ಅಣ್ಣಿಗೇರಿ(ಜೂ.03): ನವಲಗುಂದ ಕ್ಷೇತ್ರದಲ್ಲಿ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪ್ಲ್ಯಾಂಟ್‌ ನಿರ್ಮಾಣಕ್ಕೆ ಮುಂದಾಗಲಿದ್ದೇವೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. 

ಪಟ್ಟಣದ ಆರಕ್ಷಕ ಇಲಾಖೆಯಲ್ಲಿ ನಿರಾಮಯ ಫೌಂಡೇಶನ್‌ ವತಿಯಿಂದ ಸ್ಟೀಮ್‌ಕಿಟ್‌ ವಿತರಿಸಿ ಮಾತನಾಡಿದರು. ನವಲಗುಂದ ತಾಲೂಕಿನಲ್ಲಿ 280 ಲೀಟರ್‌ ಉತ್ಪಾದನಾ ಹಾಗೂ 1 ಟನ್‌ ಸಂಗ್ರಹ ಸಾಮರ್ಥ್ಯದ ಟ್ಯಾಂಕರ್‌ ನಿರ್ಮಿಸುವುದಾಗಿ ಹೇಳಿದ್ದಾರೆ. 

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 34 ಆಕ್ಷಿಜನ್‌ ಕಾನ್ಸನ್‌ಟ್ರೇಟರ್‌ ವಿತರಿಸಲಾಗಿದೆ. ಅಣ್ಣಿಗೇರಿ ತಾಲೂಕಿಗೆ 10 ಲೀಟರ್‌ ಸಾಮರ್ಥ್ಯದ 9 ಆಕ್ಷಿಜನ್‌ ಕಾನ್ಸ್‌​ನಟ್ರೇಟರ್‌ ವಿತರಿಸಿದೆ. ತಾಲೂಕಿನಲ್ಲಿ 8 ಗ್ರಾಪಂ ವ್ಯಾಪ್ತಿಯಲ್ಲಿ ಕಾಳಜಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ. ಅಣ್ಣಿಗೇರಿಯಲ್ಲಿ 60 ಬೆಡ್‌ ವ್ಯವಸ್ಥೆಯ ಕೋವಿಡ್‌ ಕೇರ್‌ ಸೆಂಟರ್‌ ಜೊತೆಗೆ ಇನ್ನು 30 ಬೆಡ್‌ನ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಕ್ರಮಕೈಗೊಂಡಿದೆ.

ಧಾರವಾಡ: ಲಕ​ಮಾ​ಪು​ರ​ದಲ್ಲಿ ಕೊರೋನಾ ಮಧ್ಯೆ ಚಿಕೂನ್‌ ಗುನ್ಯಾ ಕಾಟ..!

ನಬಾರ್ಡ್‌ ಜಲಧಾರೆ ಯೋಜನೆ ಅಡಿ 1040 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಗ್ರಾಮಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಕೃಷಿ ಚಟುವಟಿಕೆಗೆ ಹಾಗೂ ಜನತೆಗೆ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರದ 400 ಕೋಟಿ, ರಾಜ್ಯ ಸರ್ಕಾರದ 640 ಕೋಟಿ ಅನುದಾನದಲ್ಲಿ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ದೊರೆತಿದ್ದು, ಚಾಲನೆ ನೀಡಲಾಗುವುದು ಎಂದರು.

ಈ ವೇಳೆ ತಹಸೀಲ್ದಾರ್‌ ಕೊಟ್ರೇಶ ಗಾಳಿ, ಮುಖ್ಯಾಧಿಕಾರಿ ಕೆ.ಎಫ್‌. ಕಟಗಿ, ಆರಕ್ಷಕ ಠಾಣಾಧಿಕಾರಿ ಎಲ್‌.ಕೆ. ಜೂಲಿಕಟ್ಟಿ, ಪಿಎಸ್‌ಐ ಬಿ.ಕೆ. ಹೂಗಾರ. ಕ್ರೇಡೆಲ್‌ ಮಾಜಿ ಆಧ್ಯಕ್ಷ ಷಣ್ಮುಖ ಗುರಿಕಾರ, ಶಿವಾನಂದ ಹೊಸಳ್ಳಿ, ಬಸವರಾಜ ಯಳವತ್ತಿ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ ನೇತೃತ್ವದ ಹುಬ್ಬಳ್ಳಿಯ ನಿರಾಮಯ ಫೌಂಡೇಶನ್‌ ಸಂಸ್ಥೆಯ ಪ್ರವೀಣ ಹಾಳದೋಟರ, ಅಶೋಕ ಕುರಿ, ಆನಂದ ಹಿರೇಗೌಡರ, ಆನಂದ ಜಕ್ಕನಗೌಡರ ಮಂಜುನಾಥ ಹಡಪದ ಇತರರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona