ಬಳ್ಳಾರಿ(ಜ.19): ನನ್ನ ಹಾಗೂ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಹೆಸರಲ್ಲಿ ಕಿಡಿಗೇಡಿಗಳು ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. 

ರಾಯಚೂರಿನ ವಿವಿಧ ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿರುವ ವಿಚಾರದ ಬಗ್ಗೆ ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಸೀದಿಗಳಿಗೆ ಬೆದರಿಕೆ ಪತ್ರ ಬರೆದಿರುವ ತನಿಖೆ ನಡೆಸಲು ಐಜಿ ನಜುಂಡ ಸ್ವಾಮಿ ಆದೇಶಿಸಿದ್ದಾರೆ. ರಾಯಚೂರು ಎಸ್ಪಿ ನೇತೃತ್ವದ ತಂಡ ರಚಿಸಿದ್ದಾರೆ ಎಂದು ಹೇಳಿದ್ದಾರೆ.

ಮಸೀದಿಗಳಿಗೆ ಬೆದರಿಕೆ ಪತ್ರ ಬರೆದ್ರಾ ಬಿಜೆಪಿ ಶಾಸಕರು?

ನಾನೂ ಕೂಡ ಈ ಸಂಬಂಧ ಗೃಹ ಸಚಿವ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ದೂರು ನೀಡುತ್ತೇನೆ. ಈಗಾಗಲೇ ಪೊಲೀಸರ ಜೊತೆ ಮಾತನಾಡಿದ್ದೇನೆ. ಕಿಡಿಗೇಡಿಗಳ ಕತ್ಯಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಹತ್ಯೆಗೆ ಯತ್ನದ ವಿಚಾರದ ಬಗ್ಗೆ ಮಾತನಾಡಿದ ಅವರು, ಧರ್ಮೋ ರಕ್ಷತಿ ರಕ್ಷಿತಃ ಧರ್ಮದ ಪರ ಹೋರಾಡುವರನ್ನ ಧರ್ಮವೇ ಕಾಪಾಡತ್ತದೆ.ಅವರಿಗೆ ಏನು ಆಗುವುದಿಲ್ಲ ಎಂದ ಸೋಮಶೇಖರ ರೆಡ್ಡಿ ಹೇಳಿದ್ದಾರೆ.