ಶಾಸಕರೇ ಅಧಿಕಾರವೆಂಬುದು ಶಾಶ್ವತವಲ್ಲ : ಬಿಜೆಪಿ ವಕ್ತಾರ

 ಶಾಸಕ ಕೃಷ್ಣಪ್ಪನವರೇ ನೀವು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪ್ರಥಮ ಪ್ರಜೆಯಾಗಿದ್ದೀರಿ. ವಿರೋಧ ಪಕ್ಷದ ಮುಖಂಡರ ಬಗ್ಗೆ ಬಹಳ ಲಗುವಾಗಿ ಮಾತನಾಡುವುದನ್ನು ಬಿಟ್ಟು ಎಲ್ಲರ ಬಗ್ಗೆಯೂ ಗೌರವಯುವಾಗಿ ಮಾತನಾಡಿ. ಅಧಿಕಾರವೆಂಬುದು ಶಾಶ್ವತವಲ್ಲ ಎಂದು ತಾಲೂಕು ಭಾರತೀಯ ಜನತಾ ಪಕ್ಷದ ಆಧ್ಯಕ್ಷರಾದ ಕಲ್ಕೆರೆ ಮೃತ್ಯುಂಜಯ ಮತ್ತು ಬಿಜೆಪಿಯ ವಕ್ತಾರರಾದ ವಕೀಲ ಮುದ್ದೇಗೌಡರು ಎಂದು ಕಿವಿಮಾತು ಹೇಳಿದ್ದಾರೆ.

MLAs are not in power forever: BJP spokesperson snr

ತುರುವೇಕೆರೆ : ಶಾಸಕ ಕೃಷ್ಣಪ್ಪನವರೇ ನೀವು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪ್ರಥಮ ಪ್ರಜೆಯಾಗಿದ್ದೀರಿ. ವಿರೋಧ ಪಕ್ಷದ ಮುಖಂಡರ ಬಗ್ಗೆ ಬಹಳ ಲಗುವಾಗಿ ಮಾತನಾಡುವುದನ್ನು ಬಿಟ್ಟು ಎಲ್ಲರ ಬಗ್ಗೆಯೂ ಗೌರವಯುವಾಗಿ ಮಾತನಾಡಿ. ಅಧಿಕಾರವೆಂಬುದು ಶಾಶ್ವತವಲ್ಲ ಎಂದು ತಾಲೂಕು ಭಾರತೀಯ ಜನತಾ ಪಕ್ಷದ ಆಧ್ಯಕ್ಷರಾದ ಕಲ್ಕೆರೆ ಮೃತ್ಯುಂಜಯ ಮತ್ತು ಬಿಜೆಪಿಯ ವಕ್ತಾರರಾದ ವಕೀಲ ಮುದ್ದೇಗೌಡರು ಎಂದು ಕಿವಿಮಾತು ಹೇಳಿದ್ದಾರೆ.

ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಮಾಜಿ ಶಾಸಕರಾಗಿರುವ ಮಸಾಲಾ ಜಯರಾಮ್ ರವರ ಬಗ್ಗೆ ಬಹಳ ಲಘುವಾಗಿ ಮಾತನಾಡಿರುವುದು ಶಾಸಕ ಸ್ಥಾನಕ್ಕೆ ಗೌರವ ತರುವುದಿಲ್ಲ. ಓರ್ವ ಪ್ರಥಮ ಪ್ರಜೆಯಾಗಿ ನೀವು ಆಡುವ ಮಾತುಗಳು ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರಲಿದೆ. ಶಾಸಕರೇ ಕೆಳ ಹಂತದ ಭಾಷೆಯಲ್ಲಿ ಮಾತನಾಡಿದರೆ ಜನಸಾಮಾನ್ಯರೂ ಸಹ ಅಂತಹ ಕೀಳುಭಾಷೆಯನ್ನು ಉಪಯೋಗಿಸುತ್ತಾರೆ. ಬೇರೆಯವರಿಗೆ ಮಾದರಿಯಾಗಬೇಕಿರುವ ಶಾಸಕರು ಮನಸೋಇಚ್ಚೆ ಮಾತನಾಡುವುದು ತಪ್ಪು.

ವಿರೋಧ ಪಕ್ಷದ ಎಲ್ಲರನ್ನೂ ಬಹಳ ಅಗೌರವಾದ ಭಾಷೆಯಿಂದ ಟೀಕಿಸುವುದು ಸರಿಯಲ್ಲ. ಗೌರವಯುತವಾದ ಭಾಷೆಯನ್ನು ಬಳಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುವರು. ನೀವೂ ಈ ಹಿಂದೆ ಮೂರು ಬಾರಿ ಶಾಸಕರಾಗಿದ್ದೀರಿ. ಮೂರ್‍ನಾಲ್ಕು ಬಾರಿ ಸೋಲನ್ನೂ ಕಂಡಿದ್ದೀರಿ. ಈಗ ಪುನಃ ತಮಗೆ ಅಧಿಕಾರ ಬಂದಿದೆ. ಇಂದು ಬಿಜೆಪಿಗೆ ಸೋಲಾಗಿರಬಹುದು. ಮುಂಬರುವ ದಿನಗಳಲ್ಲಿ ನಮಗೆ ಅಧಿಕಾರ ಸಿಗಲಿದೆ. ಅಧಿಕಾರ ಇದೆ ಎಂಬ ಕಾರಣಕ್ಕೆ ಬಹಳ ಕೀಳು ಭಾಷೆ ಬಳಸುವುದು ಶಾಸಕ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಹೇಳಿದರು.

ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರಿಗೆ ಹತಾಶಾ ಮನೋಭಾವ ಕಾಡುತ್ತಿದೆ. ಶಾಸಕರಾಗಿ ಒಂದು ರೂಪಾಯಿಯ ಕೆಲಸವನ್ನೂ ಮಾಡಲಾಗದ ಸ್ಥಿತಿ ಇದೆ. ಈ ಹಿಂದಿನ ಶಾಸಕರಾಗಿದ್ದ ಮಸಾಲಾ ಜಯರಾಮ್ ರವರು ತಮ್ಮ ಅವಧಿಯಲ್ಲಿ ತಂದಿದ್ದ ನೂರಾರು ಕೋಟಿಗಳ ಅನುದಾನವನ್ನು ಬಳಸಿಕೊಂಡು ತಮ್ಮ ಅಸ್ಥಿತ್ವ ತೋರಿಸಿಕೊಳ್ಳುವ ಸ್ಥಿತಿ ಬಂದಿರುವುದು ವಿಪರ್ಯಾಸ. ಈ ಹಿಂದೆ ಮಸಾಲಾ ಜಯರಾಮ್ ರವರು ಯಾವುದೇ ಕಾಮಗಾರಿಗೆ ಭೂಮಿ ಪೂಜೆ ಮಾಡಿದರೂ ಸಹ ತಮ್ಮ ಅನುದಾನವೆಂದು ಹೇಳಿಕೊಳ್ಳುತ್ತಿದ್ದ ಕೃಷ್ಣಪ್ಪನವರು ಈಗ ಏನೆಂದು ಸಮರ್ಥಿಸಿಕೊಳ್ಳುವರು ಎಂದು ವಕೀಲ ಮುದ್ದೇಗೌಡ ಪ್ರಶ್ನಿಸಿದರು.

ಕಳೆದ ಸರ್ಕಾರ ಮಂಜೂರು ಮಾಡಿದ್ದ 3375 ಮನೆಗಳನ್ನು ಈ ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು. ಈ ಸಲುವಾಗಿ ಮಾಜಿ ಶಾಸಕರಾಗಿರುವ ಮಸಾಲಾ ಜಯರಾಮ್ ರವರು ಸರ್ಕಾರದ ಮಂತ್ರಿಗಳೊಂದಿಗೆ ವ್ಯವಹರಿಸಿ ಸುಮಾರು ೧೫೦೦ ಕ್ಕೂ ಹೆಚ್ಚು ಮನೆಗಳನ್ನು ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ತರುವಲ್ಲಿ ಶ್ರಮಿಸಿದ್ದಾರೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೂಡಾಮಣಿ, ದಯಾನಂದ್ ಸೇರಿದಂತೆ ಹಲವರು ಇದ್ದರು.

Latest Videos
Follow Us:
Download App:
  • android
  • ios