ಕೋಲಾರ[ಸೆ. 05]  ಇಡಿ ಮುಖಾಂತರವೇ ಬಿಜೆಪಿಗೆ ಶಾಕ್ ಕೊಡಲು ಕಾಂಗ್ರೆಸ್- ಜೆಡಿಎಸ್ ಶಾಸಕರು ಸಿದ್ಧರಾಗಿದ್ದಾರೆ. ಹೊಸ ತಂತ್ರವೊಂದರ ಪ್ರಯೋಗ ಮಾಡಲು ಮುಂದಾಗಿದ್ದಾರೆ.

ಆಪರೇಷನ್ ಕಮಲ ನಡೆಸಿದ ವೇಳೆ ಕೋಲಾರ ಜೆಡಿಎಸ್ ಶಾಸಕರಿಗೆ ಬಿಜೆಪಿ  5 ಕೋಟಿ ಹಣ ನೀಡಿದ ಬಗ್ಗೆ ಇಡಿಗೆ ದೂರು ನೀಡುವ ಕಸರತ್ತು ಆರಂಭವಾಗಿದೆ. 

DKS ಬೆನ್ನಲ್ಲೇ HDKಗೆ ಸಮನ್ಸ್; ರಣಬೀರ್, ಆಲಿಯಾ ಸರ್ಪ್ರೈಸ್; ಇಲ್ಲಿವೆ ಸೆ.05ರ ಟಾಪ್ 10 ಸುದ್ದಿ!

ಆಫ್ ದಿ ರೆಕಾರ್ಡ್ ಎನ್ನುತ್ತಲೇ ಮಾತನಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ನಾಳೆ ನಾನು, ರಮೇಶ್ ಕುಮಾರ್ ಡಿಕೆಶಿ ಭೇಟಿಗೆ ದೆಹಲಿಗೆ ತೆರಳುತ್ತಿದ್ದೇವೆ. ಡಿಕೆ ಶಿವಕುಮಾರ್ ಎಂದಿಗೂ ತೆರಿಗೆ ವಂಚನೆ ಮಾಡೋರಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಐದಾರು ಜನ ಭೇಟಿ ಮಾಡಲಿದ್ದೇವೆ ಎಂದು ಹೇಳಿದರು.