ಮಾಧ್ಯಮದವರನ್ನು ಹೊರಕ್ಕೆ ಕಳುಹಿಸಿದರೆ ಅಕ್ರಮ ಗಣಿಗಾರಿಕೆಯ ಮಾಹಿತಿ ಕೊಡುವೆ: ಶಾಸಕ ವಿರೂಪಾಕ್ಷಪ್ಪ
ಸಭೆಯಲ್ಲಿರೋ ಮಾಧ್ಯಮದವರನ್ನು ಹೊರಗಡೆ ಕಳುಹಿಸಿದರೆ ಮಾತ್ರ ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಮಾಹಿತಿ ಕೊಡಬಲ್ಲೆ, ಇಲ್ಲದಿದ್ದರೆ ನನಗೆ ಹೇಳಲು ಕಷ್ಟವಾಗುತ್ತದೆ' -ಹೀಗೆಂದು ಬ್ಯಾಡಗಿಯ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಗಣಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಹೇಳಿದರು.
ಹಾವೇರಿ (ಜು.14): ಸಭೆಯಲ್ಲಿರೋ ಮಾಧ್ಯಮದವರನ್ನು ಹೊರಗಡೆ ಕಳುಹಿಸಿದರೆ ಮಾತ್ರ ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಮಾಹಿತಿ ಕೊಡಬಲ್ಲೆ, ಇಲ್ಲದಿದ್ದರೆ ನನಗೆ ಹೇಳಲು ಕಷ್ಟವಾಗುತ್ತದೆ' -ಹೀಗೆಂದು ಬ್ಯಾಡಗಿಯ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಗಣಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಸಚಿವರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಮಧ್ಯಪ್ರವೇಶಿಸಿ , ಕೆಲವು ಪ್ರಭಾವಿಗಳು ಪರವಾನಗಿ ಪಡೆಯದೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಇದನ್ನೆಲ್ಲ ಇಲ್ಲಿ ಮಾಧ್ಯಮಗಳ ಎದುರು ಬಹಿರಂಗಪಡಿಸಲಾಗದು ಎಂದರು.
ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ-ಪ್ರೇಮ ಎಂಬ ಹುಚ್ಚಾಟಕ್ಕೆ ಬಿದ್ದು ಜೀವ ಕಳೆದುಕೊಂಡ ಜೋಡಿ
ಸಚಿವ ಹಾಲಪ್ಪ ಆಚಾರ್, ಸಿಎಂ ತವರು ಜಿಲ್ಲೆಯಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಈಗ ಶಾಸಕರೇ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಏನು ಮಾಡುತ್ತಿದೆ? ಇಲಾಖೆ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಕಂದಾಯ, ಗಣಿ ಮತ್ತು ಪೊಲೀಸ್ ಇಲಾಖೆ ಮನಸು ಮಾಡಿದರೆ ಅಕ್ರಮ ತಡೆಗಟ್ಟಲು ಸಾಧ್ಯವಿದೆ ಎಂದರು. ಆಗ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಕೆಲವು ಸಮಾಜಘಾತುಕರು, ಬ್ಲಾಕ್‌ಮೇಲರ್‌ಗಳು ಸುಳ್ಳು ಆರೋಪ ಮಾಡುತ್ತಾ, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಬಿಂಬಿಸುತ್ತಿದ್ದಾರೆ.
ಪತಿ ಅಗಲಿಕೆ ನೋವಲ್ಲೇ ಜೀವಬಿಟ್ಟ ಪತ್ನಿ, ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ನಮ್ಮ ಅಧಿಕಾರಿಗಳು ಹಲವು ಬಾರಿ ದಾಳಿ ನಡೆಸಿ, ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಉತ್ತರಿಸಿದರು. ಸಚಿವರು ಮಾತನಾಡಿಕಂದಾಯ, ಗಣಿ ಮತ್ತು ಪೊಲೀಸ್ ಇಲಾಖೆ ಮನಸು ಮಾಡಿದರೆ ಅಕ್ರಮ ತಡೆಗಟ್ಟಲು ಸಾಧ್ಯವಿದೆ. ಮರಳು ಮಾಫಿಯಾ, ದಂಧೆಗಳು ನಡೆದರೆ ಸರ್ಕಾರದ ಬೊಕ್ಕಸಕ್ಕೆ ರಾಜಧನ ಎಲ್ಲಿಂದ ಬರುತ್ತದೆ. ಅಧಿಕಾರಿಗಳ ಕರ್ತವ್ಯ ಲೋಪದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ಜನರಿಗೆ ಕಡಿಮೆ ದರದಲ್ಲಿ ಮರಳು ಸಿಗಬೇಕು ಎಂದರೆ ವಾಮಮಾರ್ಗದ ಚಟುವಟಿಕೆಗೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.