ದಾವಣಗೆರೆ(ಏ.21): ಹೊನ್ನಾಳಿ ಕ್ಷೇತ್ರ ಶಾಸಕ ರೇಣುಕಾಚಾರ್ಯ ಅವರು ಸೋಮವಾರ ಬಸ್‌ ನಿಲ್ದಾಣದಲ್ಲಿ ನಸುಕಿನ ವೇಳೆ ಯೋಗ, ಧ್ಯಾನ ಮಾಡಿ ದಿನಚರಿ ಆರಂಭಿಸಿದ್ದು, ಯೋಗದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಲಾಕ್‌ ಡೌನ್‌ನಿಂದಾಗಿ ದೇಶವೇ ಬಿಕೋ ಎನ್ನುತ್ತಿರುವ ಹಿನ್ನೆಲೆ ರೇಣುಕಾಚಾರ್ಯ ಅವರು ಕೊರೋನಾ ವೈರಸ್‌ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ನಿತ್ಯವೂ ಹತ್ತಾರು ಹಳ್ಳಿ ಸುತ್ತಾಡಿ, ಸಾವಿರಾರು ಜನರಿಗೆ ವೈರಸ್‌ ತಡೆಗೆ ಮನವಿ ಮಾಡುತ್ತಿದ್ದಾರೆ.

ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌: ರೇಣು

ಸಂಕಷ್ಟದಲ್ಲಿರುವ ಜನರಿಗೆ ಕೈಲಾದ ನೆರವು ನೀಡುತ್ತ, ಕ್ಷೇತ್ರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಅವರು ಈ ಮಧ್ಯೆಯೂ ಹೊನ್ನಾಳಿ ಬಸ್‌ ನಿಲ್ದಾಣದಲ್ಲಿ ನಸುಕಿನ ವೇಳೆ ಯೋಗ ಮಾಡಿ ಗಮನ ಸೆಳೆದಿದ್ದಾರೆ.