ಮೈಸೂರು(ಜ.05): ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ, ಯಡಿಯೂರಪ್ಪ ಆರೋಗ್ಯ ವಿಚಾರಿಸಿ, ಕುಶಲೋಪರಿ ಮಾತನಾಡಿದ್ದು ಸುದ್ದಿಯಾಗಿತ್ತು. ರಾಜಕೀಯವಲ್ಲದೆ, ರಾಜಕೀಯ ಮುಖಂಡರಿಗೆ ತಮ್ಮದೇ ವೈಯಕ್ತಿಕ ಜೀವನ, ಗೆಳೆತನ ಇರುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ನಡೆದಿದೆ.

ಕೋತಿ ಅಂತ್ಯ ಸಂಸ್ಕಾರಕ್ಕಾಗಿ ವಿದೇಶ ಪ್ರವಾಸವೇ ಮೊಟಕುಗೊಳಿಸಿ ಬಂದ ಶಾಸಕ ಸಾರಾ ಮಹೇಶ್ ಅವರ ಮಾನವೀಯ ಮುಖ ಸದ್ಯ ಸುದ್ದಿಯಾಗಿದೆ. ತಮ್ಮ ಪ್ರೀತಿಯ ಕೋತಿ ಚಿಂಟುವನ್ನು ನೋಡಲು ಶಾಸಕ ಸಾರಾ ವಿದೇಶದಿಂದ ಓಡಿಬಂದಿದ್ದಾರೆ.

ಮಂಗಳೂರು ಗಲಭೆ: ಆರೋಪಿ ಯಾರೇ ಆಗಿದ್ರೂ, ಸಾಕ್ಷಿ ಸಿಕ್ಕಿದ್ರೆ ಕಠಿಣ ಕ್ರಮ ಪಕ್ಕಾ..!

ಇದು ಶಾಸಕ ಸಾ.ರಾ.ಮಹೇಶ್ ಮತ್ತೊಂದು ಮುಖ. ಇದು ರಾಜಕೀಯ ಜಂಜಾಟಗಳ ನಡುವೆಯೂ ಮನ ಮಿಡಿಯುವ ಕಥೆ. ಮೂರು ವರ್ಷಗಳ ಹಿಂದೆ ಕೋತಿಯೊಂದು ಸಾರಾ ಮಹೇಶ್‌ ಅವರ ತೋಟದ ಮನೆ ಸೇರಿಕೊಂಡಿತ್ತು. ಸಾರಾ ಮಹೇಶ್ ಕುಟುಂಬಸ್ಥರು ಕೋತಿಗೆ ಚಿಂಟು ಎಂದು ಹೆಸರಿಟ್ಟು ಕೋತಿ ಮರಿಯನ್ನು ಸಲಹಿದ್ದರು.

ಸಾರಾ ಮಹೇಶ್ ಸಾಲಿಗ್ರಾಮಕ್ಕೆ ಬಂದರೆ ಚಿಂಟು ನೋಡಲು ಬರುತ್ತಿದ್ದರು. ಚಿಂಟು ಕೂಡ ಸಾರಾ ಮಹೇಶ್ ಬರುತ್ತಿದ್ದಂತೆಯೇ ಹೆಗಲು ಏರಿ ಖುಷಿಪಡುತ್ತಿತ್ತು. ಹುಟ್ಟೂರು ಸಾಲಿಗ್ರಾಮದಲ್ಲಿ ಚಿಂಟು ಇತ್ತೀಚೆಗಷ್ಟೇ ಮೃತಪಟ್ಟಿತ್ತು. ಸುದ್ದಿ ತಿಳಿದು ಶಾಸಕ ಸಾರಾ ಮಹೇಶ್ ಕೋತಿ ಅಂತ್ಯಕ್ರಿಯೆಗಾಗಿ ವಿದೇಶದಿಂದ ಓಡೋಡಿ ವಾಪಸ್ ಬಂದಿದ್ದಾರೆ.

ಅಮೆರಿಕದ ಎಂಜಿನಿಯರ್‌ನ ಹೈಟೆಕ್ ದೋಂಟಿ, ಅಡಿಕೆ ಕೊಯ್ಯುವುದಿನ್ನು ಕಷ್ಟವಲ್ಲ..!