ತುಮಕೂರು(ನ.26): ತುರುವೇಕೆರೆ ಶಾಸಕ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಅಪಘಾತವಾಗಿದ್ದವರಿಗೆ ನೆರವಾಗಿ ಮಾನವೀಯತೆ ಮೆರೆದ ಘಟನೆ ತುಮಕೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶಾಸಕರು ನೆರವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ತುರುವೇಕೆರೆ ಶಾಸಕ ಮಾನವೀಯತೆ ಮೆರೆದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಬೈಕ್ ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿದ ಶಾಸಕ ಮಸಾಲೆ ಜಯರಾಮ್ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಷ್ಣಪ್ಪ ತಾವು ಮಾಜಿ ಅನ್ನೋದು ಮರೆತಿದ್ದಾರೆ: ಮಸಾಲಾ ಜಯರಾಮ್‌ ವ್ಯಂಗ್ಯ

ತುರುವೇಕೆರೆ-ದಬ್ಬೆಘಟ್ಟ ರಸ್ತೆಯ ಸೂಳೆಕೆರೆ ಬಳಿ ದಂಪತಿ ಸಾಗುತಿದ್ದ ಬೈಕ್ ಅಪಘಾತವಾಗಿತ್ತು.  ರಂಗಪ್ಪ-ಪಂಕಜಮ್ಮ ದಂಪತಿ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದರು. ಈ ದಾರಿಯಲ್ಲಿ ಸಂಚರಿಸುತ್ತಿದ್ದ ಮಸಾಲಾ ಜಯರಾಮ್ ಅವರು ದಾರಿ ಮಧ್ಯೆ ವಾಹನ ನಿಲ್ಲಿಸಿ ಗಾಯಗೊಂಡವ ನೆರವಿಗೆ ಧಾವಿಸಿದ್ದಾರೆ.

ಅಂಬ್ಯುಲೆನ್ಸ್ ಕರೆ ಮಾಡಿ ಗಾಯಾಳುಗಳನ್ನ ತಕ್ಷಣ‌ ಆಸ್ಪತ್ರೆಗೆ ದಾಖಲಿಸಿ‌‌‌ ಚಿಕಿತ್ಸೆ ಕೊಡಿಸಿರುವ ಶಾಸಕರು ತಮ್ಮ ಕಾರ್ಯದ ಮೂಲಕ ಇತತರಿಗೆ ಮಾದರಿಯಾಗಿದ್ದಾರೆ. ಶಾಸಕರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

'ಬಿಜೆಪಿಗೆ ಜೆಡಿಎಸ್‌ ಬೆಂಬಲ ಸಿಗಲ್ಲ, ನಾನು ಆ ಪಕ್ಷದಲ್ಲಿದ್ದೆ, ನನಗೆ ಗೊತ್ತಿದೆ'