿಗೆ ಪೆರಾಜೆ ಕಂಬಳಚೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಆ.24ರಂದು ಚೆತ್ತುಕಾಯ, ಎಳ್ಳುಕೊಚ್ಚಿ, ಕುಂಡತ್ತಿಕಾನ ಹಾಡಿಗಳಿಗೆ ಕರಿಕೆ ಆಶ್ರಮ ಶಾಲೆ, ಆ.26 ರಂದು ಯವಕಪಾಡಿ, ಚೇಲಾವರ ಜನರಿಗೆ ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆ ಯಲಿದೆ. ಆ.27 ರಂದು ತಣ್ಣಿಮಾನಿ, ಕೋಪಟ್ಟಿ, ಚೇರಂಗಾಲ, ಕೋರಂಗಾಲ ಭಾಗದ ಜನರಿಗೆ ಬಾಲಂಬಿ ಗ್ರಾಮ ಪಂಚಾಯಿತಿ, ಆ.28 ರಂದು ಗಾಳಿಬೀಡು, ಎರಡನೇ ಮೊಣ್ಣಂಗೇರಿ ಜನರಿಗೆ ಗಾಳಿಬೀಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಧಾರ್ ನೋಂದಣಿ ನಡೆಯಲಿದೆ.   

Latest Videos
Follow Us:
Download App:
  • android
  • ios