ಚಿತ್ತಾಪುರ(ಜು.30):  ಕೊರೋನಾ ಸೊಂಕಿತರ ಸಂಖ್ಯೆ ಜಿಮ್ಸ್‌ ಮತ್ತು ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದ್ದು ಬೆಡ್‌ಗಳ ಕೊರತೆ ತಲೆದೋರಿದೆ. ಈ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಗಳಿಗೆ 650 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಅನುಕೂಲವಾಗುವಂತೆ 450 ಬೆಡ್‌ಗಳನ್ನು ಹಾಗೂ ಚಿತ್ತಾಪುರಕ್ಕೆ 100 ಬೆಡ್‌ಗಳನ್ನು ಹಾಗೂ ರಾಯಚೂರಿಗೆ 100 ಬೆಡ್‌ಗಳನ್ನು ತಲುಪಿಸಲಾಗಿದೆ. ಜಿಲ್ಲಾಡಳಿತಗಳು ಬೆಡ್‌ಗಳನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಕೊರೋನಾ ಅಟ್ಟಹಾಸ: ಚಿಕಿತ್ಸೆ ಸಿಗದೇ ಇಬ್ಬರು ಮಹಿಳೆಯರ ಸಾವು

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆರವರ ವತಿಯಿಂದ ಜಿಲ್ಲಾಡಳಿತಗಳಿಗೆ ತಲುಪಿಸಿರುವ ಈ ಬೆಡ್‌ಗಳನ್ನು ಕೋವಿಡ್‌ ಸಂಕಟ ಸೇರಿದಂತೆ ಬೇರೆ ಯಾವದೇ ಸಂದರ್ಭದಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಚಿತ್ತಾಪುರದಲ್ಲಿ ಕ್ಲಸ್ಟರ್‌ಗಳನ್ನು ಸ್ಥಾಪಿಸಿ ಅಲ್ಲಿ ಬೆಡ್‌ ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿನ ಒತ್ತಡ ಕಡಿಮೆ ಮಾಡುವ ಯೊಜನೆಯನ್ನು ರೂಪಿಸಲಾಗಿದೆ ಎಂದರು.