ಬಳ್ಳಾರಿ [ಸೆ.03]:  ಬಳ್ಳಾರಿ ನಗರದ ಗಣೇಶ ಕಾಲೋನಿಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದ್ದು, ಈ ಸಂಬಂಧ ಶಾಸಕ ಸೋಮಶೇಖರ್ ರೆಡ್ಡಿ  ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಘಟನೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಸೋಮಶೆಖರ್ ರೆಡ್ಡಿ ಆಕ್ರೋಶಗೊಂಡು ಬೆಳ್ಳಂಬೆಳಗ್ಗೆ ಕ್ಲಾಸ್ ತೆಗೆದುಕೊಂಡರು. 

ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಉಷಾರಾಣಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ. ಸದ್ಯ ಪಾಲಿಕೆ ಅಧಿಕಾರಿಗಳು ಮನೆಗೆ ನುಗ್ಗಿದ ಡ್ರೈನೇಜ್ ವಾಟರ್ ಕ್ಲೀನ್ ಮಾಡಿಸಲು ಮುಂದಾಗಿದ್ದಾರೆ. 

ಒಳಚರಂಡಿ ನೀರು ಮನೆಗೆ ನುಗ್ಗಿದ್ದು, ಕಟ್ಟೆಯ ಮೇಲೆ ಕುಳಿತುಕೊಳ್ಳುವಂತಾಗಿದೆ. ಪದೇಪದೇ ಇಲ್ಲಿ ಡ್ರೈನೇಜ್ ಸಮಸ್ಯೆ ತಲೆದೋರುತ್ತಿದ್ದು, ಸಮಸ್ಯೆಯ ಬಗ್ಗೆ ಇಲ್ಲಿನ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. 1978 ರಲ್ಲಿ ಚರಂಡಿ ನಿರ್ಮಾಣವಾಗಿದ್ದು, ಇದರ ನಿರ್ವಹಣೆ ಮಾತ್ರ ಒಂದು ಬಾರಿಯೂ ಆಗಿಲ್ಲ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.  "

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೇ ಚರಂಡಿ ವ್ಯವಸ್ಥೆಯನ್ನು ಅಪ್ ಗ್ರೇಡ್ ಮಾಡಿಲ್ಲ. ಜನ ಸಂಖ್ಯಾವಾರು ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದ್ದು, ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದ್ದಾಗಿ ಸೋಮಶೇಖರ್ ರೆಡ್ಡಿ ತಿಳಿಸಿದರು.