ಮಂಗಳೂರು(ಏ.25): ಮಂಗಳೂರಿನ ಸ್ಮಶಾನಗಳಲ್ಲಿ ಶವ ಸಂಸ್ಕಾರ ನಡೆಸಲು ಅವಕಾಶ ನೀಡದೆ ವಿರೋಧಿಸುವ ಜನತೆಯ ಪರವಾಗಿ ವರ್ತಿಸಿದ ಶಾಸಕರ ನಡವಳಿಕೆಗೆ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮಂಗಳೂರಿನ ಸ್ಮಶಾನಗಳಲ್ಲಿ ವೃದ್ಧೆಯ ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದಾಗ, ಸ್ಥಳೀಯ ಜನತೆ ಸ್ಮಶಾನಗಳಲ್ಲಿ ಸೇರಿ ವಿರೋಧ ವ್ಯಕ್ತಪಡಿಸಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಡಾ.ಭರತ್‌ ಶೆಟ್ಟಿಮತ್ತು ವೇದವ್ಯಾಸ ಕಾಮತ್‌ ಇವರು ಕೂಡ ಜನತೆಯ ವಿರೋಧಕ್ಕೆ ಬೆಂಬಲ ಸೂಚಿಸಿದ್ದರು.

ಸೋಂಕಿತೆಯ ಶವದೊಂದಿಗೆ ಸ್ಮಶಾನ ಸುತ್ತಿದ ಪೊಲೀಸರು..!

ಕೊರೋನಾ ಸೋಂಕಿನಿಂದ ಮೃತಪಟ್ಟಶವವನ್ನು ಸುಟ್ಟರೆ ವೈರಾಣು ಹಬ್ಬುವುದಿಲ್ಲ ಎಂಬ ಬಗ್ಗೆ ಜನತೆಗೆ ಮಾಹಿತಿ ನೀಡಿ ಶಂಕೆ ನಿವಾರಿಸುವ ಪ್ರಯತ್ನ ನಡೆಸುವ ಬದಲು ಜನತೆಯನ್ನು ಬೆಂಬಲಿಸಿದ್ದಕ್ಕೆ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಅಲ್ಲದೆ ಶಾಸಕ ಯು.ಟಿ. ಖಾದರ್‌ ಹಾಗೂ ಕೆಲವು ಹಿಂದೂ ಸಂಘಟನೆಗಳು ಕೂಡ ಶಾಸಕರ ನಿಲುವಿಗೆ ವಿರೋಧ ವ್ಯಕ್ತಪಡಿಸಿವೆ.

ಬಂಟ್ವಾಳ ಶಾಸಕರಿಗೆ ಪ್ರಶಂಸೆ

ಈ ಮಧ್ಯೆ ಮಂಗಳೂರು ಶಾಸಕರ ವಿರೋಧದ ನಡುವೆ ಮಾನವೀಯತೆ ನೆಲೆಯಲ್ಲಿ ತನ್ನ ಜಾಗದಲ್ಲಿ ಶವಸಂಸ್ಕಾರಕ್ಕೆ ಆಹ್ವಾನ ನೀಡಿದ ಬಂಟ್ವಾಳ ಶಾಸಕರ ನಿಲುವಿಗೆ ಬಿಜೆಪಿ ಫೇಸ್‌ಬುಕ್‌ ಸೇರಿದಂತೆ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆ ವ್ಯಕ್ತಗೊಂಡಿದೆ.

ಕೊರೋನಾ ಸಾವು: ಸ್ಮಶಾನದ ಬೀಗ ಒಡೆದು ಅಂತ್ಯಕ್ರಿಯೆ

ತಾನು ಪ್ರತಿನಿಧಿಸುವ ಕ್ಷೇತ್ರದ ಮಹಿಳೆಯಾದ್ದರಿಂದ ಆಕೆಯ ಶವಸಂಸ್ಕಾರಕ್ಕೆ ಜಾಗ ಸಿಗದಿದ್ದರೆ, ತನ್ನ ಸ್ವಂತ ಸ್ಥಳದಲ್ಲಿ ನಡೆಸುವಂತೆ ಶಾಸಕ ರಾಜೇಶ್‌ ನಾಯ್‌್ಕ ಅವರು ಜಿಲ್ಲಾಡಳಿತಕ್ಕೆ ವಿನಂತಿಸಿದ್ದರು. ಶಾಸಕರ ಈ ಮಾನವೀಯತೆಗೆ ಜಾಲತಾಣದಲ್ಲಿ ಭಾರಿ ಸ್ಪಂದನ ವ್ಯಕ್ತಗೊಂಡಿತ್ತು. ನನ್ನ ಕ್ಷೇತ್ರದ ವೃದ್ಧೆಗೆ ಶವಸಂಸ್ಕಾರಕ್ಕೂ ಅವಕಾಶ ನೀಡದ ದಯನೀಯ ಸ್ಥಿತಿ ಬರಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ಶಾಸಕ ರಾಜೇಶ್‌ ನಾಯ್‌್ಕ ಜಿಲ್ಲಾಡಳಿತಕ್ಕೆ ಸ್ಪಷ್ಟಪಡಿಸಿದ್ದರು.