ಮಂಗಳೂರು, ಉಡುಪಿ ಸೇರಿ ಕರಾವಳಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಜನರು 30 ದಿನಗಳ ಕಾಲ ಸ್ವಯಂ ಮನೆಯಲ್ಲಿ ಇರುವಂತೆ ಎಚ್ಚರಿಸಿದ್ದಾರೆ.

ಮಂಗಳೂರು(ಜು.01): ಮಂಗಳೂರು, ಉಡುಪಿ ಸೇರಿ ಕರಾವಳಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಜನರು 30 ದಿನಗಳ ಕಾಲ ಸ್ವಯಂ ಮನೆಯಲ್ಲಿ ಇರುವಂತೆ ಎಚ್ಚರಿಸಿದ್ದಾರೆ.

ಮಂಗಳೂರು ನಾಗರಿಕರಿಗೆ ಎಚ್ಚರಿಕೆಯಿಂದಿರಲು ಶಾಸಕ ವಾರ್ನಿಂಗ್ ನೀಡಿದ್ದು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಂಗಳೂರಿನಲ್ಲಿ ಕೋವಿಡ್ ಗಂಭೀರ ತಿರುವು ಪಡೆಯುತ್ತಿದೆ ಎಂದು ವಾರ್ನ್ ಮಾಡಿದ್ದಾರೆ.

ಫೇಸ್ ಬುಕ್ ನಲ್ಲಿ ಮಂಗಳೂರು ನಾಗರಿಕರಿಗೆ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದು, ನಾವು ಜಾಗರೂಕರಾಗಿ ಪ್ರತೀ ಕ್ಷಣವೂ ಅಲರ್ಟ್ ಆಗಿರಬೇಕು. ಮುಂದಿನ 30 ದಿನಗಳವರೆಗೆ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಇರಿ ಎಂದು ಸೂಚಿಸಿದ್ದಾರೆ.

ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಲು ಪ್ರಾರಂಭಿಸಿ ಎಂದು ಸಲಹೆ ನೀಡಿದ ಅವರು, ಸದ್ಯ ದಿನೇ ದಿನೇ ಕೋವಿಡ್ ಅಬ್ಬರಕ್ಕೆ ಮಂಗಳೂರು ನಲುಗುತ್ತಿದೆ. ಜಿಲ್ಲೆಯಾದ್ಯಂತ 100ಕ್ಕೂ ಅಧಿಕ ಕಂಟೈನ್ಮೆಂಟ್ ಝೋನ್‌ಗಳಿವೆ. ವೈದ್ಯರು, ಪೊಲೀಸ್ ಸೇರಿ ನಗರದ ಗಲ್ಲಿಗಲ್ಲಿಗೂ ಮಾರಕ ವೈರಸ್ ಹಬ್ಬುತ್ತಿದೆ ಎಂದಿದ್ದಾರೆ.