ಗಂಗಾವತಿ(ಜೂ.14): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಕಾರ್ಯ ಮಾಡಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

ನಗರದ ಶಾಸಕರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಎರಡನೇ ಬಾರ ಅಧಿ​ಕಾ​ರಕ್ಕೆ ಬಂದ ಮೋದಿ ಸರ್ಕಾರ ಒಂದನೇ ವರ್ಷ ಮಹತ್ತರವಾದ ಸವಾಲುಗಳಿಂದ ಕೂಡಿದೆ. ಜನರ ಸಂಕಷ್ಟಗಳ ನಿವಾರಣೆಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಜೊತೆಗೆ ರೈತರಿಗೆ 6 ಸಾವಿರ ನೇರವಾಗಿ ನೀಡುವ ಯೋಜ​ನೆ, ಆರ್ಟಿಕಲ್‌ 370ರ ರದ್ಧತಿ ಮತ್ತಿ​ತರ ಮಹ​ತ್ವದ ಯೋಜ​ನೆ​ಗ​ಳ​ನ್ನು ಜಾರಿ ಮಾಡಿ​ದ್ದಾ​ರೆ ಎಂದರು.

ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್‌ ರದ್ಧ​ತಿ, ಕರ್ತಾರ್‌ ಪು​ರ ಕಾರಿಡಾ​ರ್‌ ಯೋಜನೆ ಹೀಗೆ ಹಲವಾರು ಯೋಜನೆಯನ್ನು ಜಾರಿ ಮಾಡಿ​ದ್ದು ನರೇಂದ್ರ ಮೋದಿ ಅವರ ಸಾಧನೆ. ಗಂಗಾವತಿ ನಗರದಲ್ಲಿ ಅಮೃತ ಯೋಜನೆಗೆ 110 ಕೋಟಿ ಅನುದಾನ ಮತ್ತು ರೈಲ್ವೆ ಯೋಜನೆ ಜಾರಿಗೆ ತಂದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರಕಾರ ಜನಪರ ಕಾರ್ಯ ಮಾಡಿದೆ.
ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡುವದರ ಮೂಲಕ ಕೋವಿಡ್‌-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಕೊಪ್ಪಳ: ಪರೀಕ್ಷಾ ಸಿದ್ಧತಾ ಕಿರುಚಿತ್ರಕ್ಕೆ ಶಹಬ್ಬಾಸ್‌ ಎಂದ ಸಚಿವ ಸುರೇಶ ಕುಮಾರ್‌

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಿಗಿ, ಜಿಪಂ ಮಾಜಿ ಸದಸ್ಯರಾದ ಸಿದ್ದರಾಮಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಜಿ ನೀಲಪ್ಪ, ನಗರಸಭೆ ಮಾಜಿ ಸದಸ್ಯರಾದ ಹನುಮಂತಪ್ಪ ನಾಯಕ, ಉಪಾಧ್ಯಕ್ಷರಾದ ನಿರ್ಮಲಾ ಬಾಗೋಡಿ, ನಗರಸಭಾ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ, ರಮೇಶ ಚೌಡ್ಕಿ , ವಾಸುದೇವ ನವಲಿ, ನವೀನಕುಮಾರ, ಪಾಟೀಲ್‌, ನಗರಸಭೆ ಮಾಜಿ ಸದಸ್ಯರಾದ ರಾಚಪ್ಪ ಸಿದ್ದಾಪುರ, ಅಜಯ ಬಿಚ್ಚಾಲಿ, ನೀಲಕಂಠ ಕಟ್ಟಿಮನಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಸಿಂಗರಾವ್‌ ಕುಲಕರ್ಣಿ, ಮಹಿಳಾ ಜಿಲ್ಲಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪಾಂಜಲಿ ಗುನ್ನಾಳ, ಶಂಕುಂತಮ್ಮ ಕಲ್ಲೂರು, ಹುಲಿಗೆಮ್ಮ, ಶ್ರೀನಿವಾಸ ಧೂಳ ಸೇರಿದಂತೆ ಇತರರು ಇದ್ದರು.