ಕೋವಿಡ್ ಕೇರ್ ಸೆಂಟರಲ್ಲಿ ಹೋಳಿಗೆ ತಯಾರಿಸಿದ ರೇಣುಕಾಚಾರ್ಯ
- ಕಳೆದ ಹಲವು ದಿನಗಳಿಂದ ತಮ್ಮ ಕ್ಷೇತ್ರದ ಕೋವಿಡ್ ಸೋಂಕಿತರ ನೆರವಿಗೆ ಅವಿರತವಾಗಿ ಶ್ರಮಿಸುತ್ತಿರುವ ಶಾಸಕ ರೇಣುಕಾಚಾರ್ಯ
- ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿಂದು ಹೋಳಿಗೆ ತಯಾರಿ
ದಾವಣಗೆರೆ (ಜು.05): ಕಳೆದ ಹಲವು ದಿನಗಳಿಂದ ತಮ್ಮ ಕ್ಷೇತ್ರದ ಕೋವಿಡ್ ಸೋಂಕಿತರ ನೆರವಿಗೆ ಅವಿರತವಾಗಿ ಶ್ರಮಿಸುತ್ತಿರುವ ಶಾಸಕ ರೇಣುಕಾಚಾರ್ಯ ಇದೀಗ ಹೋಳಿಗೆ ತಯಾರಿಸಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿಂದು ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಪತ್ನಿ
ಖುದ್ದು ಬಾಣಸಿಗರಾಗಿ ಹೋಳಿಗೆ ತಯಾರಿಸಿದರು.
ಕೋವಿಡ್‌ನಿಂದ ಅನಾಥವಾದ ಬಾಲಕಿ ದತ್ತು ಪಡೆಯಲು ರೇಣುಕಾಚಾರ್ಯ ದಂಪತಿ ನಿರ್ಧಾರ ...
ಸೋಂಕಿತರು ಹಾಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕು ಆಸ್ಪತ್ರೆ, ಲಸಿಕಾ ಕೇಂದ್ರ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಹೋಳಿಗೆ ತಯಾರಿದರು.
ಸುಮಾರು ಐದು ಸಾವಿರ ಜನರಿಗಾಗೀ ಹೋಳಿಗೆ ತಯಾರಿ ಮಾಡಿದ್ದು, ಎಲ್ಲರಿಗೂ ಹೋಳಿಗೆ ಊಟ ಹಾಕಲಾಗುತ್ತದೆ.
ಹಳೆದ ಅನೇಕ ದಿನಗಳಿಂದಲೂ ಕೋವಿಡ್ ಕೇರ್ ಸೆಂಟರಿನಲ್ಲಿಯೇ ವಾಸ್ತವ್ಯ ಹೂಡಿ ಹಗಲು ರಾತ್ರಿ ಸೋಂಕಿತರ ನೆರವಿಗೆ ನಿಂತಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.