ರೈತರ ಹುತಾತ್ಮ ದಿನಾಚರಣೆಗೆ ಶಾಸಕ ಮುನೇನಕೊಪ್ಪ ಗೈರು!
- ಒಡೆದು ಮೂರು ಬಾಗಿಲಾದ ನವಲಗುಂದ ರೈತ ಹೋರಾಟ ವೇದಿಕೆ.
- ರೈತರ ಹೆಸರಿನಲ್ಲಿ ಶಾಸಕರಾದ ಮುನೇನಕೊಪ್ಪ ನೋ ಹಾಜರ್
- ಸ್ವಕ್ಷೇತ್ರದ ರೈತರ ಹುತಾತ್ಮ ದಿನಾಚರಣೆಗೆ ಆಗಮಿಸದ ಬಿಜೆಪಿ ಶಾಸಕ ಮುನೇನಕೊಪ್ಪ
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜು.21): ನವಗುಂದ ಅಂದ ತಕ್ಷಣ ಮನಸ್ಸಿನಲ್ಲಿ ಬರುವುದು ಬಂಡಾಯದ ನಾಡು..ಎಸ್ ಧಾರವಾಡ ಜಿಲ್ಲೆಯ ನವಲಗುಂದ, ಮತ್ತು ನರಗುಂದ ತಾಲೂಕಿನಲ್ಲಿ ರೈತ ಹೋರಾಟಗಳು ನಡೆದ್ರೆ ಅದಕ್ಕೆ ಪರಿಹಾರ ಸಿಗೋವರೆಗೂ ಹೋರಾಟಗಳು ಹಿಂದೆ ಸರಿಯಲ್ಲ ಅನ್ನೋದಕ್ಕೆ ಇದೊಂದು ದೊಡ್ಡ ಉದಾಹರಣೆ ಎಂದು ಕರೆಯಬಹುದು 1980, ಜುಲೈ 21 ರಂದು ನವಲಗುಂದ(Navalgunda) ರೈತ ಬಸಪ್ಪ ಲಕ್ಕುಂಡಿ(Basappa Lakkundi) ಮತ್ತು ವೀರಪ್ಪ ಕಡ್ಲಿಕೊಪ್ಪ (Veerappa Kadlikoppa)ನರಗುಂದ ರೈತ ಇಬ್ಬರು ಸರಕಾರ ಗುಂಡಿಗೆ ಬಲಿಯಾಗಿದ್ದರು..ಅಂದಿನಿಂದ ಇಲ್ಲಿಯವರೆಗೆ ರೈತ ಹುತಾತ್ಮ ದಿನಾಚರಣೆಯನ್ನ ಆಚರಣೆ ಮಾಡುತ್ತಾ ಬಂದಿದ್ದಾರೆ..ಅವರಿಬ್ಬರು ರೈತರು ಹುತಾತ್ಮರಾಗಿ ಇಂದಿಗೆ 42 ವರ್ಷ ಕಳೆದಿದೆ..ಅಂದಿನಿಂದ ಇಂದಿನವರೆಗೂ ಜುಲೈ 21 ರಂದು ರೈತ ಹುತಾತ್ಮ ದಿನಾಚರಣೆ ಯನ್ನ ಆಚರಣೆ ಮಾಡುತ್ತಲೆ ಬಂದಿದ್ದಾರೆ..
ರೈತ ಬಸಪ್ಪ ಲಕ್ಕುಂಡಿ, ವಿರಪ್ಪ ಕಡ್ಲಿಕೊಪ್ಪ ಇಬ್ಬರು ರೈತರು ಪೋಲಿಸ್ ಗುಂಡಿಗೆ ಬಲಿಯಾಗಿದ್ದಾರೆ..ಇನ್ನು ಅಂದಿನಿಂದ ಎನೆ ರೈತ ಹೋರಾಟಗಳು ನಡೆದರೆ ಅದಕ್ಕೆ ನವಲಗುಂದ ಮತ್ತು ನರಗುಂದ ಎರಡು ತಾಲೂಕಿನಲ್ಲಿ ಅತಿ ಹೆಚ್ಚು ಹೋರಾಟಗಳು ನಡೆಯುತ್ತಲೆ ಬಂದಿವೆ..ಆದರೆ ಕಳೆದ 7 ವರ್ಷಗಳಿಂದ ಮಹದಾಯಿ ಹೋರಾಟ ಕೂಡಾ ಆರಂಭವಾಗಿದೆ..ಆದರೆ ಇನ್ನು ವರೆಗೂ ಸರಕಾರ ಮಹದಾಯಿ ಹೋರಾಟಕ್ಕೆ ಚಾಲನೆ ಕೊಡ್ತಿಲ್ಲ ಎಂದು ಹೋರಾಟಗಾರರು ಸರಕಾರ ಕ್ಕೆ ಹಿಡಿಶಾಪವನ್ನ ಹಾಕುತ್ತಿದ್ದಾರೆ.
ನರಗುಂದ: ಕುಂಟುತ್ತ ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ..!
ಇಂದು ನವಲಗುಂದ ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆಯನ್ನ ರೈತ ಪರ ಸಂಘಟನೆಗಳು ಆಚಸಿದವು.ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರೈತರು ಬಂದು ಹುತಾತ್ಮ ರಾದ ರೈತರ ನಾಡಿಗೆ ಬಂದು ಹೋರಾಟಕ್ಕೆ ಸಾಥ್ ಕೊಟ್ಟರು..ಮಹದಾಯಿ ಹೊರಾಟ(Mahadayi Protest)ಕ್ಕೆ ನಾಲ್ಕು ದಶಕ ಆರಂಭ ವಾಗಿದೆ..ಆ ದಿನವನ್ನ ರಾಜ್ಯ ರೈತ ಸಂಘಟನೆಗಳು ಆಚರಿಸುತ್ತಾ ಬಂದಿವೆ..ನಾವು ವಿಬಿನ್ನ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿವೆ..ಮಹದಾಯಿ ಹೋರಾಟ ಇರಬಹುದು, ಕಬ್ಬು ಬೆಳೆಗೆ ನಿಗದಿತ ಬೆಲೆ ಕೊಡಿಸುವ ಸಲುವಾಗಿ ಈ ಹೋರಾಟವನ್ನ ಮಾಡುತ್ತಾ ಬಂದಿವೆ..ರೈತ ಸಮುದಾಯವ ಹೋರಾಟದಲ್ಲಿ ಯಾವುದೆ ಬಿನ್ನಾಭಿಪ್ರಾಯಗಳಿಲ್ಲ, ಮೂರು ಕಡೆ ಸ್ಟೆಜ್ ಹಾಕಿರುವ ಉದ್ದೇಶ ಎಲ್ಲರ ಹೋರಾಟ ಒಂದೆ ಆಗಿರುತ್ತೆ..ಇವತ್ತಿಂದ ಸರಣಿ ಉಪವಾಸ ಸತ್ಯಾಗ್ರಹವನ್ನು ಆರಂಭ ಮಾಡಲಾಗುವುದು ಎಂದು ಮಹದಾಯಿ ಹೋರಾಟಗಾರ ಶಂಕರ ಅಂಬ್ಲಿ ಹೇಳಿದರು.
ಇದೆ ಸಮಯದಲ್ಲಿ ಸಿಎಂಗೆ ರಕ್ತದಲ್ಲಿ ಪತ್ರ ಮಹದಾಯಿ ಹೊರಾಟಗಾರರು ಪತ್ರ ಬರೆದರು. ಮಹದಾಯಿ ಕಳಸಾ ಬಂಡೂರಿ(Kalasa bandoori) ಯೋಜನೆ ಅನುಷ್ಠಾನ ಕುರಿತು ಪತ್ರ ಬರೆದು ಗಮನ ಸೆಳೆದರು ರೈತ ಮೈಲಾರಪ್ಪ ಕಬೇರ ಎಂಬ ರೈತನಿಂದ ಸಿಎಂ ಬೊಮ್ಮಾಯಿ(CM Basavaraj Bommai) ಗೆ ರಕ್ತದಲ್ಲಿ ಪತ್ರ ಬರದು ನೀವು ಈ ಹಿಂದೆ ಹೋರಾಟ ಮಾಡಿರುತ್ತಿರಿ ನಿಮಗೆ ನೆನಪಿಸುವ ಸಲುವಾಗಿ ಮತ್ತೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೆನೆ ಎಂದ ಅನ್ನದಾತ ಸಿಎಂಗೆ ಪತ್ರ ಬರೆದರು.
ಮಹದಾಯಿ ಜಾರಿಗಾಗಿ ಶೀಘ್ರದಲ್ಲಿ ಬೆಂಗಳೂರು ಚಲೋ: ಸೊಬರದಮಠ
ಇನ್ನು ಜಯ ಮೃತ್ಯುಂಜಯ ಸ್ವಾಮಿಜಿ(JayaMrityunjaya swamiji) ಮಾತನಾಡಿ ಮಹದಾಯಿ ಹೋರಾಟ 45 ವರ್ಷದ ಕನಸ್ಸಾಗಿದೆ..ಸಿಎಂ ನಮ್ಮ ಉತ್ತರ ಕರ್ನಾಟಕದವರೆ ಕನಸಾಗಿ ಇರೋ ಈ ಯೋಜನೆಯನ್ನು ನನಸಾಗಿ ಮಾಡಬೇಕು ಬಸವರಾಜ ಬೊಮ್ಮಾಯಿ ಅವರು ಮಾಡಬೇಕು.. ರಕ್ತದ ಮೂಲಕ ಪತ್ರ ಬರೆದು ಸಿಎಂ ಗಮನ ಸೆಳೆದಿದ್ದಾರೆ..ಮಹದಾಯಿ ಕಾಮಗಾರಿಯನ್ನ ಕೂಡಲೆ ಅನುಷ್ಠಾನಕ್ಕೆ ತರಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೋರಾಟದಲ್ಲಿ ಬಾಗಿಯಾದ ಬಳಿಕೆ ಮಾದ್ಯಮಗಳಿಗೆ ಹೇಳಿದೆರು...