ಚಾಮರಾಜನಗರ(ಫೆ.15): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಯುಕ್ತವಾಗಿ ಬಿಳಿಗಿರಿ ರಂಗನಬೆಟ್ಟದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವದಲ್ಲಿ ಶಾಸಕ ಮಹೇಶ್‌ ಕಾಡಿನ ಮಕ್ಕಳೊಂದಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಬೆಟ್ಟದ ಗಂಗಾಧರೇಶ್ವರ ದೇಗುಲ ಮುಂಭಾಗದಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಮಹೇಶ್‌ ಚಾಲನೆ ನೀಡಿ, ಗಿರಿಜನರ ಗೊರುಕನ ನೃತ್ಯಕ್ಕೆ ಹೆಜ್ಜೆ ಹಾಕಿ ಕಲಾವಿದರ ಉತ್ಸಾಹ ಇಮ್ಮಡಿ ಗೊಳಿಸಿದ್ದಾರೆ.

ಸೀಮಂತಕ್ಕೆಂದು ಊರಿಗೆ ಕರೆಸಿ ಗೆಳೆಯನನ್ನೇ ಕೊಂದ..!

ಗೊರುಗೊರುಕ ಗೊರುಕನ ಹಾಡಿಗೆ ಡ್ಯಾನ್ಸ್‌ ಮಾಡುತ್ತಿದ್ದಂತೆ ಕಂಸಾಳೆ ಕಲಾವಿದರ ಕಂಸಾಳೆ ಹಿಡಿದು ಅವರೊಂದಿಗೂ ಹೆಜ್ಜೆ ಹಾಕಿದರು. ಸಂಜೆವರೆವಿಗೂ ವಿವಿಧ ಕಲಾತಂಡಗಳು ಗಿರಿಜನರ ಸಾಂಪ್ರದಾಯಿಕ ಹಾಡು- ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ವಿಜಿಕೆಕೆಯಲ್ಲಿರುವ ವಿದೇಶಿಗರು ಉತ್ಸವದಲ್ಲಿ ಪಾಲ್ಗೊಂಡಿರುವುದು ಮತ್ತೊಂದು ವಿಶೇಷವಾಗಿತ್ತು.