ಚುನಾವಣೆಯ ವೀಕ್ಷಕರಾಗಿ ಶಾಸಕ ವೆಂಕಟೇಶ್ ನೇಮಕ
ತೆಲಂಗಾಣದ ಅಚ್ಚಂಪೇಟೆ ವಿಧಾನಸಭೆ ಚುನಾವಣೆಯ ವೀಕ್ಷಕರಾಗಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ವಿ.ವೆಂಕಟೇಶ್ ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಆದೇಶ ಜಾರಿಗೊಳಿಸಿದೆ
ಪಾವಗಡ: ತೆಲಂಗಾಣದ ಅಚ್ಚಂಪೇಟೆ ವಿಧಾನಸಭೆ ಚುನಾವಣೆಯ ವೀಕ್ಷಕರಾಗಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ವಿ.ವೆಂಕಟೇಶ್ ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಆದೇಶ ಜಾರಿಗೊಳಿಸಿದೆ.
ಇದರ ಬೆನ್ನಲ್ಲೇ ಮಂಗಳವಾರ ತೆಲಂಗಾಣದ ಅಚ್ಚಂಪೇಟ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ವಿಜಯಭೇರಿ ಯಾತ್ರಾ ಬೃಹತ್ ಬಹಿರಂಗ ಸಭೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರೇವಂತ್ ರೆಡ್ಡಿ ಜತೆ ಪಾವಗಡದ ಶಾಸಕ ಎಚ್.ವಿ.ವೆಂಕಟೇಶ್ ಭಾಗಿಯಾಗಿದ್ದರು.
ಅಚ್ಚಂಪೇಟ್ ಕ್ಷೇತ್ರದ ಸಮಾರಂಭದ ವಿಜಯಭೇರಿ ಯಾತ್ರಾ ಸಮಾರಂಭದ ವೇದಿಕೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಜಾರಿಗೆ ತಂದ ಜನಪರ ಯೋಜನೆ, ಎಐಸಿಸಿಯ ಸೋನಿಯ ಗಾಂಧಿ ಮತ್ತು ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಷ ಸಂಘಟನೆ ಮತ್ತು ಜನಪರ ಆಡಳಿತ ಕುರಿತು ಸಮಗ್ರವಾಗಿ ಮಾತನಾಡಿ, ಕಾಂಗ್ರೆಸ್ ಬೆಂಬಲಿಸುವ ಮೂಲಕ ಪಕ್ಷ ಪರ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ತೆಲುಗಿನಲ್ಲಿಯೇ ಕರೆ ನೀಡಿದ ಬಳಿಕ ಅಚ್ಚಂಪೇಟೆ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕುಡು ವಂಶಿಕೃಷ್ಣರ ಸಾಮಾಜಿಕ ಬದ್ಧತೆ ಹಾಗೂ ಜನಪರ ಸೇವೆ ಕುರಿತು ಸಮಗ್ರವಾಗಿ ತಿಳಿಸಿದರು.
ಅಚ್ಚಂಪೇಟ್ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕುಡು ವಂಶಿಕೃಷ್ಣ, ಪಾವಗಡ ಪುರಸಭಾ ಮಾಜಿ ಅಧ್ಯಕ್ಷ ಎ.ಶಂಕರ್ ರೆಡ್ಡಿ, ಪುರಸಭೆ ಸದಸ್ಯ ತೆಂಗಿನಕಾಯಿ ರವಿ, ಮುಖಂಡ ನಾಗರಾಜ್ ನಾಯಕ ಹಾಗೂ ಪಾವಗಡ ತಾಲೂಕಿನ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ
ಮೈಸೂರು : ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಪ. ಜಾತಿ ವಿಭಾಗದ ಸಂಚಾಲಕ ಕಾಳಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕೆಪಿಸಿಸಿ ಪ.ಜಾತಿ ವಿಭಾಗದ ಅಧ್ಯಕ್ಷರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನ ಅವರು ವರದಾನಪೆಟ್ ಕ್ಷೇತ್ರದ ವೀಕ್ಷಕರಾಗಿ ಎಐಸಿಸಿ ನೇಮಿಸಿದೆ. ಅವರೊಂದಿಗೆ ಕ್ಷೇತ್ರಾದ್ಯಂತ ಪ್ರವಾಸ ಮಾಡಿ, ಜನತೆ ಕಾಂಗ್ರೆಸ್ ಪರವಾಗ ಒಲವು ಹೊಂದಿರುವುದು ವ್ಯಕ್ತವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಗೆಲುವು ಗ್ಯಾರಂಟಿ
ಹೈದರಾಬಾದ್ (ನವೆಂಬರ್ 18, 2023): ಈಗಾಗಲೇ 6 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ, ಶುಕ್ರವಾರ ತೆಲಂಗಾಣ ಚುನಾವಣೆ ನಿಮಿತ್ತ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಈ ಹಿಂದೆ ಘೋಷಣೆ ಮಾಡಿದ್ದ 6 ಗ್ಯಾರಂಟಿಗಳು ಹಾಗೂ ಇತರ ಘೋಷಣೆಗಳಿವೆ. ‘ಅಭಯ ಹಸ್ತಂ’ ಎಂಬ 42 ಪುಟಗಳ ಪ್ರಣಾಳಿಕೆಯನ್ನು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
ಏನೇ ಆಗಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಜನರು ಮನಸ್ಸು ಮಾಡಿದ್ದಾರೆ. ಪ್ರಣಾಳಿಕೆಯು ನಮಗೆ ಗೀತಾ, ಕುರಾನ್ ಅಥವಾ ಬೈಬಲ್‌ನಂತಿದೆ. ನಾವು ಕರ್ನಾಟಕದಲ್ಲಿ ಈ ಭರವಸೆಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ. ಇಲ್ಲೂ ಅವುಗಳನ್ನು ಈಗ ಜಾರಿಗೆ ತರಲಾಗುತ್ತಿದೆ ಎಂದರು.
ಇದನ್ನು ಓದಿ: ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್: ಬಿಜೆಪಿ ಘೋಷಣೆ