ಶಿವಮೊಗ್ಗ(ಫೆ.26):  ಆರೋಗ್ಯ ಮಂತ್ರಿಗೆ ಫೋನ್ ಮಾಡಿದರೆ ಫೋನ್ ತೆಗೆಯೋಕೆ ಪುರುಸೊತ್ತಿಲ್ಲ. ವಾಟ್ಸ್ ಆಪ್ ಮೇಸೆಜ್ ಮಾಡಿದರೆ ರಿಪ್ಲೆ ಬರೋಲ್ಲ. ಯಾವ್ಯಾವುದೋ ಕಾರಣಕ್ಕಾಗಿ ಹೇಗೆಗೋ ಆಯ್ಕೆ ಅಗಿ ಬಂದವರಿಗೆ ಆರೋಗ್ಯ ಇಲಾಖೆಯ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ಧ ಎಂಎಲ್‌ಸಿ ಆಯನೂರು ಮಂಜುನಾಥ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಆರೋಗ್ಯ ಇಲಾಖೆಯ ನೌಕರರ ಕ್ರೀಡಾಕೂಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಡಳಿತ ಕೇವಲ ಬುದ್ಧಿವಂತಿಕೆಯಿಂದ ನಡೆಸುವುದಲ್ಲ. ಹೃದಯವಂತಿಕೆ ಕೂಡ ಬೇಕು ಎಂದು ಹೇಳಿದ್ದಾರೆ. 

ಕುರುಬರ ಪ್ರತಿಭಟನೆಯಲ್ಲಿ ಭಾಗಿಯಾದ ಸಚಿವ ಈಶ್ವರಪ್ಪ ವಿರುದ್ಧ ಸ್ವಪಕ್ಷೀಯರೇ ಗರಂ

ಈ ವ್ಯವಸ್ಥೆಯ ಸುಧಾರಣೆ ಯಾವತ್ತು ಆಗುತ್ತೋ ಗೊತ್ತಿಲ್ಲ, ಸ್ವಾವಲಂಬನೆಯ ವ್ಯವಸ್ಥೆ ಯಾವಾಗ ಬರೋತ್ತೋ ಎಲ್ಲದಕ್ಕೂ ಡಿಪೆಂಡೆನ್ಸಿ ಇದೆ. ಕೊರೊನಾ ವಾರಿಯರ್ ಆಗಿ ಆರೋಗ್ಯ ಇಲಾಖೆಯ ಕಾರ್ಯಕರ್ತರ ಸೇವೆ ಮರೆಯಲಾಗದು ಎಂದು ಹೇಳಿದ್ದಾರೆ.