ಬೆಂಗ​ಳೂ​ರು(ಫೆ.03): ನಿರ್ದಿಷ್ಟ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ, ಆದರೆ ಆಯ್ಕೆಗೆ ಅವಕಾಶ ಸಿಕ್ಕಲ್ಲಿ ಕ್ಷೇತ್ರದ ಜನರ ಆಸೆಯಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಆದ್ಯತೆ ನೀಡುವುದಾಗಿ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ.

ವೀರ​ಶೈವ ಲಿಂಗಾ​ಯತ ಯುವ​ಕರ ಸೇವಾ ಟ್ರಸ್ಟ್‌ ಕೆಂಗೇರಿ ಉಪ​ನ​ಗ​ರ​ದ​ಲ್ಲಿ ಏರ್ಪ​ಡಿ​ಸಿದ್ದ ಸಮಾ​ರಂಭ​ದ ಅಧ್ಯ​ಕ್ಷತೆ ವಹಿಸಿ ಮಾತ​ನಾ​ಡಿದ ಅವರು, ಯಶ​ವಂತ​ಪುರ ಕ್ಷೇತ್ರದ ಜನ, ಬೆಂಗ​ಳೂರು ಅಭಿ​ವೃದ್ಧಿ ಖಾತೆ ಪಡೆ​ಯಿರಿ ಎಂದು ಒತ್ತಾ​ಯಿ​ಸಿದ್ದಾರೆ. ಆದರೆ ನಾನು ಇದೇ ಖಾತೆ ಬೇಕು ಎಂದು ಪಟ್ಟು ಹಿಡಿ​ದಿಲ್ಲ. ಸಂಪುಟ ವಿಸ್ತರಣೆ ಕುರಿ​ತಂತೆ ಮುಖ್ಯ​ಮಂತ್ರಿಗಳ ಜತೆ ಮಾತು​ಕತೆ ನಡೆದಾಗಲೂ ಖಾತೆ​ಗಳ ಬಗ್ಗೆ ಚರ್ಚಿ​ಸಿ​ಲ್ಲ. ಆದರೆ ಆಯ್ಕೆ ಅವಕಾಶ ಸಿಕ್ಕರೆ ಬೆಂಗ​ಳೂರು ನಗರಾಭಿ​ವೃದ್ಧಿ ಖಾತೆಗೆ ಮೊದಲ ಆದ್ಯತೆ ನೀಡ​ಲಿ​ದ್ದೇ​ನೆ ಎಂದು ತಿಳಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆಯಲ್ಲಿ 13 ಜನರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಆದರೆ ರಾಣಿ​ಬೆ​ನ್ನೂರು ಶಾಸಕ ಆರ್‌. ಶಂಕರ್‌ ಹೆಸರು ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ಇಲ್ಲ, ಆದರೆ ಅವ​ರಿಗೆ ಯಾವುದೇ ಸಮಸ್ಯೆ ಆಗು​ವು​ದಿಲ್ಲ. ಮುಂಬ​ರುವ ದಿನ​ಗ​ಳಲ್ಲಿ ಶಂಕ​ರ್‌​ರನ್ನು ವಿಧಾ​ನ​ಪ​ರಿ​ಷತ್‌ ಸದ​ಸ್ಯ ಸ್ಥಾನಕ್ಕೆ ಆಯ್ಕೆ ಮಾಡಿ ಮಂತ್ರಿ ಮಾಡು​ವು​ದಾಗಿ ಯಡಿ​ಯೂ​ರಪ್ಪ ತಿಳಿ​ಸಿ​ದ್ದಾರೆ. ಈಗಾ​ಗಲೇ ಮುಖ್ಯ​ಮಂತ್ರಿ​ಗಳು ಕೊಟ್ಟ ಮಾತಿ​ನಂತೆ ನಡೆ​ದು​ಕೊಂಡಿ​ದ್ದಾರೆ. ಶಂಕರ್‌ ವಿಚಾ​ರ​ದ​ಲ್ಲಿಯೂ ನುಡಿ​ದಂತೆ ನಡೆ​ದು​ಕೊ​ಳ್ಳು​ತ್ತಾರೆ. ಆದ್ದ​ರಿಂದ ಶಂಕ​ರ್‌ಗೆ ಯಾವುದೇ ತೊಂದರೆ ಆಗು​ವು​ದಿಲ್ಲ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿದರು.