'ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣ ಬೇಕೆ ಬೇಕು'

ಗಂಗಾವತಿ ವಾಣಿಜ್ಯ ಪ್ರದೇಶವಾಗಿ ಪ್ರಗತಿ ಸಾಧಿಸಿದೆ. ಕಾರಣ ಸರ್ಕಾರ ಉಡಾನ್‌ಯೋಜನೆಯಲ್ಲಿ ಜಿಲ್ಲೆಯ ಯಾವುದಾ​ದರೂ ತಾಲೂ​ಕಿ​ನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸ​ಬೇಕು| ಕೊಪ್ಪಳ ಸಮೀಪದಲ್ಲಿ ಬಲ್ಡೋಡಾ ಕಂಪನಿಯ ವಿಮಾನ ನಿಲ್ದಾಣವಿದ್ದು ಇದನ್ನು ಬಳಸಿಕೊಳ್ಳುವ ಮೂಲಕ ಉಡಾನ್‌ಯೋಜನೆ ಜಾರಿಗೆ ತರ​ಬೇಕು| ಉಡಾನ್‌ಯೋಜನೆ ಅನುಷ್ಠಾ​ನ​ಕ್ಕಾಗಿ ನಡೆದ ಸಭೆ​ಯಲ್ಲಿ ಬೇಡಿ​ಕೆ| 

MLA Paranna Munavalli Talks Over Koppal Airport grg

ಗಂಗಾ​ವ​ತಿ(ಫೆ.27): ಉಡಾನ್‌ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣ ಅವಶ್ಯವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.  

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಉಡಾನ್‌ಯೋಜನೆಯ ಅನುಷ್ಠಾ​ನ​ಕ್ಕಾಗಿ ಏರ್ಪ​ಡಿ​ಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ಗಂಗಾವತಿ ವಾಣಿಜ್ಯ ಪ್ರದೇಶವಾಗಿ ಪ್ರಗತಿ ಸಾಧಿಸಿದೆ. ಕಾರಣ ಸರ್ಕಾರ ಉಡಾನ್‌ಯೋಜನೆಯಲ್ಲಿ ಜಿಲ್ಲೆಯ ಯಾವುದಾ​ದರೂ ತಾಲೂ​ಕಿ​ನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸ​ಬೇಕು. ಕೊಪ್ಪಳ ಸಮೀಪದಲ್ಲಿ ಬಲ್ಡೋಡಾ ಕಂಪನಿಯ ವಿಮಾನ ನಿಲ್ದಾಣವಿದ್ದು ಇದನ್ನು ಬಳಸಿಕೊಳ್ಳುವ ಮೂಲಕ ಉಡಾನ್‌ಯೋಜನೆ ಜಾರಿಗೆ ತರ​ಬೇಕು ಎಂದ​ರು.

ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಮಾತನಾಡಿ, ಕೇಂದ್ರ ಸರ್ಕಾ​ರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಉಡಾನ್‌ಯೋಜನೆ ಜಿಲ್ಲೆಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದು ಮನವಿ ಮಾಡಿ​ದ​ರು.

ಮಾಜಿ ಸಚಿವ ಮಲ್ಲಿಕಾರ್ಜನ ನಾಗಪ್ಪ ಮಾತನಾಡಿ, ಜಿಲ್ಲೆಯ 5 ತಾಲೂಕಗಳಲ್ಲಿ 350 ಎಕರೆ ಪ್ರದೇಶ ವಿಮಾನ ನಿಲ್ದಾಣ ಸ್ಥಾಪನೆಗೆಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ತಾಲೂಕಗಳ ಮುಖಂಡರು ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಈ ಯೋಜನೆ ಜಾರಿಗೆ ತರುವ ಕಾರ್ಯದಲ್ಲಿ ತೊಡ​ಗ​ಬೇಕು ಎಂದ​ರು.

ಕೊಪ್ಪಳದಲ್ಲಿ ‘ವಿಮಾನ ನಿಲ್ದಾಣ’ ಜಾರಿಗೆ ಕೂಗು ಜೋರು..!

ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಗಂಟಿ ಪ್ರಾಸ್ತಾವಿಕ ಮಾತನಾಡಿ, ಈಗಾಗಲೇ ಉಡಾನ್‌ಯೋಜನೆಯ ಸ್ಥಾಪನೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಮುಖಂಡರ ಮಾರ್ಗದರ್ಶನ ಮತ್ತು ಸಹಕಾರ ಅವಶ್ಯವಾಗಿದೆ ಎಂದರು.

ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಜಿಲ್ಲೆ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಆನೆಗೊಂದಿ ಸೇರಿದಂತೆ ಹಂಪಿ ಐತಿಹಾಸಿಕ ಪ್ರದೇಶವಾಗಿದ್ದು ಇಲ್ಲಿಗೆ ಪ್ರವಾಸಿಗರು ಬರುತ್ತಿದ್ದಾರೆ. ಹೀಗಾಗಿ ಉಡಾನ್‌ಯೋಜನೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು ಎಂದು ಆಗ್ರ​ಹಿ​ಸಿ​ದ​ರು.

ಸಭೆಯಲ್ಲಿ ಮಾಜಿ ಶಾಸಕ ಜಿ. ವೀರಪ್ಪ, ತುಂಗಭದ್ರ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ನ್ಯಾಯವಾದಿ ಅಸೀಫ್‌ಅಲಿ, ಜೋಗದ ನಾರಾಯಣಪ್ಪನಾಯಕ, ಕಾರಟಗಿ ಪ್ರಹ್ಲಾದ ಶೆಟ್ಟಿ, ಮುಷ್ಠಿ ವಿರೂಪಾಕ್ಷಪ್ಪ, ಕೆಲೋಜಿ ಶ್ರೀನಿವಾಸಶ್ರೇಷ್ಠಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios