ಧಾರವಾಡ(ಫೆ.16): ಹುಬ್ಬಳ್ಳಿಯ ಕಾಲೇಜಿನಲ್ಲಿ ದೇಶದ್ರೋಹದ ಘೋಷಣೆ ಕೂಗಿದವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಧಾರವಾಡದಲ್ಲಿ ಶನಿವಾರ ಈ ಕುರಿತು ಮಾತನಾಡಿದದ ಅವರು, ನಮ್ಮ ಸಮಾಜದಲ್ಲಿ ಬೇಕಾದವರು ಬೇಕಾದ್ದನ್ನು ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ನನಗೂ ತಿಳಿಯುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. 

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ಈ ಸರ್ಕಾರ ಕೇವಲ ಪಕ್ಷದ ಸರ್ಕಾರವಾಗಿ ಹೋಗಿದೆ. ಇವರ ಹಿಂದೆ- ಮುಂದೆ ಇದ್ದವರೇ ಇಂತಹ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಎಂತಹ ಅಧಿಕಾರ ನಡೆಸುತ್ತಿದ್ದಾರೆ ತಮಗೂ ತಿಳಿಯುತ್ತಿಲ್ಲ. ರಾಜಕೀಯ ಬೆಂಬಲ ಇದ್ದರೂ ದೇಶದ್ರೋಹಿಗಳನ್ನು ನೋಡುವ ಬದಲು ದೇಶಪ್ರೇಮವನ್ನು ತೋರಬೇಕು. ಕೂಡಲೇ ಪೊಲೀಸರು ಅವರನ್ನು ಒಳಗೆ ಹಾಕಬೇಕೆಂದು ಹೊರಟ್ಟಿ ಹೇಳಿದ್ದಾರೆ.